ಎರಡು ಬಗೆಯ ಅಜ್ಞಾನಿಗಳು : ಶಿವೋsಹಂ ಸರಣಿ

ನಿಮ್ಮನ್ನು ಹೊಗಳುವಾಗ, ನಿಮ್ಮ ಗುಣಗಾನ ಮಾಡುವಾಗ, ನಿಮ್ಮನ್ನು ಮೆಚ್ಚಿಕೊಳ್ಳುವಾಗ ನೀವು ಅವೆಲ್ಲವೂ ನಿಮ್ಮ ದೇಹದ ಕಾರಣದಿಂದ ಅಂದುಕೊಳ್ಳುತ್ತೀರಿ. ಅದು ನಿಜವೇ ಆಗಿದ್ದಲ್ಲಿ ಚೇತನಾಶೂನ್ಯವಾದ ದೇಹವನ್ನು ನಿಮ್ಮ ಪ್ರೀತಿಪಾತ್ರರು ಅದೇಕೆ ಧಾವಂತದಲ್ಲಿ ವಿಸರ್ಜನೆ ಮಾಡಲು ಮುಂದಾಗುವರು? ನೀವೇ ಯೋಚಿಸಿ…. ~ Whosoever Ji ಜಗತ್ತಿನಲ್ಲಿ ಎರಡು ಬಗೆಯ ಅಜ್ಞಾನಿಗಳಿರುತ್ತಾರೆ. ಓದು ಬರಹ ಕಲಿತ ಅಜ್ಞಾನಿಗಳು ಮತ್ತು ಅನಕ್ಷರಸ್ಥ ಅಜ್ಞಾನಿಗಳು. ವಾಸ್ತವದಲ್ಲಿ ಓದು ಬರಹ ಕಲಿತವರ ಅಜ್ಞಾನವು ಅನಕ್ಷರಸ್ಥರ ಅಜ್ಞಾನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ! ಎಲ್ಲಿಯವರೆಗೆ ಕೇವಲ ಮಾಹಿತಿ ಹಾಗೂ ಸೂಚನೆಗಳನ್ನೆ ಜ್ಞಾನವೆಂದು […]

ಪಾನೀಯದ ಬುರುಡೆ, ದಾರಿಹೋಕ ಪಂಡಿತ ಮತ್ತು ರಾ-ಉಮ್

~ ಯಾದಿರಾ ಮರುಭೂಮಿಯ ನಡುವೆ ಇದ್ದ ಆಶ್ರಮಕ್ಕೆ ಬೇಲಿಯೇ ಇರಲಿಲ್ಲ. ಹಾಗಾಗಿ ದ್ವಾರದ ಪ್ರಶ್ನೆಯೇ ಇಲ್ಲ. ಯಾರು ಯಾವಾಗ ಬೇಕಾದರೂ ಒಳ ಬರಬಹುದಿತ್ತು. ಆಲ್ಲಿರುವ ಸೌಲಭ್ಯಗಳನ್ನು ಬಳಸಬಹುದಿತ್ತು. ಕ್ಯಾರವಾನುಗಳಲ್ಲಿ ಸಾಗುತ್ತಿದ್ದವರ ಮಟ್ಟಿಗೆ ಇದು ಅರವಟ್ಟಿಗೆಯಾಗುತ್ತಿತ್ತು. ಒಂಟೆಗಳಿಗೆ ಮೇವು ಸಿಗುವ ತಾಣವಾಗುತ್ತಿತ್ತು. ರಾತ್ರಿಯಾದರೆ ಉಳಿಯಲು ಧರ್ಮಛತ್ರವಾಗುತ್ತಿತ್ತು. ಒಂದು ದಿನ ದೊಡ್ಡದೊಂದು ಗ್ರಂಥ ಭಂಡಾರದೊಂದಿಗೆ ಸಾಗುತ್ತಿದ್ದ ಮಹಾ ಪಂಡಿತರೊಬ್ಬರು ಆಶ್ರಮ ಪ್ರವೇಶಿಸಿದರು. ಧರ್ಮಛತ್ರವೆಂದುಕೊಂಡು ಒಳಬಂದ ಅವರಿಗೆ ಅದೊಂದು ಆಶ್ರಮವೆಂದು ತಿಳಿಯಿತು. ಪಂಡಿತರು ಆ ರಾತ್ರಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿಯೇ ಬಿಡಬೇಕೆಂದು […]