ರೂಮಿ ಹೇಳಿದ್ದು : ಅರಳಿಮರ POSTER

“ಇದು ನಿನ್ನ ದಾರಿ, ಇದು ನಿನ್ನ ಯಾನ. ನಿನ್ನ ಬಾಳಿನ ನಡಿಗೆ ನಿನಗಷ್ಟೇ ಅಧೀನ ” ಅನ್ನುತ್ತಾನೆ ಜಲಾಲುದ್ದೀನ್ ರೂಮಿ ~ ಚೇತನಾ  ಇದು ನಿನ್ನ ದಾರಿ. ಇದು ನಿನ್ನ ಯಾನ. ಮತ್ತೊಬ್ಬರು ನಿನ್ನ ಜೊತೆ ಹೆಜ್ಜೆ ಹಾಕಬಲ್ಲರಷ್ಟೆ. ಹೆಚ್ಚೆಂದರೆ ನಿನ್ನ ದಾರಿಯಲ್ಲಿ ಜೊತೆಯಾಗಿ ನಡೆಯಬಲ್ಲರು. ಆದರೆ ಯಾರೂ ನಿನ್ನ ನಡಿಗೆ ನಡೆಯಲಾರರು. ನಿನ್ನ ಚಲನೆ ನಿನ್ನ ಅಧೀನದಲ್ಲಷ್ಟೆ ಇರುವುದು” ಅನ್ನುತ್ತಾನೆ ಸೂಫಿ ಕವಿ ಜಲಾಲುದ್ದೀನ್ ರೂಮಿ.  ನಮ್ಮ ನಮ್ಮ ಜೀವನದ ಪ್ರಯಾಣವನ್ನು ನಾವಷ್ಟೆ ಮಾಡಲು ಸಾಧ್ಯ. […]

ದೇವರೊಬ್ಬನೇ, ದಾರಿ ಬೇರೆ ಬೇರೆ…. : ಅರಳಿಮರ POSTER

ಧರ್ಮ, ಬದುಕನ್ನು ಸ್ವಸ್ಥವೂ ಸುಂದರವೂ ಆಗಿಸಿಕೊಳ್ಳಲೆಂದೇ ಇರುವ ದಾರಿ. ಸಹಜೀವಿಗಳೊಡನೆ ಸೌಹಾರ್ದದ ಬದುಕು ಬಾಳಲು ಮನುಷ್ಯ ತನಗೆ ತಾನೆ ಹಾಕಿಕೊಂಡ ನಿಯಮ. ದಾರಿ ಅಂದ ಮೇಲೆ ಅದು ಒಂದಕ್ಕೆ ಸೀಮಿತವಲ್ಲ. ಸೃಷ್ಟಿಯೊಂದು ಬಯಲು. ಬಯಲಲ್ಲಿ ಯಾರು ಎಲ್ಲಿ ನಡೆಯುತ್ತಾರೋ ಅದೆಲ್ಲವೂ ದಾರಿಯೇ.  ಕೆಲವರು ಒಬ್ಬರು ನಡೆದ ದಾರಿಯನ್ನೇ ಅನುಸರಿಸಿ, ಈ ಅನುಚರರ ಸಂಖ್ಯೆ ಹೆಚ್ಚಾಗಿದ್ದಿರಬಹುದು. ಇನ್ನು ಕೆಲವು ದಾರಿಗಳಲ್ಲಿ ಕಡಿಮೆ ಸಂಖ್ಯೆಯ ಪಥಿಕರಿರಬಹುದು. ಆಯಾ ದಾರಿಗೊಂದು ಗುರುತಿನ ಅನುಕೂಲಕ್ಕಾಗಿ ಹೆಸರು ಕೊಟ್ಟಿರಬಹುದು. ಕೆಲವು ನಿಶ್ಶಬ್ದ ದಾರಿಗಳು ಹೆಸರಿಲ್ಲದೆಯೂ […]

