ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ, ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕವಾಗಿತ್ತು. ..
ಕೊಳಲೂದಲು ಬೇಕು ಕಿಚ್ಚು : ಅರಳಿಮರ POSTER
ಅಂತಿಮ ಪ್ರವಾದಿ ಹೇಳಿದ್ದು : ಅರಳಿಮರ POSTER
“ತನ್ನನ್ನು ತಾನು ಅರಿತವರು ಅಲ್ಲಾಹ್’ನನ್ನು ಅರಿಯಬಲ್ಲರು” ಅನ್ನುತ್ತಾರೆ ಪ್ರವಾದಿ ಮಹಮ್ಮದ್. ಅರಿವು ಹುಡುಕುತ್ತಾ ನಡೆದವರೆಲ್ಲರೂ ಆತ್ಯಂತಿಕವಾಗಿ ಪಡೆಯುವುದು ಒಂದನ್ನೇ. ಆ ಒಂದನ್ನೇ ಹಲವರು ಹಲವು ಬಗೆಯಲ್ಲಿ ಹೇಳುವರು. ಭಗವಂತನ ಹುಡುಕಾಟದ ಬಗ್ಗೆ ಯಾರು ಏನು ಹೇಳಿದ್ದಾರೆ ಅನ್ನುವುದನ್ನು ‘ಚಿತ್ರಭಿತ್ತಿ’ಯ ಹಲವು Posterಗಳಲ್ಲಿ ನೊಡಿದ್ದೀರಿ. ಇಸ್ಲಾಮ್ ಸಮುದಾಯದ ಅಂತಿಮ ಪ್ರವಾದಿ ಮಹಮ್ಮದ್ ಕೂಡ ಅದನ್ನೇ ಹೇಳಿರುವುದನ್ನು ಗಮನಿಸಿ. “ತನ್ನನ್ನು ತಾನು ಅರಿತವರು ಅಲ್ಲಾಹನನ್ನು ಅರಿಯಬಲ್ಲರು” ಅನ್ನುವ ಮೂಲಕ ನಾವು ಭಗವಂತನ ವಿಸ್ತರಣೆ ಎಂದು ಪ್ರವಾದಿಯವರು ಸೂಚ್ಯವಾಗಿ ಹೇಳಿದ್ದಾರೆ. ಮುಂದೆ […]
ನಾವೇಕೆ ಮೈಮೇಲೆ ಇರುವೆ ಬಿಟ್ಟುಕೊಳ್ಳಬೇಕು!? : ಅಧ್ಯಾತ್ಮ ಡೈರಿ
ಇಷ್ಟಕ್ಕೂ ಕ್ರಿಯೆ ಅವರವರ ಕರ್ಮ. ಪ್ರತಿಕ್ರಿಯೆ, ಅವರ ಕರ್ಮಕ್ಕೆ ನಾವು ಬಾಧ್ಯಸ್ಥರಾಗುವ ಮೈಮೇಲೆ ಇರುವೆ ಬಿಟ್ಟುಕೊಳ್ಳುವಂಥ ಕ್ರಿಯೆ. ನಾವೇಕೆ ಮತ್ಯಾರದೋ ಕರ್ಮದ ಫಲವುಣ್ಣಬೇಕು!? ~ ಅಲಾವಿಕಾ
ಹೆರಾಕ್ಲಿಟಸ್ ಹೇಳಿದ್ದು : ಅರಳಿಮರ POSTER
“ದಿಬ್ಬವು ಏರುವ ದಾರಿಯನ್ನೂ ಇಳಿಯುವ ದಾರಿಯನ್ನೂ ಒಟ್ಟಿಗೆ ಹೊತ್ತುಕೊಂಡಿರುತ್ತದೆ. ಅಸ್ತಿತ್ವ ಉಳಿದುಕೊಂಡಿರುವುದು ಇಂತಹ ಸೌಹಾರ್ದದ ಮೇಲೆಯೇ” ~ ಹೆರಾಕ್ಲಿಟಸ್ ಸದಾ ನೀರುಗಣ್ಣನಾಗಿರುತ್ತಿದ್ದ ಆರ್ದ್ರಹೃದಯಿ ಹೆರಾಕ್ಲಿಟಸ್ ಅಳುಮುಂಜಿ ತತ್ತ್ವಜ್ಞಾನಿ (ವೀಪಿಂಗ್ ಫಿಲಾಸಫರ್) ಎಂದೇ ಖ್ಯಾತ. ಕ್ರಿ.ಪೂ.6ನೇ ಶತಮಾನದಲ್ಲಿ ಗ್ರೀಸ್’ನಲ್ಲಿ ಜೀವಿಸಿದ್ದ ಹೆರಾಕ್ಲಿಟಸ್ ಒಬ್ಬ ಭೌತಶಾಸ್ತ್ರಜ್ಞನೂ ಹೌದು. ಈವರೆಗಿನ ದಾಖಲೆಗಳ ಪ್ರಕಾರ “ಬದಲಾವಣೆಯೊಂದೇ ಶಾಶ್ವತ, ಮತ್ತಾವುದೂ ಅಲ್ಲ” ಎಂದು ಮೊದಲ ಬಾರಿಗೆ ಹೇಳಿದ್ದು ಹೆರಾಕ್ಲಿಟಸ್. ಒಂದೇ ದಿಬ್ಬವನ್ನು ಎರಡು ಬಗೆಯಲ್ಲಿ ನೋಡಬಹುದು. ಮೇಲಿನಿಂದ ನೋಡಿದಾಗ ಕೆಳಕ್ಕೆ ಇಳಿಯುವಂತೆಯೂ, ಕೆಳಗಿನಿಂದ […]
