ಸಮಸ್ಯೆ ಮತ್ತು ಪರಿಹಾರ : ಶಾಂತಿದೇವನ ನಿಶ್ಚಿಂತೆ ಸೂತ್ರ

“ಸಮಸ್ಯೆಗೆ ಪರಿಹಾರವಿದೆಯೇ? ಚಿಂತೆ ಬಿಡಿ. ಸಮಸ್ಯೆಗೆ ಪರಿಹಾರವಿಲ್ಲವೆ? ಚಿಂತೆ ಬಿಡಿ!” ಅನ್ನುತ್ತಾನೆ ಶಾಂತಿ ದೇವ. ನಾವೆಷ್ಟು ತಲೆಕೆಳಗು ಮಾಡಿ ನಿಂತರೂ ವಿಷಯ ಇರುವುದಿಷ್ಟೇ. ಪರಿಹಾರವಿದ್ದರೆ, ಅದನ್ನು ಹುಡುಕಿ, ಪ್ರಯತ್ನಿಸಿ ಮತ್ತು ಪ್ರಯೋಗಿಸಿ. ಪರಿಹಾರವಿಲ್ಲವಾದರೆ ಸುಮ್ಮನಿರಿ. ಎರಡೂ ಸಂದರ್ಭಗಳಲ್ಲೂ ಚಿಂತೆಗೇನು ಕೆಲಸ? ಅದು ನಿಮ್ಮ ಮನಸ್ಸನ್ನು ಕುಗ್ಗಿಸಿ ಜೀವನೋತ್ಸಾಹವನ್ನೆ ನುಂಗಿನೊಣೆಯುತ್ತದೆ. ಆದ್ದರಿಂದ, ಅನವಶ್ಯಕವಾದ, ನಿಷ್ಪ್ರಯೋಜಕವಾದ, ಮಾರಕವಾದ ಚಿಂತೆಯನ್ನು ದೂರವಿಡಿ. ಪ್ರಯತ್ನದಿಂದ ಸಿದ್ಧಿಸದೆ ಇರುವುದು ಯಾವುದೂ ಇಲ್ಲ. ಹಾಗೆಯೇ ಅರಿವಿನ ಮುಂದೆ ಯಾವ ಸಮಸ್ಯೆಯೂ ನಿಲ್ಲುವುದಿಲ್ಲ! ಆದ್ದರಿಂದ; ಶಾಂತಿದೇವನ ಸೂತ್ರವನ್ನು […]

ಕಾಮ, ಕ್ರೋಧ, ಲೋಭಗಳಿಂದ ಹೊರ ಬರಲು ಯಾವ ಮಾರ್ಗವಿದೆ ?

ನಾವು ಕಾಮಕ್ರೋಧಾದಿಗಳಿಂದ ಹೊರಗೆ ಬರಬೇಕೆಂದು ಯೋಚಿಸುವುದು ಅಷ್ಟು ಸರಿಯಾದ ವಿಧಾನವಲ್ಲ. ಅವುಗಳನ್ನು ನಮ್ಮಿಂದ ಹೊರಗೆ ಕಳುಹಿಸಬೇಕೆಂದು ಯೋಚಿಸುವುದು ಸರಿಯಾದ ವಿಧಾನ ~ ಚಿತ್ಕಲಾ “ಕಾಮ, ಕ್ರೋಧ, ಲೋಭಗಳಿಂದ ಹೊರಬರಲು ಯಾವ ಮಾರ್ಗವಿದೆ?”  ಈ ಪ್ರಶ್ನೆಯನ್ನು ಬಹಳಷ್ಟು ಜನ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಮೊದಲು, ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ. ನೀವು ಕಾಮ ಕ್ರೋಧಾದಿಗಳ ಒಳಗೆ, ಎಷ್ಟರಮಟ್ಟಿಗೆ ಕಳೆದುಹೋಗಿದ್ದೀರಿ? ಕಾಮ, ಕ್ರೋಧ ಮತ್ತು ಲೋಭವೆಂದರೆ ನಿಮ್ಮ ಪ್ರಕಾರ ಏನು? ಅದರಿಂದ ಹೊರಗೆ ಬರಲು ನೀವು ಎಷ್ಟು ತೀವ್ರವಾಗಿ ಬಯಸುತ್ತಿದ್ದೀರಿ? ಮತ್ತು ಕೊನೆಯದಾಗಿ, […]