ಸ್ಟೀವ್ ಜಾಬ್ಸ್ ಹೇಳಿದ್ದು : ಅರಳಿಮರ POSTER

“ಎಲ್ಲರನ್ನೂ ಖುಷಿ ಪಡಿಸಬೇಕು ಅನ್ನುವ ಯೋಚನೆ ನಿಮ್ಮದಾಗಿದ್ದರೆ, ನಾಯಕರಾಗುವ ಕನಸು ಬಿಟ್ಟುಬಿಡಿ; ಐಸ್ ಕ್ರೀಮ್ ವ್ಯಾಪಾರ ಶುರುಹಚ್ಚಿಕೊಳ್ಳಿ!!” ~ ಸ್ಟೀವ್ ಜಾಬ್ಸ್ ಯಾವಾಗಲೂ ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾವೂ ಸೇರಿದಂತೆ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ನಮ್ಮದೇ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಯಾವ ವ್ಯಕ್ತಿಯಿಂದಲೂ ತನ್ನ ಮೇಲಿನ ಎಲ್ಲ ನಿರೀಕ್ಷೆಗಳನ್ನು ಈಡೇರಿಸುವುದು ಸಾಧ್ಯವಿಲ್ಲ. “ಐಸ್ ಕ್ರೀಂ ಅಂಗಡಿಯಲ್ಲಿ ವಿವಿಧ ಗ್ರಾಹಕರಿಗಾಗಿ ವಿವಿಧ ಫ್ಲೇವರಿನ ಐಸ್ ಕ್ರೀಂ ಇಟ್ಟಿರುತ್ತಾರೆ. ಯಾರಿಗೆ ಯಾವುದು ಬೇಕೋ ಅದನ್ನು ಕೊಡುತ್ತಾರೆ. ಹಾಗೆ ನಾವು ಕೂಡಾ […]

ಕುರಾನ್ ಹೇಳುತ್ತದೆ…. : ಅರಳಿಮರ Poster

ಮೂಲತಃ ಧರ್ಮಗಳು ಬೋಧಿಸುವುದು ಬದುಕನ್ನು. ಮತ್ತು ಬದುಕು ಸಾಮರಸ್ಯದ ಮೊತ್ತ. ಹಾಗೆಯೇ ಕುರಾನ್ ಕೂಡಾ  “ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ (109.6)” ಎನ್ನುವ ಮೂಲಕ  ಸಹಿಷ್ಣುತೆಯನ್ನು, ಸಾಮರಸ್ಯವನ್ನು ಬೋಧಿಸಿದೆ.  “ಪ್ರತಿಯೊಬ್ಬನಿಗೂ ಒಂದು ನಿಯ, ಮತ್ತು ಮಾರ್ಗ ನೀಡಲಾಗಿದೆ. ದೇವರು ಇಷ್ಟಪಟ್ಟಿದ್ದರೆ ನಿಮ್ಮೆಲ್ಲರನ್ನೂ ಒಂದೇ ರೀತಿಯವರನ್ನಾಗಿ (ಒಂದೇ ಮಾರ್ಗಾವಲಂಬಿಗಳನ್ನಾಗಿ) ಮಾಡಬಹುದಿತ್ತು. ಆದರೆ ಅವನು ಬೇರೆ ರೀತಿಯಾಗಿಯೇ ಮಾಡಿರುವನು. ನಿಮಗೆ ಪ್ರತ್ಯೇಕವಾಗಿ ಯಾವುದನ್ನು ನೀಡಲಾಗಿದೆಯೋ ಅದೇ ಮಾರ್ಗದಲ್ಲಿಯೇ ನೀವು ಸತ್ಕಾರ್ಯದಲ್ಲಿ ಮುಂದುವರಿಯಬೇಕೆಂಬುದು ಅವನ ಇಚ್ಛೆ. ನೀವು ಭಗವಂತನೆಡೆಗೆ […]

ಹಾಫಿಜ್’ಗೆ ಭಗವಂತ ಹೇಳಿದ್ದು : ಅರಳಿಮರ POSTER

ಭಗವಂತ ಹೇಳಿದ, “ನಿಮ್ಮ ಬದುಕು ನನ್ನನ್ನು ಸೃಷ್ಟಿಸಿದೆ. ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ” ~ ಹಾಫಿಜ್ ಸಕಲ ಜಡ ಚೇತನಗಳನ್ನು ಭಗವಂತನ ಸೃಷ್ಟಿ ಎಂದು ನಂಬುವುದಾದರೆ, ಭಗವಂತನೂ ಈ ಸಮಸ್ತದಿಂದ ರೂಪುಗೊಂಡ ಪರಮಶಕ್ತಿಯಾಗಿದ್ದಾನೆ (ಇಲ್ಲಿ ‘ಆಗಿದ್ದಾನೆ’ ಎನ್ನುತ್ತಿರುವುದು ವಾಕ್ಯಬಳಕೆಯ ರೂಢಿಯಿಂದಷ್ಟೆ. ವಾಸ್ತವದಲ್ಲಿ ಭಗವಂತ ಎಂಬ ಆತ್ಯಂತಿಕ ಶಕ್ತಿಯನ್ನು ಗಂಡು – ಹೆಣ್ಣೆಂದು ನಿರ್ವಚಿಸಲು ಬರುವುದಿಲ್ಲ. ಇದು ಲಿಂಗಾತೀತ ಶಕ್ತಿ).  ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಭಗವಂತನ ಅಸ್ತಿತ್ವದ ತುಣುಕುಗಳೇ. ತುಣುಕು ಅನ್ನುವುದಕ್ಕಿಂತ, ಭಗವಂತನ ಪ್ರತಿರೂಪಗಳೇ… ಅಥವಾ […]

