ಬಹುಮುಖಿ ವ್ಯಕ್ತಿತ್ವದ ಕೃಷ್ಣದ್ವೈಪಾಯನ – ವ್ಯಾಸ

ವ್ಯಾಸರದ್ದು ಸೇತುವೆಯಂತಹ ವ್ಯಕ್ತಿತ್ವ. ಮಹಾಭಾರತವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಶಾಂತನುವಿನ ಅಂತ್ಯದಿಂದ ಹಿಡಿದು ಪಾಂಡವರ ಸ್ವರ್ಗಾರೋಹಣದ ವರೆಗೆ ವ್ಯಾಸರೇ ಚಾಲಕ ಶಕ್ತಿಯಾಗಿ ಕಂಗೊಳಿಸುತ್ತಾರೆ. ದ್ವಾಪರಯುಗದ ಸೂತ್ರಧಾರ ಕೃಷ್ಣನಾದರೆ, ಅದರ ಚಾಲಕ ಶಕ್ತಿ ಕೃಷ್ಣ ದ್ವೈಪಾಯನ. ಈ ಯುಗದುದ್ದಕ್ಕೂ ಬಂದೊದಗುವ ಗಂಟುಗಳನ್ನು ಬಿಡಿಸುವಲ್ಲಿ ಅವರು ಕೃಷ್ಣನ ಜೊತೆಗೂಡದಿದ್ದರೆ, ಬಹುಶಃ ಕುರು ವಂಶದ ಚಿತ್ರಣವೇ ಬೇರೆ ಇರುತ್ತಿತ್ತು ~ ಸಾ.ಹಿರಣ್ಮಯಿ ಮಹಾಭಾರತದ ಕರ್ತೃ ವೇದವ್ಯಾಸ, ಸ್ವತಃ ಈ ಮಹತ್ಕೃತಿಯ ಮುಖ್ಯ ಪಾತ್ರವೂ ಹೌದು. ಕೃಷ್ಣ, ದ್ವೈಪಾಯನ, ಸಾತ್ಯವತ, ಪಾರಶರ್ಯ, ವೇದ ವ್ಯಾಸ, […]

28 ವ್ಯಾಸರು : ಯಾವ ಮನ್ವಂತರದಲ್ಲಿ ಯಾರು!?

ಪರಾಶರ ಮುನಿಗಳು ಹೇಳುವಂತೆ ವೈವಸ್ವತ ಮನ್ವಂತರದ ಪ್ರತಿ ದ್ವಾಪರಯುಗದಲ್ಲಿಯೂ ಇಪ್ಪತ್ತೆಂಟು ಬಾರಿ ವೇದವನ್ನು ವಿಭಜಿಸಲಾಯಿತು. ವಿಷ್ಣುಪುರಾಣದಲ್ಲಿ ಹೇಳಲಾಗಿರುವಂತೆ 28 ವ್ಯಾಸರು ಮತ್ತು ಅವರು ವೇದವಿಭಜನೆ ಮಾಡಿದ ಮನ್ವಂತರದ ಹೆಸರುಗಳು ಇಲ್ಲಿದೆ…  “ವ್ಯಸ್ಯತಿ ವೇದಾನ್ ಇತಿ ವ್ಯಾಸಃ” ಅನಂತವಾದ ವೇದರಾಶಿಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳಾಗಿ ವಿಭಜಿಸಿದ್ದರಿಂದ ವೇದವ್ಯಾಸ ಎಂಬ ಹೆಸರಿನ ಉತ್ಪತ್ತಿಯಾಗಿದೆ. ವ್ಯಾಸರೆಂದರೆ ಒಬ್ಬರೇ ವ್ಯಕ್ತಿಯಲ್ಲ. ಅದೊಂದು ಉಪಾಧಿ. ಅದೊಂದು ಪದವಿ. ಮಹಾಭಾರತ ಬರೆದವರು  ಕೃಷ್ಣದ್ವೈಪಾಯನ ವ್ಯಾಸರು. ಅವರಂತೆಯೇ ಪ್ರತಿ ಮನ್ವಂತರದಲ್ಲೂ […]