ಪರಿಸರ, ಪರಿಣಾಮ ಮತ್ತು ಆಯ್ಕೆಯ ಅವಕಾಶ

ನಾವು ಕೆಡುಕರನ್ನು ಗುರುತಿಸುವಷ್ಟು ಸುಲಭವಾಗಿ ಸಜ್ಜನರನ್ನು ಗುರುತಿಸಲಾರೆವು. ಅಥವಾ ಕೆಡುಕುಗಳಿಗೆ ಹೆದರುವಷ್ಟು ಒಳಿತುಗಳಿಗೆ ಹಂಬಲಿಸಲಾರೆವು. ನಕಾರಾತ್ಮಕತೆಯ ಸಂಕೀರ್ಣ ಜಾಲ ನಮ್ಮೊಳಗೆ ಹಾಸುಹೊಕ್ಕಾಗಿಬಿಟ್ಟಿರುವುದು. ಇದಕ್ಕೆ ನಮ್ಮ ಸ್ವಾರ್ಥ ಹಾಗೂ ಮಿಥ್ಯಾಹಂಕಾರವೇ ಮೂಲ ಕಾರಣ ~ ಚೇತನಾ ತೀರ್ಥಹಳ್ಳಿ ಎರಡು ಸಹೋದರ ಗಿಳಿಗಳ ಕಥೆ ಕೇಳಿಯೇ ಇರುತ್ತೀರಿ. ಚಿಕ್ಕಂದಿನಲ್ಲಿ ಬೇರ್ಪಟ್ಟ ಗಿಳಿಗಳಲ್ಲಿ ಒಂದನ್ನು ಕಟುಕನೂ ಮತ್ತೊಂದನ್ನು ಋಷಿಯೂ ಸಾಕುತ್ತಾರೆ. ಕಟುಕನ ಮನೆಯಲ್ಲಿ ಬೆಳೆದ ಗಿಳಿ ಮನೆಯೆದುರು ಯಾರೇ ಬಂದರೂ `ಹಿಡಿಯಿರಿ! ಕಟ್ಟಿ ಹಾಕಿ… ಕೊಲ್ಲಿ!!’ ಅನ್ನುತ್ತ ಇರುತ್ತದೆ. ಮತ್ತು ಋಷಿಯ […]

ಪರಿಸರ ಕಾಳಜಿ : ಮೂಢನಂಬಿಕೆ ಧರ್ಮವಲ್ಲ, ವೈಜ್ಞಾನಿಕತೆಯೇ ಧರ್ಮ

ಪರಿಸರದ ವಿಷಯದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಧರ್ಮಭೀರುಗಳಾಗುವ ಅಗತ್ಯವಿದೆ. ನಮ್ಮ ಧಾರ್ಮಿಕತೆಯನ್ನು ಬಹಿರಂಗವಾಗಿ ಸಾಬೀತುಪಡಿಸುವ ತುರ್ತೂ ಇದೆ. ನಾವು ನಮ್ಮ ಧರ್ಮವನ್ನು ಗೌರವಿಸುವುದೇ ಆದರೆ, ನಮ್ಮ ಅನುಕೂಲಕ್ಕಾಗಿಯೇ ನಮ್ಮ ಪರಿಸರವನ್ನು ಕಾಪಾಡುವ ಸಂಕಲ್ಪ ತೊಡಬೇಕು ~ ಆನಂದಪೂರ್ಣ ಜೂನ್ ತಿಂಗಳು ಮುಗಿಯುತ್ತ ಬಂದಿದೆ. ನದಿಗಳಲ್ಲಿ ನೀರಿಲ್ಲ. ಈ ದುರಂತವನ್ನು ಕಂಡು ಮರುಗಲಾರದಂತೆ ನಮ್ಮ ಕಣ್ಣುಗಳೂ ಬತ್ತಿ ಹೋಗಿವೆ. ಅವಕ್ಕೆ ನೀರಿಲ್ಲದ ನದಿಗಳು ಕಾಣುತ್ತಿಲ್ಲ. ನಾವು ಏನನ್ನು ನೋಡಬೇಕು, ಏನನ್ನು ನೊಡಬಾರದು ಅನ್ನುವುದನ್ನೂ ಮಾರುಕಟ್ಟೆ ಮತ್ತು ರಾಜಕಾರಣಗಳು ನಿಯಂತ್ರಿಸುತ್ತಿವೆ. […]