ನಡೆಯುವುದು ಉಳಿಯುತ್ತದೆ, ನಿಂತದ್ದು ಕೊಳೆಯುತ್ತದೆ : ಅಧ್ಯಾತ್ಮ ಡೈರಿ

ಕಾಲವನ್ನೇ ನೋಡಿ. ಅದು ತುದಿಮೊದಲೂ ತಿಳಿಯದಷ್ಟು ನಿತ್ಯ ಸಂಚಾರಿ. ಅದರ ಪ್ರತಿಘಳಿಗೆಯೂ ಆದಿ, ಮತ್ತು ಅದೇ ಘಳಿಗೆ ಅಂತ್ಯವೂ. ಹೊತ್ತು ಹೊತ್ತಿನ ಆದಿ ಅಂತ್ಯಗಳ ನಿರಂತರತೆಯೇ ಕಾಲನ ಚಲನೆ. ಅದರೊಳಗಿನ ಸೂಕ್ಷ್ಮವನ್ನು ಗಮನಿಸಿ. ಹುಟ್ಟು – ಸಾವಿಲ್ಲದೆ ಯಾವುದರ ಚಲನೆಯೂ ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ಜೀವವೂ ಹುಟ್ಟಿ ಸಾಯುತ್ತಿದೆಯೆಂದೇ ಜಗತ್ತು ನಡೆಯುತ್ತಿದೆ ~ ಅಲಾವಿಕಾ ಸುಮ್ಮನೆ ಒಂದು ಊಹೆ. ಈ ಭೂಮಿ ಚಲನೆ ನಿಲ್ಲಿಸಿಬಿಟ್ಟರೆ ಏನಾಗುವುದು? ಹೋಗಲಿ ಚಂದ್ರ ನಿಂತರೆ? ಸೂರ್ಯ, ನಕ್ಷತ್ರಗಳು ಅಚಲವಾದರೆ? ಹೆಚ್ಚೇನಿಲ್ಲ, ಎಲ್ಲವೂ […]