ಪುರಂದರ ದಾಸರಿಗೆ ಮುಯ್ಯಿ ತೀರಿಸಿದ ಪಾಂಡುರಂಗ ವಿಠಲ!!

ನಿನಗೆ ಭಕ್ತ ವತ್ಸಲನೆಂಬ ಬಿರುದು ಗಳಿಸಬೇಕಾಗಿದ್ದರೆ, ನೀನು ಈ ಲೋಕದಲ್ಲಿ ನಮಗೆ ಕೊಟ್ಟಿರುವ ಹುಟ್ಟು ಎಂಬ ಬಂಧನದ ಕಂಕಣವನ್ನು ಕಿತ್ತು ಎಸೆಯೋ ಎಂದು ವಿಠಲನಿಗೇ ಸವಾಲು ಹಾಕಿದಂತಹ ಮಹಾತ್ಮರು ನಮ್ಮ ಪುರಂದರದಾಸರು! ಪುರಂದರ ದಾಸರು ಶರಣಾಗತ ಭಕ್ತರಷ್ಟೇ ಅಲ್ಲ, ತಮ್ಮ ಇಷ್ಟದೈವ ಪಾಂಡುರಂಗ ವಿಠಲನನ್ನು ಸಖನಾಗಿಯೂ ಕಂಡವರು. ಆದ್ದರಿಂದಲೇ ತಮ್ಮ ಕೀರ್ತನೆಗಳಲ್ಲಿ ತಿಳಿ ಹಾಸ್ಯ, ವಿಡಂಬನೆ, ನಿಂದಾಸ್ತುತಿಗಳನ್ನೂ ಬಳಸಿರುವರು. ಅಂತಹಾ ಹಲವು ರಚನೆಗಳಲ್ಲಿ ಈ ಕೀರ್ತನೆ ಸ್ವತಃ ಪುರಂದರ ದಾಸರ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಹೇಳುತ್ತದೆ ಎನ್ನಲಾಗಿದೆ.  […]