ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ… : ಅಧ್ಯಾತ್ಮ ಡೈರಿ

ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ  ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ ನಿಂದಕರಿಗೊಂದು ಗುಡಿಯನು ಕಟ್ಟಿ ಮನೆಮುಂದಿರಗೊಡಿರಿ… ನೀರು ಸಾಬೂನುಗಳಿಲ್ಲದೆಯೆ ನಿರ್ಮಲಗೊಳಿಸುವರು | ಕಬೀರಾ ನಿರ್ಮಲಗೊಳಿಸುವರು…. ‘ಕಬೀರ ಬೀರಿದ ಬೆಳಕು’ ಕ್ಯಾಸೆಟ್ಟಿನಲ್ಲಿ ಪುರುಷೋತ್ತಮಾನಂದ ಜಿ ಕಂಠ. ಸೀದಾ ಎದೆಯಾಳಕ್ಕಿಳಿದು […]

ನಾವು ಪ್ರೀತಿಸುವುದು…. : ಅರಳಿಮರ POSTER

“ನಾವು ಬದುಕನ್ನು ಪ್ರೀತಿಸುವುದು ಬದುಕಿಗೆ ಒಗ್ಗಿಕೊಂಡಿದ್ದೇವೆ ಎಂದಲ್ಲ, ಪ್ರೀತಿಗೆ ಒಗ್ಗಿಕೊಂಡಿದ್ದೇವೆ ಎಂದು” ಅನ್ನುತ್ತಾನೆ ಫ್ರೆಡ್ರಿಕ್ ನೀಷೆ.  ನೀಷೆ ಮಾತಿನಲ್ಲಿ ಎಷ್ಟು ಸತ್ಯವಿದೆ ನೋಡಿ! ನಮಗೆ ಬದುಕಲಿಕ್ಕೇನೂ ಪ್ರೀತಿ ಬೇಕಿಲ್ಲ. ಆದರೆ ಪ್ರೀತಿಗಾಗಿ ಪ್ರೀತಿ ಬೇಕು. ಪ್ರೀತಿಯ ಅನುಭೂತಿ ನಮಗೆಂಥ ಗುಂಗು ಹಿಡಿಸಿರುತ್ತದೆ ಎಂದರೆ, ಪ್ರೀತಿಸದೆ ನಾವು ಇರಲಾರೆವು ಅನ್ನುವಷ್ಟು!  ಪ್ರೀತಿಗಾಗಿ ನಾವು ಬದುಕುವುದಿಲ್ಲ. ಹಾಗೆ ಹೇಳುವವರು ನಿಜವನ್ನೇ ಹೇಳುತ್ತಾರ ಎಂದೇನೂ ಇಲ್ಲ. ಅದು ಅವರ ಪಾಲಿನ ಆ ಸಂದರ್ಭದ ಭಾವುಕ ಸತ್ಯವಷ್ಟೆ ಆಗಿರುತ್ತದೆ. ಆದರೆ ಪ್ರೀತಿಗಾಗಿ ನಾವು […]