ಗುರು ಎಂಬ ಪರಿಕಲ್ಪನೆ ಶಿಷ್ಯನೆಂಬ ಪರಿಕಲ್ಪನೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ….

ಇದು ಮಾಹಿತಿಯ ಕಾಲ. ಗುರುವಿಗೆ ಕಂಪ್ಯೂಟರುಗಳನ್ನು ಪರ್ಯಾಯವೆಂದು ಭಾವಿಸುತ್ತಿರುವ ಕಾಲವಿದು. ಮಾಹಿತಿಯನ್ನು ತಾಂತ್ರಿಕ ಉಪಕರಣಗಳ ಮೂಲಕ ಪರಿಷ್ಕರಿಸುವ ಕ್ರಿಯೆಯಲ್ಲೇ ಜ್ಞಾನವನ್ನು ಕಾಣುತ್ತಿರುವ ಈ ಕಾಲದಲ್ಲಿ ಗುರು ಎಂಬ ಪರಿಕಲ್ಪನೆಯನ್ನು ಮರು ಶೋಧಿಸಬೇಕಿರುವುದು ಹಿಂದೆಂದಿಗಿಂತಂಲೂ ಹೆಚ್ಚು ಅಗತ್ಯ ~ ಅಚಿಂತ್ಯ ಚೈತನ್ಯ | ಇಂದು ಗುರುಪೂರ್ಣಿಮೆ (ಜುಲೈ 16) ಗುರುವನ್ನು ನೆನಪಿಸಿಕೊಳ್ಳುವ ಕ್ರಿಯೆಯೊಂದು ನಾಗರಿಕತೆಯಷ್ಟೇ ಹಳೆಯದಾದುದು. ‘ವಂಶಋಷಿಭ್ಯೋ ಗುರುಭ್ಯೋ’ ಎಂದು ಪ್ರತೀ ಮುಂಜಾನೆಯೂ ವಂಶಾವಳಿಯಲ್ಲಿರುವ ಗುರುಗಳನ್ನೆಲ್ಲಾ ಸ್ತುತಿಸಲಾಗುತ್ತದೆ. ಬೃಹದಾರಣ್ಯಕೋಪನಿಷತ್ತಿನ ಐದನೇ ಅಧ್ಯಾಯದ ಆರನೇ ಬ್ರಾಹ್ಮಣದಲ್ಲಿ ಪೌತಿಮಾಷಿಯ ಪುತ್ರನಿಂದ ಆರಂಭಗೊಂಡು ಆತ್ರೇಯನವರೆಗೂ ಆತ್ರೇಯನಿಂದ ಆಸುರಿಯವರೆಗೂ ವಿಲೋಮವಾಗಿ ಸಾಗುವ […]

ರಾಮರಾಜ್ಯದ ಪರಿಕಲ್ಪನೆ ವರ್ತಮಾನದಲ್ಲಿ ಈಡೇರಿಸಲು ಸಾಧ್ಯವೇ?

ಗಾಂಧೀಜಿ ಆಡಳಿತಕ್ಕೆ ಮಾತ್ರವಲ್ಲ, ಇಡಿಯ ರಾಷ್ಟ್ರಕ್ಕೆ ಶ್ರೀ ರಾಮನೇ ಪರಮಾದರ್ಶ ಎಂದು ಆಗಾಗ ಹೇಳುತ್ತಿದ್ದ ಉಲ್ಲೇಖಗಳಿವೆ  ~ ಆನಂದಪೂರ್ಣ ರಾಮ! ಈ ಹೆಸರಿನ ಜೊತೆಜೊತೆಗೆ ನಮ್ಮ ಮನದಲ್ಲಿ ಎರಡು ವಿಶೇಷಣಗಳು ಹಾದು ಹೋಗುತ್ತವೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮತ್ತು ಪ್ರಜಾರಂಜಕ ರಾಜಾರಾಮ ನಮ್ಮ ಕಲ್ಪನೆಯಲ್ಲಿ ತುಂಬಿಕೊಳ್ಳುತ್ತಾನೆ. ಬಹುಶಃ ಭಾರತದ ಜನಮಾನಸದಲ್ಲಿ ಅತ್ಯುತ್ತಮ ಆಡಳಿತದೊಂದಿಗೆ ನೆನಪಾಗುವ ಮೊದಲ ಹೆಸರು ರಾಮನದ್ದೇ. ಅಷ್ಟರಮಟ್ಟಿಗೆ ಭಗವಂತನೆಂಬ ಮಾನ್ಯತೆಗೆ ಪಾತ್ರನಾಗಿರುವ ಪುರಾಣೈತಿಹಾಸಿಕ ವ್ಯಕ್ತಿಯೂ ಆಗಿರುವ ರಾಮನ ಖ್ಯಾತಿ ಇದೆ. ಭಾರತದಲ್ಲಷ್ಟೇ ಅಲ್ಲ, ರಾಮನ […]