ನೋವು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 15

ಆಮೇಲೆ ಹೆಣ್ಣು ಮಗಳೊಬ್ಬಳು ನೋವಿನ ಬಗ್ಗೆ ಹೇಳು ಎಂದಳು. ಅವನು ಉತ್ತರಿಸತೊಡಗಿದ. ನಿಮ್ಮ ತಿಳುವಳಿಕೆಯನ್ನು ಸುಖವಾಗಿ ಆವರಿಸಿಕೊಂಡಿರುವ ಚಿಪ್ಪನ್ನು ಒಡೆಯುವುದೇ, ನೋವು. ಹಣ್ಣಿನ ಹೃದಯವನ್ನು ಸೂರ್ಯನ ಎದುರು ನಿಲ್ಲಿಸಲು, ಹೇಗೆ ಅದರ ಸಿಪ್ಪೆಯನ್ನು ಸುಲಿಯಲೇಬೇಕಾಗುತ್ತದೆಯೋ ಹಾಗೆಯೇ ನೋವನ್ನು ಗ್ರಹಿಸಬೇಕು ನೀವು. ಬದುಕಿನಲ್ಲಿ ನಿತ್ಯ ನಡೆಯುವ ಪವಾಡಗಳಿಗೆ ನಿಮ್ಮ ಹೃದಯದ ಬೆರಗನ್ನು ನೀವು ಸಾಕ್ಷಿ ಮಾಡಿದ್ದೇ ಆದಲ್ಲಿ ನಿಮಗೇ ಗೊತ್ತಾಗುತ್ತದೆ ನೋವಿನ ಮಾಯೆ ಆನಂದಕ್ಕಿಂತ ಕಡಿಮೆಯೇನಲ್ಲ ; ಮತ್ತು ಭೂಮಿಯ ಮೇಲೆ ಹಾಯ್ದು ಹೋಗುವ ವಿವಿಧ ಋತುಮಾನಗಳನ್ನು ನೀವು […]