ಸಕಲ ಧರ್ಮಗಳ ಸಾರ ಈ ಸುಭಾಷಿತ : ಅರಳಿಮರ POSTER

ಈ ಶ್ಲೋಕ ಉತ್ತರಾರ್ಧದಲ್ಲಿ ಸಕಲ ಧರ್ಮ ಸಾರವಿದೆ. “ಪರೋಪಕಾರವೇ ಪುಣ್ಯ, ಪರಪೀಡೆಯೇ ಪಾಪ!” ಇದಕ್ಕಿಂತ ಉತ್ತಮವಾದ ಬೋಧನೆ ಯಾವುದಿದೆ!? ಶ್ಲೋಕಾರ್ಧೇನ ಪ್ರವಕ್ಷಾಮಿ, ಯದುಕ್ತಂ ಗ್ರಂಥಕೋಟಿಭಿಃ | ಪರೋಪಕಾರಃ ಪುಣ್ಯಾಯ, ಪಾಪಾಯ ಪರಪೀಡನಂ || ಒಮ್ಮೆ ಒಬ್ಬನು ವ್ಯಾಸರ ಬಳಿ ಬಂದು ಹದಿನೆಂಟು ಪುರಾಣಗಳನ್ನು ಓದಿದರೂ, ಶ್ರುತಿ ಸ್ಮೃತಿ ಗಳನ್ನು ಅಭ್ಯಾಸ ಮಾಡಿದರೂ ಧರ್ಮ ಸೂಕ್ಷ್ಮವನ್ನು ತಿಳಿಯಲು ಸಾಧ್ಯವಾಗಲಿಲ್ಲ ಎಂದನು. ಅದಕ್ಕೆ ವ್ಯಾಸರು ಅರ್ಧ ಶ್ಲೋಕದಲ್ಲಿ ನಾನು ಅವೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಮೇಲಿನ ಶ್ಲೋಕವನ್ನು […]

ನಾವು’ಏನು ಅಲ್ಲವೋ’ ಅದನ್ನು ಬದುಕುವ ಪ್ರಯತ್ನವೇ ನಮ್ಮೆಲ್ಲ ತಪ್ಪುಗಳಿಗೆ ಕಾರಣ

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು.  ~ ವಿದ್ಯಾಧರ ತಪ್ಪು ಮಾಡದವರು ಯಾರಿದ್ದಾರೆ!? ತಪ್ಪುಗಳು ಕಲಿಕೆಯ ವಿಧಾನವೂ ಆಗಿದೆ. ಆದರೆ ಬಹಳ ಬಾರಿ ತಪ್ಪುಗಳು ನಮ್ಮನ್ನು ಅಪಾಯಕ್ಕೆ ನೂಕಿಬಿಡುತ್ತವೆ. ಅಂತಹ ತಪ್ಪನ್ನು ಮಾಡಿದ ಪರಿಣಾಮದಿಂದ ನರಳುವಾಗ, ಬಹುತೇಕ ಎಲ್ಲರೂ ”ಇದೊಂದು ಬಾರಿ ಪಾರಾದರೆ ಸಾಕು, ಇನ್ನೆಂದೂ ತಪ್ಪು ಮಾಡುವುದಿಲ್ಲ” ಎಂದು ಸಂಕಲ್ಪಿಸುತ್ತೇವೆ. ಈ ಸಂಕಲ್ಪ ಪ್ರಾಮಾಣಿಕವೂ ಆಗಿರುತ್ತದೆ. ಆದರೆ ಒಮ್ಮೆ ಅನಾಹುತವನ್ನು ತಪ್ಪಿಸಿಕೊಂಡ ನಂತರ ನಮ್ಮ ಸಂಕಲ್ಪ […]

ಆತ್ಮಹತ್ಯೆ ಮಹಾಪಾಪ

~ ಪುನೀತ್ ಅಪ್ಪು ಭೀಕರ ಬರಗಾಲದ ಸಮಯ … ಸಂತ ಶಿಷ್ಯರೊಡನೆ ತೀರ್ಥ ಯಾತ್ರೆಗೆ ಹೊರಟಿದ್ದ. ಎಲ್ಲೆಲ್ಲೂ ಹಸಿವು ನೀರಡಿಕೆ ತಾಂಡವವಾಡುತಿತ್ತು. ಮರುಭೂಮಿಯ ಉದ್ದಗಲಕ್ಕೂ ಸತ್ತ ಮತ್ತು ಸಾಯುತ್ತಿರುವ ಪಶು ಪಕ್ಷಿಗಳ ಸಾಲು. ಶಿಷ್ಯರು ಹಸಿವಿನಿಂದ ಕಂಗಾಲಾದರು. ಒಂದು ಕಡೆ ತೀವ್ರ ಮೇವಿನ ಕೊರತೆಯಿಂದ ಸಾಯುತ್ತಿದ್ದ ಜಾನುವಾರಿನ ಬಳಿ ನಿಂತ ಸಂತ ತನ್ನ ಬಳಿಯಿದ್ದ ಚಾಕುವಿನಿಂದ ಆ ಪ್ರಾಣಿಯ ಕತ್ತು ಕುಯ್ದು ಮಾಂಸ ತುಂಡು ಮಾಡಿದ. ಶಿಷ್ಯರು ಕಂಗಾಲಾದರು. ‘ಗುರುಗಳೇ ಏನು ಮಾಡಿ ಬಿಟ್ಟಿರಿ?’  ಸಂತ ಮೆಲ್ಲನೆ ಹೇಳಿದ “ಆತ್ಮಹತ್ಯೆ ಮಹಾಪಾಪ!”. #ನಾಸ್ತಿಕಸಂತ ಸರಣಿ