ಕನ್ನಡದ ಪ್ರಾಚೀನ ಪಾಕ ಶಾಸ್ತ್ರ ಕೃತಿಗಳು

ಅಡುಗೆ ಮಾಡುವ ಪ್ರಕ್ರಿಯೆ ವಿಜ್ಞಾನವೂ ಹೌದು ಅದೊಂದು ಕಲೆಯೂ ಹೌದು. ಆರೋಗ್ಯ ರಕ್ಷಣೆಗೆ ದಿವ್ಯೌಷಧವೂ ಹೌದು. ಹಾಗೆಂದೇ ನಮ್ಮ ಪೂರ್ವಜರು ಈ ಬಹುಆಯಾಮಗಳ ಪ್ರಕ್ರಿಯೆಗೊಂದು ಶಾಸ್ತ್ರವನ್ನೇ ರೂಪಿಸಿದ್ದರು.  ನವ ಕವೀಶ್ವರ ವಿಕಸಿತಾನನ ಘಟಂಗಳೊಳು ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು ತವೆ ಪಾಕಮಂ ಮಾಡಿ ರಸಿಕಜನಸಂತತಿಯ ಕಿವಿಗೆ ತೀವುವ ಭಾರತೀದೇವಿಯಂ ನೆನೆದು ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು ~ ಇದು ಸೂಪಶಾಸ್ತ್ರದ ಆರಂಭದಲ್ಲಿ ಮೂರನೆಯ ಮಂಗರಸನು ದೇವಿ ಸರಸ್ವತಿಯನ್ನು ಸ್ತುತಿಸಿರುವ ಪರಿ. […]