ವೇದಗಳಲ್ಲಿ ಲಕ್ಷ್ಮಿಯನ್ನು ‘ಭದ್ರೆ’ – ಅಂದರೆ ಮಂಗಳಕರಳು, ಒಳಿತನ್ನೇ ತರುವವಳು ಎಂದು ಬಣ್ಣಿಸಲಾಗಿದೆ.
ಸಂಪತ್ತಿನ ಈ ಆದಿ ಶಕ್ತಿಯನ್ನು ಪರಿಚಯಿಸುವ 6 ಚಿತ್ರಿಕೆಗಳು ಇಲ್ಲಿವೆ…
ವೇದಗಳಲ್ಲಿ ಲಕ್ಷ್ಮಿಯನ್ನು ‘ಭದ್ರೆ’ – ಅಂದರೆ ಮಂಗಳಕರಳು, ಒಳಿತನ್ನೇ ತರುವವಳು ಎಂದು ಬಣ್ಣಿಸಲಾಗಿದೆ.
ಸಂಪತ್ತಿನ ಈ ಆದಿ ಶಕ್ತಿಯನ್ನು ಪರಿಚಯಿಸುವ 6 ಚಿತ್ರಿಕೆಗಳು ಇಲ್ಲಿವೆ…
ಭಾರತೀಯ ಪೌರಾಣಿಕ ಪಾತ್ರಗಳ ಕಿರುಪರಿಚಯ ಸರಣಿ, ಇಂದಿನಿಂದ…. ಶಿವ ಭಕ್ತ ವೈಶ್ವಾನರನಿಗೆ ಶುಚಿಷ್ಮತಿ ಎಂಬ ಪತ್ನಿಯಲ್ಲಿ ಜನಿಸಿದ ಪುತ್ರನೇ ಅಗ್ನಿ. ಈತ ಶಿವನ ವರಪ್ರಸಾದವಾಗಿದ್ದರೂ ಬಾಲಾರಿಷ್ಟ ದೋಷದಿಂದ ಕೂಡಿದ್ದ. ಇದರಿಂದ ಪಾರಾಗಲು ಮಹಾದೇವನ ಮೊರೆಯನ್ನೇ ಹೋಗಬೇಕೆಂದು ನಾರದರು ತಿಳಿಸಲಾಗಿ ಸುದೀರ್ಘ ತಪಸ್ಸು ಕೈಗೊಂಡ. ದೇವರಾಜ ಇಂದ್ರ ವೈಶ್ವಾನರ ಪುತ್ರನ ತಪಸ್ಸಿನಿಂದ ಕನಲಿದ. ಅವನ ಬಳಿ ಬಂದು, “ನಿನಗೇನು ಬೇಕೋ ಕೊಡುತ್ತೇನೆ, ತಪಸ್ಸು ಸಾಕುಮಾಡು” ಎಂದು ಹೇಳಿದ. ಅದಕ್ಕೆ ಅವನು ಒಪ್ಪದಿರಲು, ಕೋಪದಿಂದ ವಜ್ರಾಯುಧ ಪ್ರಹಾರ ಮಾಡಿದ. ಆಗ […]
“ಅತಿಯಾದ ಪರಿಚಯವು ಅವಜ್ಞೆಗೆ ಕಾರಣವಾಗುತ್ತದೆ. ಹೆಚ್ಚು ಬಳಕೆಯಲ್ಲಿರುವ ವಸ್ತುವಿನ ಬೆಲೆ ತಿಳಿಯದೆ ಅನಾದರದಿಂದ ನಡೆಸಿಕೊಳ್ಳುತ್ತೇವೆ” ಅನ್ನುತ್ತದೆ ಒಂದು ಸುಭಾಷಿತ. ಅತಿ ಪರಿಚಯಾದವಜ್ಞಾ ಸಂತತ ಗಮನಾದನಾದರೋ ಭವತಿ| ಮಲಯೇ ಛಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನ ಕುರುತೇ|| ಪರಿಚಯವು ಅತಿಯಾದರೆ ಅನಾದರಣೆಯುಂಟಾಗುತ್ತದೆ. ಯಾವಾಗಲೂ ಸಂಪರ್ಕದಲ್ಲಿರುವುದರಿಂದ ಸಲುಗೆ ಹೆಚ್ಚಾಗಿ ಅಪರೂಪದ ಆದರವಿರುವುದಿಲ್ಲ. ಹೇಗೆಂದರೆ; ಯಾವಾಗಲೂ ಶ್ರೀಗಂಧದ ಮರಗಳಡಿಯಲ್ಲೇ ವಾಸಮಾಡುವ ಮಲಯ ಪರ್ವತದಲ್ಲಿ ಹಾಗೂ ಗುಡ್ಡಗಾಡುಗಳಲ್ಲಿ ವಾಸಿಸುವ ಜನರಿಗೆ ಅದರ ಬೆಲೆಯೇ ತಿಳಿದಿರುವುದಿಲ್ಲ. ಅವರು ಶ್ರೀಗಂಧದ ಮರವನ್ನೂ ಸೌದೆಯಾಗಿ, ಉರುವಲಾಗಿ ಬಳಸುತ್ತಾರೆ. ಹಾಗೆಯೇ ಕೆಲವರು ಸಾಧಕರ, ಮಹಾತ್ಮರ […]
ಆಗಸದಲ್ಲಿ ಹಗ್ಗದಾಟ ನಡೆಸುವ ಡೊಂಬರು ಅಮರರಾಗುವುದಿಲ್ಲ. ಮೋಡಗಳ ಕುದುರೆ, ಯೋಧರು ನಿಜವಾದ ಯುದ್ಧಕ್ಕೆ ಒದಗುವುದಿಲ್ಲ. ಹಾಗೆಯೇ ಶಾಬ್ದಿಕ ಜ್ಞಾನವು ಬರಿಯ ತೌಡು ಕುಟ್ಟಿದಂತೆ ನಿಷ್ಪಲವಾದುದು ಎಂದವನು ಟೀಕಿಸುತ್ತಿದ್ದ. ಅವನ ಭಗವದ್ಭಕ್ತಿ ಹಾಗೂ ಸಾಧನೆಯ ಪ್ರಾಮಾಣಿಕತೆ ಅವನ ಟೀಕೆಗಳಿಗೆ ತೂಕ ತಂದುಕೊಟ್ಟಿದ್ದವು. ಸಂತ ತುಕಾರಾಮ, ಭಕ್ತಿಚಳವಳಿಯ ಪರ್ವಕಾಲದಲ್ಲಿ, ಮರಾಠಾ ಪ್ರಾಂತ್ಯದಲ್ಲಿ ಆಗಿಹೋದ ಕ್ರಾಂತಿಕಾರಿ ಸಂತ. ಈತನ ಬದುಕೇ ಸ್ವಯಂಪಾಠ. ತನ್ನನ್ನು ಈತ ಜಗತ್ತಿನ ಪರೀಕ್ಷೆಗೆ ಅದೆಷ್ಟು ಒಡ್ಡಿಕೊಂಡನೆಂದರೆ, ಮತ್ತೆ ಮತ್ತೆ ಪರೀಕ್ಷೆಯ ಅಗ್ನಿಯಲ್ಲಿ ಹದಗೊಳ್ಳುತ್ತಾ ಪುಟವಿಟ್ಟ ಚಿನ್ನದಂತೆ ಪ್ರಖರವಾಗುತ್ತಲೇ […]
ಝೆನ್, ಸೂಫಿ, ಅವಧೂತ ಹಾಗೂ ಬೌದ್ಧ ಪರಂಪರೆಗಳ ಕುರಿತು ಪರಿಚಯ ಲೇಖನಗಳನ್ನು ಬರೆಯುವಂತೆ ನಮ್ಮ ಓದುಗರು ಕೇಳಿದ್ದಾರೆ. ಕಾಲಕ್ರಮದಲ್ಲಿ ಈ ಎಲ್ಲವುಗಳ ಕುರಿತು ಲೇಖನಗಳನ್ನು ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ. ಮೊದಲನೆಯದಾಗಿ ಝೆನ್ ಪರಂಪರೆ ಕುರಿತ ಲೇಖನ ಇಲ್ಲಿದೆ. ಇದು ಝೆನ್ ತಿಳಿವಿಗೆ ಪ್ರವೇಶಿಕೆಯಷ್ಟೇ. ಮುಂದಿನ ದಿನಗಳಲ್ಲಿ ಇತರ ಆಯಾಮಗಳನ್ನು ಪ್ರಕಟಿಸುವ ಪ್ರಯತ್ನ ಮಾಡಲಾಗುವುದು ~ ಅರಳಿ ಬಳಗ ಝೆನ್ ಅಂದರೆ ಅರಿವು. ಇದು ಕೊಡು – ಕೊಳ್ಳುವ ಸಂಗತಿಯಲ್ಲ. ಝೆನ್ ಪರಿಮಳದಂತೆ ಸ್ವಯಂವೇದ್ಯವಾದುದು…. ಝೆನ್ – ಇದು […]
