ಪದ್ಮಸೂತ್ರ ಮುದ್ರಿಸಿದ ತೆತ್ಸುಜೆನ್

ಶತಮಾನಗಳ ಹಿಂದೆ ಬುದ್ಧನ ಪದ್ಮ ಸೂತ್ರ ಚೀನಾ ಲಿಪಿಯಲ್ಲಿ ಮಾತ್ರ (ಭಾರತದ ಹೊರತಾಗಿ) ಲಭ್ಯವಿತ್ತು. ಅದನ್ನು ಜಪಾನಿ ಲಿಪಿಯಲ್ಲೂ ಮುದ್ರಿಸಬೇಕೆಂದು ಝೆನ್ ಸನ್ಯಾಸಿ ತೆತ್ಸುಜೆನ್‍ಗೆ ಬಯಕೆಯಾಯಿತು. ಇದರಿಂದ ತನ್ನ ಜನರು ತಮ್ಮ ಲಿಪಿಯಲ್ಲೇ ಅದನ್ನು ಸುಲಭವಾಗಿ ಓದಬಹುದಲ್ಲ ಎಂಬುದು ಅವನ ಆಲೋಚನೆ. ದೇಶದುದ್ದಗಲ ಸಂಚರಿಸಿದ ತೆತ್ಸುಜೆನ್ ಹತ್ತು ವರ್ಷಗಳ ಕಾಲ ಸತತವಾಗಿ ವಂತಿಗೆ ಸಂಗ್ರಹಿಸಿದ. ಕೊನೆಗೂ ಮರದ ಅಚ್ಚುಮೊಳೆಗಳನ್ನು ತಯಾರಿಸಲು ಅಗತ್ಯವಿದ್ದಷ್ಟು ಹಣ ಸಂಗ್ರಹವಾಯ್ತು. ಅದನ್ನು ಹಿಡಿದು ಮರಳುತ್ತಿರುವ ಸಮಯದಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ. ಹೊಟ್ಟೆಗಿಲ್ಲದ ಜನ […]