ತಾವೋ ತಿಳಿವು #26 ~ ಮೌಲ್ಯ ತನ್ನ ಪಟ್ಟ ಬಿಟ್ಟುಕೊಡುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ದೊಡ್ಡ ದೇಶವನ್ನು ಆಳುವುದು ಸಣ್ಣ ಮೀನನ್ನು ಹುರಿದಷ್ಟೆ ನಾಜೂಕಿನ ಕೆಲಸ. ದಾವ್ ನ ಹಾದಿಯಲ್ಲಿ ನಡೆಯುವ ಜೈಲರ್ ಇದ್ದರೆ ಅತೃಪ್ತ ಆತ್ಮಗಳು ಬಾಲ ಬಿಚ್ಚುವುದಿಲ್ಲ. ಅವುಗಳ ಅಶರೀರ ತಾಕತ್ತು ನಾಶವಾಗುವುದಿಲ್ಲವಾದರೂ, ಅವು ಸಾಮಾನ್ಯರಿಗೆ ಕಾಟ ಕೊಡುವುದಿಲ್ಲ. ಆಗ ಪವಿತ್ರ ಆತ್ಮಗಳಿಗೂ ಮೆರೆಯುವ ಅವಕಾಶ ಇರುವುದಿಲ್ಲ. ಯಾವಾಗ ಹೀಗಾಗುತ್ತದೋ ಆವಾಗ ಮೌಲ್ಯ ತನ್ನ ಪಟ್ಟ ಬಿಟ್ಟು ಕೊಡಲೇ ಬೇಕಾಗುತ್ತದೆ. ಅದೇ ದಾವ್ ನ ಆಶಯ.

ದಾವೂದನು ಕಿರಿಯನಾದ ಸಾಲೊಮನ್’ಗೆ ದೊರೆಯ ಪಟ್ಟ ಕಟ್ಟಿದ್ದು ಯಾಕೆ?

ಇಸ್ರೇಲಿನ ದೊರೆ ದಾವೂದನಿಗೆ ವಯಸ್ಸಾಯಿತು. ಕಣ್ಣುಗಳು ಮಂಜಾಗತೊಡಗಿದವು. ಇನ್ನೇನು ಜೀವ ತೊರೆಯುವ ಕಾಲ ಹತ್ತಿರ ಬಂದಿದೆ ಎಂದು ಅವನಿಗೆ ತಿಳಿಯಿತು. ದಾವೂದನಿಗೆ ಇಬ್ಬರು ಮಕ್ಕಳು. ಹಿರಿಯವನು ಅಡೊನಿಸ್, ಕಿರಿಯವನು ಸಾಲೊಮನ್. ಇವರಿಬ್ಬರಲ್ಲಿ ತನ್ನ ಉತ್ತರಾಧಿಕಾರಿಯನ್ನಾಗಿ ಯಾರನ್ನು ಆಯ್ಕೆ ಮಾಡಲಿ ಎಂಬ ಚಿಂತೆ ಅವನನ್ನು ಕಾಡತೊಡಗಿತು. ಅದಕ್ಕಾಗಿ ಅವನೊಂದು ಉಪಾಯ ಹೂಡಿದನು. ಒಂದು ಮೇಜಿನ ಮೇಲೆ ಕೆಂಪು ರೂಬಿ, ಖಡ್ಗ, ಕಿರೀಟಗಳನ್ನೂ; ಇನ್ನೊಂದು ಮೇಜಿನ ಮೇಲೆ ಒಂದು ರೊಟ್ಟಿ ಚೂರು, ಕೋಲು ಮತ್ತು ರೈತನ ರುಮಾಲನ್ನೂ ಇಟ್ಟನು. ಮತ್ತು […]