ಶತ್ರುವಿನೊಡನೆ ಯುದ್ಧ ಹೂಡುವ ಮುನ್ನ : ಚಾಣಕ್ಯನ 5 ನೀತಿ ಪಾಠಗಳು

ಅಪ್ರತಿಮ ರಾಜನೀತಿಜ್ಞ ಚಾಣಕ್ಯ, ಶತ್ರುಗಳನ್ನು ಹೇಗೆ ಮಣಿಸಬೇಕು ಎಂಬುದರ ಜೊತೆಗೆ, ಯುದ್ಧ ಹೂಡುವ ಮುನ್ನ ಯಾವುದೆಲ್ಲ ಸಂಗತಿಗಳ ಕಡೆ ಗಮನ ಹರಿಸಬೇಕೆಂದೂ ಸಲಹೆ ನೀಡುತ್ತಾನೆ. ಅಂತಹಾ ಸಲಹೆಗಳಲ್ಲಿ 5 ಇಲ್ಲಿವೆ:  1. ಕೆರಳಬೇಡಿ, ಸಂಯಮ ವಹಿಸಿ 2. ಅಧ್ಯಯನ ಮಾಡಿ, ತಂತ್ರ ಹೆಣೆಯಿರಿ 3. ಸಂದರ್ಭ ಬರುವವರೆಗೆ ಕಾಯಿರಿ 4. ದ್ವೇಷದಲ್ಲಿ ಕುರುಡಾಗಬೇಡಿ 5. ಕೊನೆಯ ಆಯ್ಕೆಯಾಗಿರಲಿ  

ಪುಟ್ಟ ಹಕ್ಕಿಯ ಕಥೆ ಮತ್ತು ಮೂರು ನೀತಿಗಳು : Tea time story

ಒಂದಾನೊಂದು ಕಾಲದಲ್ಲಿ ಒಂದು ಪುಟ್ಟ ಹಕ್ಕಿ ಇತ್ತು. ಚಳಿಗಾಲ ಹತ್ತಿರವಾಗುತ್ತಿದ್ದಂತೆಯೇ ಆ ಹಕ್ಕಿಯ ಗೆಳಯರೆಲ್ಲ ದಕ್ಷಿಣಕ್ಕೆ ಹಾರಿ ಹೋಗುವ ತೀರ್ಮಾನ ಮಾಡಿದರು. ಗೆಳೆಯರು ಎಷ್ಟು ತಿಳಿ ಹೇಳಿದರೂ ಆ ಪುಟ್ಟ ಹಕ್ಕಿ ಅವರೊಡನೆ ದಕ್ಷಿಣಕ್ಕೆ ಹೋಗಲು ಒಪ್ಪಲಿಲ್ಲ. ಕೊನೆಗೆ ನಿರುಪಾಯರಾದ ಬೇರೆಲ್ಲ ಹಕ್ಕಿಗಳು, ಪುಟ್ಚ ಹಕ್ಕಿಯನ್ನು ಅಲ್ಲೇ ಬಿಟ್ಟು ತಮ್ಮ ಪಾಡಿಗೆ ತಾವು ದಕ್ಷಿಣ ದಿಕ್ಕಿನತ್ತ ಹೊರಟು ಹೋದರು. ಕೆಲವೇ ದಿನಗಳಲ್ಲಿ ಚಳಗಾಲದ ಆಗಮನವಾಯಿತು. ಈ ಬಾರಿಯಂತೂ ಕೊರೆಯುವ ಚಳಿ. ಪುಟ್ಟ ಹಕ್ಕಿ, ಚಳಿಗೆ ನಡುಗತೊಡಗಿತು. ಹಕ್ಕಿಗೆ […]

ಅ ಈ ಕಥೆಯಲ್ಲಿ ನೀತಿಯನ್ನು ನೀವೇ ಹುಡುಕಿಕೊಳ್ಳಿ : ಅಧ್ಯಾತ್ಮ ಡೈರಿ

ಇದು ಎಷ್ಟಾಯಿತೆಂದರೆ, ಬೆಳಗಾಗುವ ಹೊತ್ತಿಗೆ ಊರ ಪಂಚಾಯ್ತಿ ಕಟ್ಟೆಯಲ್ಲಿ ಜನ ಸೇರಿದರು. ಭೀಮ್ಯಾನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು. ಮೊದಲು ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಆಮೇಲೆ ಮುತ್ತಿಗೆ ಹಾಕುವುದು, ಆಮೇಲೆ ಭೀಮ್ಯಾನ ಕೊಲೆಗಾರರ ಮೇಲೆ ಮುಗಿಬೀಳುವುದು – ಎಂದು ನಿರ್ಧಾರವಾಯಿತು ~ ಅಲಾವಿಕಾ ಒಮ್ಮೆ ಊರಿನ ಅಂಚಿನಲ್ಲೊಬ್ಬ ವ್ಯಕ್ತಿ ಅವಡುಗಚ್ಚಿಕೊಂಡು ಶಾಪ ಹಾಕುತ್ತಾ, ಆಗಾಗ ಕುತ್ತಿಗೆಗೆ ಸುತ್ತಿಕೊಂಡ ಟವಲಿನ ತುದಿಯಿಂದ ಕಣ್ಣೊರೆಸಿಕೊಳ್ಳುತ್ತಾ ಕುಳಿತಿದ್ದ. “ಪಾಪಿಗಳು ಅವನನ್ನು ಕೊಂದೇಬಿಟ್ಟರು! ಭೀಮ್ಯಾ…. ನೀನು ಕೈತಪ್ಪಿ ಹೋದಲ್ಲೋ….” ಎಂದು ಬಂಡೆಗಲ್ಲಿಗೆ […]