ಜೀವನ ಪರ್ಯಂತ ನಿಮ್ಮ ಪರಿಚಯ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ದಿನವೊಂದರಲ್ಲೆ ಹಲವು ಬಾರಿ ನಿಮ್ಮ ಪರಿಚಯ ಬದಲಾಗುತ್ತದೆ. ನಿಮ್ಮ ಕೆಲಸ, ಹುದ್ದೆ, ಸಂಬಂಧಗಳಿಗೆ ತಕ್ಕಂತೆ ನಿಮ್ಮ ಪಾತ್ರಗಳು ಬದಲಾಗುತ್ತ ಇರುತ್ತವೆ, ಪರಿಚಯಗಳೂ. ಈ ಬದಲಾಗುತ್ತಿರುವ ಪರಿಚಯಗಳ ಕಂತೆಯೇ ನೀವಾಗಿದ್ದೀರೇನು? ವಾಸ್ತವದಲ್ಲಿ ನಿಮ್ಮ ಪರಿಚಯವೇನು ? ಈ ಎಲ್ಲ ಪರಿಚಯಗಳಿಂದ ಹೊರತಾಗಿ ನೀವೇನಾಗಿದ್ದೀರಿ? ಇವೆಲ್ಲ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವಂಥವು. ಆದರೆ ಮೂಲದಲ್ಲಿ ನೀವು ಯಾರಾಗಿದ್ದೀರಿ? ಏನಾಗಿದ್ದೀರಿ? ~ Whosoever Ji ಸುಷುಪ್ತಿಯಲ್ಲಿರಲು ಯಾರೂ ಭಯಪಡುವುದಿಲ್ಲ. ಪ್ರತಿಯೊಬ್ಬರೂ ಗಾಢ […]
ಪ್ರತಿಯೊಬ್ಬ ವ್ಯಕ್ತಿಯೂ ಯುದ್ಧದಲ್ಲಿ ತೊಡಗಿಕೊಂಡಿದ್ದಾನೆ. ಪ್ರತಿ ಕ್ಷಣ ನೀವು ರಣಾಂಗಣದಲ್ಲಿದ್ದೀರಿ, ಸಂಘರ್ಷ ನಡೆಸುತ್ತಿದ್ದೀರಿ. ನಿಮ್ಮ ಚಿತ್ತವೇ ಆ ರಣಾಂಗಣವಾಗಿದೆ ಮತ್ತು ಉಭಯ ಪಕ್ಷದಲ್ಲೂ ನೀವೇ ಇದ್ದುಕೊಂಡು ನಿಮ್ಮ ಮೇಲೆಯೇ ಯುದ್ಧ ನಡೆಸುತ್ತಿದ್ದೀರಿ. ಕೃಷ್ಣನು ಅರ್ಜುನನಿಗೆ ಏನೇ ಹೇಳಿರಲಿ, ಆದರೆ ಅದು ನಿಮ್ಮ ಅನುಭವವೇನೂ ಅಲ್ಲ. ಮತ್ತು ಧ್ಯಾನ ಮಾಡುವುದರಿಂದ ಅನುಭವ ಹುಟ್ಟಿಕೊಳ್ಳುತ್ತೆಂದು ನೀವು ತಿಳಿದಿದ್ದೀರಿ! ಹಾಗಾಗುವುದಿಲ್ಲ… ಧ್ಯಾನದ ಜೊತೆಜೊತೆಯಲ್ಲಿ ಅರಿವೂ ಬೆಳೆಯದೆ ಹೋದರೆ, ಅದು ಸಾಧ್ಯವೆ ಆಗುವುದಿಲ್ಲ ~ Whosoever Ji ಈ ದೇಹದ ಮೂಲಕ ಯಾವುದೆಲ್ಲ […]