ನಸ್ರುದ್ದೀನನ ನ್ಯಾಯ : ಯಾರಿಗೆಷ್ಟು ಗೋಲಿ?

ಇಬ್ಬರು ಮಕ್ಕಳಿಗೆ 12 ಗೋಲಿಗಳಿದ್ದ ಒಂದು ಚೀಲ ದಾರಿಯಲ್ಲಿ ಸಿಕ್ಕಿತು. ಅವನ್ನು ಹೇಗೆ ಹಂಚಿಕೊಳ್ಳಬೇಕು ಎಂದು ಆ ಮಕ್ಕಳಿಬ್ಬರು ಜಗಳಾಡತೊಡಗಿದರು. ವಿಷಯ ತೀರ್ಮಾನವಾಗದೇ ಹೋದಾಗ, ಕೊನೆಗೆ ಮುಲ್ಲಾ ನಸ್ರುದ್ದೀನ ನನ್ನು ಜಗಳ ಬಗೆಹರಿಸುವಂತೆ ಕೇಳಿಕೊಂಡರು. ಮುಲ್ಲಾ ನಸ್ರುದ್ದೀನ : ಈ ಸಮಸ್ಯೆಯನ್ನು ಮನುಷ್ಯರು ಬಗೆಹರಿಸಿಕೊಳ್ಳುವಂತೆ ತೀರ್ಮಾನ ನೀಡಲೋ ಅಥವಾ ಭಗವಂತ ನಿರ್ಣಯಿಸುವಂತೆ ಆದೇಶ ಕೊಡಲೋ? ಮಕ್ಕಳು : ಭಗವಂತನ ಮಾತು ಯಾರೂ ಮೀರಲಿಕ್ಕಾಗುವುದಿಲ್ಲ. ಭಂಗವಂತ ತೀರ್ಪು ಕೊಡುವಂತೆಯೇ ತೀರ್ಮಾನ ಹೇಳು. ಮುಲ್ಲಾ ನಸ್ರುದ್ದೀನ ಒಮ್ಮೆ ಆ ಗೋಲಿಗಳನ್ನು […]

ಕಾಯ್ದೆ, ಕಾನೂನು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 13

  ನ್ಯಾಯವಾದಿಯೊಬ್ಬ ಕಾಯ್ದೆ, ಕಾನೂನುಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವನು ಉತ್ತರಿಸತೊಡಗಿದ. ನಿಯಮಗಳನ್ನು ಹುಟ್ಟುಹಾಕುವುದೆಂದರೆ, ನಿಮಗೆ ಅದೇನೋ ಬಹು ದೊಡ್ಡ ಖುಶಿ ಆದರೆ ಅವುಗಳನ್ನು ಮುರಿಯುವುದು ಇನ್ನೂ ದೊಡ್ಡ ಖುಶಿಯ ವಿಷಯ ನಿಮಗೆ. ಆಟ ಆಡುವ ಮಕ್ಕಳು ಸಮುದ್ರದ ದಂಡೆಯಲ್ಲಿ ಅಪಾರ ಜಾಗರೂಕತೆಯಿಂದ ಮರಳಿನ ಮನೆ ಕಟ್ಟುವ ಹಾಗೆ; ಮತ್ತು ನಗುನಗುತ್ತಾ ಅದನ್ನು ಮುರಿದುಬಿಡುವ ಹಾಗೆ. ಮರಳಿನ ಮನೆ ಕಟ್ಟುವಾಗ ನಿಮಗೆ ಬೇಕಾದಷ್ಟು ಮರಳು ಒದಗಿಸುವ ಸಮುದ್ರ, ನೀವು ಮನೆ ಮುರಿದಾಗ ನಿಮ್ಮೊಂದಿಗೆ, ತಾನೂ ನಕ್ಕು ಬಿಡುತ್ತದೆ. […]