ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ ಈ ವಿಶಿಷ್ಟವಾದ ಪಂಗಡ ಬೆಳೆದುಕೊಂಡಿದೆ. ಇವರ ಸಂಖ್ಯೆ ಬಹಳ ಕಡಿಮೆ ಇರುವುದಾದರೂ ಬಂಗಾಳ ಪ್ರಾಂತ್ಯದಲ್ಲಿ ಬಾವುಲ್ಗಳು ಬೀರಿರುವ ಪರಿಣಾಮ ಗಣನೀಯವಾದುದು ~ ಚೇತನಾ ತೀರ್ಥಹಳ್ಳಿ ಬಾವುಲ್ಗಳು ಅಪ್ಪಟ ಮಣ್ಣಿನ ಮಕ್ಕಳು. ದೇಸೀತನ ಇವರಲ್ಲಿ ನೂರಕ್ಕೆ ನೂರು ಮೇಳೈಸಿರುತ್ತದೆ. ಅವರ ನಡೆ ನುಡಿಗಳೆಲ್ಲವೂ ಅತ್ಯಂತ ಪ್ರಾಮಾಣಿಕ, ನೇರ ಮತ್ತು […]