ಏಸು ಕ್ರಿಸ್ತ ಹೇಳಿದ್ದು : ಅರಳಿಮರ POSTER
ದೈನ್ಯ ತೋರುವುದು ಎಂದರೆ ಅಹಂಕಾರ ತೋರದಿರುವವರು ಎಂದು. ತಮ್ಮ ಅಸ್ತಿತ್ವ, ಸಾಧನೆ, ಸಂಪತ್ತೆಲ್ಲವೂ ಭಗವಂತನ ದೇಣಿಗೆ ಎಂಬ ಅರಿವು ಹೊಂದಿದವರು. ಅಂಥವರೇ ಧನ್ಯರು. ದೇವರು ಅಂಥವರನ್ನು ಪುರಸ್ಕರಿಸುತ್ತಾನೆ. ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪದಿಂದ ದುಃಖಿಸುವವರು ಧನ್ಯರು. ಅವರಿಗೆ ಸಮಾಧಾನ ದೊರೆಯುತ್ತದೆ. ಸಮಾಧಾನ ಹೊಂದಿದವರು ಜೀವನದ ಇತರ ಸಂಗತಿಗಳನ್ನು ಸರಾಗವಾಗುತ್ತದೆ. ವಿನಯವಂತರು ಧನ್ಯರು. ಅವರಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತದೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಈ ಅರ್ಥದಲ್ಲಿ ಭೂಮಿ ಅವರದಾಗುತ್ತದೆ.
ಅರಳಿಮರ POSTERS : ತಿಳಿಬೆಳಗಿನ ಹಿತವಚನಗಳು
‘ಅರಳಿಮರ’ದಲ್ಲಿ ಬೆಳಗಿನ ವೇಳೆ ಪ್ರಕಟಿಸಿದ ‘ಹಿತವಚನ’ಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ಸಂಗ್ರಹಿಸಲು ಇಚ್ಛಿಸುವವರು ಡೌನ್ ಲೋಡ್ ಮಾಡಿಕೊಳ್ಳಿ….
ತಿಳಿಬೆಳಗು : ದಿನಕ್ಕೊಂದು ಸುಭಾಷಿತ #4
ಧರ್ಮ, ಅರ್ಥ, ಕಾಮ, ಮೋಕ್ಷಗಳು ಚತುರ್ವಿಧ ಪುರುಷಾರ್ಥಗಳೆಂದು ನಾವು ಬಲ್ಲೆವು. ಆದರೆ ಇವುಗಳನ್ನು ಸಾಧಿಸುವುದು ಹೇಗೆ? ಸುಭಾಷಿತಕಾರರು ಹೇಳುವ ಸರಳ ಉಪಾಯ ಇಲ್ಲಿದೆ ನೋಡಿ….
ತಿಳಿ ಬೆಳಗು : ದಿನಕ್ಕೊಂದು ಸುಭಾಷಿತ #3
ಸತ್ಪುರುಷರು ಹೇಗಿರುತ್ತಾರೆ ಗೊತ್ತೇ? ಸುಭಾಷಿತರು ಮೂರೇಮೂರು ಸಾಲುಗಳಲ್ಲಿ ಹೇಳುತ್ತಾರೆ ಕೇಳಿ….
ತಿಳಿಬೆಳಗು : ದಿನಕ್ಕೊಂದು ಸುಭಾಷಿತ #2
ವಿದ್ಯೆ ಇಲ್ಲದವರ ಬಾಳು ಎಂಥದು ಅನ್ನುವುದನ್ನು ಹಾಸ್ಯದ ಧಾಟಿಯಲ್ಲಿ ಬಹಳ ಸರಳವಾಗಿ ಹೇಳಿದ್ದಾರೆ ಸುಭಾಷಿತಕಾರರು. ವಿದ್ಯೆಯೊಂದು ಇಲ್ಲದೆ ಹೋದರೆ ಬದುಕು ಹಾಸಲಿಕ್ಕೂ ಸಾಲದು, ಹೊದೆಯಲಿಕ್ಕೂ ಸಾಲದು ಅನ್ನುವಂತ ಇದು!