ಚಹಾ ಲೋಟ ಮತ್ತು ಸಾಸಿವೆ ಹೊಲದ ವ್ಯಾಜ್ಯ : ಮಾಧವ ಲಾಹೋರಿ ಕಥೆಗಳು

ಚಹಾ ಕುಡಿದಾದ ಮೇಲೆ ಲಾಹೋರಿ, ಗೌಸ್ಪೀರ್ ಜೊತೆ ಊರಿನ ಸುದ್ದಿಯೆಲ್ಲಾ ಮಾತಾಡಿ ಮುಗಿಸಿದ. ಆದರೆ ಅವನಿಗೆ  ಚಹಾ ಕುಡಿ ಅಂತ ಮಾತ್ರ ಹೇಳಲೇ ಇಲ್ಲ! ~ ಆನಂದಪೂರ್ಣ ಒಮ್ಮೆ ಮಾಧವ ಲಾಹೋರಿ ತನ್ನ ಮನೆಯ ಜಗಲಿಯಲ್ಲಿ ಹುಕ್ಕಾ ಸೇದುತ್ತ ಕುಳಿತಿದ್ದ. ದಿನಾಲೂ ಹರಟೆ ಹೊಡೆಯಲು ಬರುವ ಪಕ್ಕದ ಮನೆಯ ಗೌಸ್ಪೀರ್ ಅವತ್ತು ಪೆಚ್ಚುಮುಖ ಹಾಕಿಕೊಂಡು ಬಂದ. ಅದೇ ಮುಖ ಹೊತ್ತು ಲಾಹೋರಿಯ ಮುಂದೆ ಕುಳಿತ. ಮಾಧವ ಲಾಹೋರಿ ಅದನ್ನು ನೋಡಿದರೂ ಕ್ಯಾರೇ ಅನ್ನಲಿಲ್ಲ. ಹಾಗೇ ಸ್ವಲ್ಪ ಹೊತ್ತು […]

ಸಮಸ್ಯೆಯ ಹೊರಗೆ ನಿಂತು ನೋಡಿ : ಅರಳಿಮರ ಸಂವಾದ

ನಾವು ಸಮಸ್ಯೆಯೊಳಗೆ ಇಳಿದುಬಿಟ್ಟರೆ ಅದರ ವ್ಯಾಪ್ತಿ ನಮಗೆ ತಿಳಿಯುವುದಿಲ್ಲ. ಅದನ್ನು ಹೊರಹಾಕುವ ಧಾವಂತದಲ್ಲಿ ಮತ್ತೇನನ್ನಾದರೂ ಕಳೆದುಕೊಳ್ಳುತ್ತೇವೆಯೋ ಅನ್ನುವ ಚಿಂತೆ ನಮ್ಮನ್ನು ಕಾಡತೊಡಗುತ್ತದೆ ~ ಚಿತ್ಕಲಾ ಬೇರೆಯವರ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಹೇಳುವ ನನಗೆ, ನನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನೇ ಪರಿಹಾರ ಹೇಳುವ ಸ್ಥಾನದಲ್ಲಿ ಇರುವುದರಿಂದ, ಬೇರೆಯವರನ್ನು ಕೇಳಲು ಮನಸ್ಸು ಬರುತ್ತಿಲ್ಲ. ಏಕೆ ಹೀಗಾಗುತ್ತದೆ? ಇದು ಹೆಸರು ಹೆಳಲು ಇಚ್ಛಿಸದ, ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾಗಿರುವ ಅರಳಿಮರ ಓದುಗರೊಬ್ಬರ ಪ್ರಶ್ನೆ. ಸರಿಯಾಗಿ ಗಮನಿಸಿದರೆ, ಈ ಪ್ರಶ್ನೆಯಲ್ಲೇ ಉತ್ತರವಿದೆ. […]

ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….

ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತೇವೆ! ~ ಅಲಾವಿಕಾ ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ. ಮನುಷ್ಯನ ಮನಸ್ಥಿತಿಯನ್ನು ಅವಲಂಬಿಸಿದ ಒಂದು ಮಿಥ್ಯಾವಸ್ಥೆಯದು. ವಾಸ್ತವದಲ್ಲಿ ಸಮಸ್ಯೆ ಎಂಬುದೇ ಇಲ್ಲ. ಅದನ್ನು ನಾವೇ ಹುಟ್ಟುಹಾಕಿಕೊಳ್ಳುತ್ತೇವೆ. ನಾವು ಅವಕಾಶ ಮಾಡಿಕೊಡದ ಹೊರತು ಯಾವ ಸಂಗತಿಯೂ ನಮ್ಮನ್ನು ಬಾಧಿಸಲಾರವು. ಆದ್ದರಿಂದ ಸಮಸ್ಯೆಗಳು ತಲೆದೋರಿದಾಗ ಅವುಗಳ ಬೇರು ನಮ್ಮೊಳಗೇ ಇದೆ […]

ತಾವೋ ತಿಳಿವು #36 ~ ಎಲ್ಲರಂಥವನಲ್ಲ ನಾನು….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನಿನ್ನ ದುಃಖಕ್ಕೆ ಪರಿಹಾರವೇ ಇಲ್ಲ ಎನ್ನುವುದನ್ನ ಕಂಡುಕೊಂಡಾಗಲೇ ನೀನು ಪರಮ ಸುಖಿ. ತಲೆಬಾಗಿ ಹೂಂ ಗುಡುವುದಕ್ಕೂ , ತಲೆಯೆತ್ತಿ ಹೂಂ ಗುಡುವುದಕ್ಕೂ ಏನು ವ್ಯತ್ಯಾಸ? ಗೆಲುವು, ಸೋಲುಗಳ ನಡುವೆ? ಅವರ ಹೂಂ, ನಿನ್ನ ಹೂಂ ಆಗಲೇಬೇಕೆ? ಅವರು ಉಹೂಂ ಎಂದರೆ, ನೀನೂ ? ಎಂಥ ನಗೆಪಾಟಲಿನ ಸಂಗತಿ. ಅವರು ಯುದ್ಧಕ್ಕೆ ಹೊರಟವರಂತೆ ಉತ್ತೇಜಿತರು ನನಗೆ ಆ ಸಂಭ್ರಮವಿಲ್ಲ ನಿರ್ಲಿಪ್ತ ನಾನು ಇನ್ನೂ ನಗು ಕಲಿಯದ […]