ಪ್ರತಿಯೊಬ್ಬರಲ್ಲೂ ಇರುವುದು ಅದೇ ಜೀವ ಶಕ್ತಿ : ಅರಳಿಮರ POSTER

ನಾವು ಮತ್ತೊಬ್ಬರಿಗಿಂತ ಹೆಚ್ಚೋ ಕಡಿಮೆಯೋ ಅಲ್ಲ. ನಮ್ಮೆಲ್ಲರ ಅಸ್ತಿತ್ವಕ್ಕೆ ‘ಸರ್ವಕಾರಣಕಾರಣ’ವಾದ ಜೀವಶಕ್ತಿ ಒಂದೇ. ಇರುವುದೊಂದೇ ಆತ್ಮ ಚೈತನ್ಯ…   ಸ್ವಾಮಿ ವಿವೇಕಾನಂದರು ಹೇಳುತ್ತಾರೆ; “ಅಗಾಧವಾದ ಸಮುದ್ರದಲ್ಲಿ ಒಬ್ಬರು ಒಂದು ಸಣ್ನ ನೀರಗುಳ್ಳೆ ಆಗಿಯೂ, ಮತ್ತೊಬ್ಬರು ದೊಡ್ಡ ಅಲೆಯಾಗಿಯೂ ಇರಬಹುದು; ಆದರೆ, ಇಬ್ಬರ ಹಿಂದೆಯೂ ಇರುವುದು ಒಂದೇ ವಿಸ್ತಾರವಾದ ಸಮುದ್ರ. ಇಬ್ಬರ ಹಿಂದೆಯೂ ಜೀವಶಕ್ತಿ ಎಂಬ, ಆತ್ಮಚೈತನ್ಯ ಎಂಬ ಅನಂತ ಸಾಗರವಿದೆ. ಇದನ್ನು ನಾವು ಅರಿಯಬೇಕು” ಎಂದು.  ಇದನ್ನು ಅರಿತಾಗ ನಮ್ಮ ದಾರಿತಪ್ಪಿಸುವ ಮೇಲರಿಮೆ – ಕೀಳರಿಮೆಗಳು ದೂರವಾಗುತ್ತವೆ. […]

ಜಗತ್ತೇ ನೀನಾಗಿರುವೆ ~ ಉಪನಿಷತ್ ವಾಕ್ಯ : ಅರಳಿಮರ POSTER

“ನೀನೇ ಜಗತ್ತು, ಜಗತ್ತೇ ನೀನಾಗಿರುವೆ!” ~ ಛಾಂದೋಗ್ಯ ಉಪನಿಷತ್ತು “ಹೊರಗಿನ ಆಕಾಶ ಎಷ್ಟು ವಿಸ್ತಾರವಾಗಿದೆಯೋ, ಒಳಗಿನ ಆಕಾಶವೂ ಅಷ್ಟೇ ವಿಸ್ತಾರವಾಗಿದೆ. ಪ್ರಕೃತಿಯು ಪಂಚಭೂತಗಳಿಂದ ಆಗಿರುವಂತೆಯೇ ನಮ್ಮ ದೇಹವೂ ಪಂಚಭೂತಗಳಿಂದ ಉಂಟಾಗಿದೆ. ಹೊರಗೇನಿದೆಯೋ ಅದೇ ಒಳಗಿನಲ್ಲೂ ಇದೆಯಾದ್ದರಿಂದ; ನೀನೇ ಜಗತ್ತು, ಜಗತ್ತೇ ನೀನಾಗಿದ್ದೀಯ” ಅನ್ನುತ್ತದೆ ಛಾಂದೋಗ್ಯ ಉಪನಿಷತ್ತು.

ಸಾದಿ ಹೇಳಿದ್ದು… : ಅರಳಿಮರ POSTER

ಪಂಡಿತರೊಡನೆ ವಾಗ್ವಾದಕ್ಕಿಳಿದು ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ವಾಸ್ತವದಲ್ಲಿ ಅವರು ನಿಮ್ಮ ಮೌಢ್ಯಕ್ಕೆ ಮರುಕ ಪಡುತ್ತಿರುತ್ತಾರೆ. ~ ಸಾದಿ ಶಿರಾಜಿ | ಸೂಫಿ ಕವಿ

ಬದುಕುವುದು ಎಂದರೆ…. : ಅರಳಿಮರ POSTER

ಬದುಕುವುದು ಎಂದರೆ ನಿಮ್ಮನ್ನು ನೀವು ಕಂಡುಕೊಳ್ಳುವುದಲ್ಲ, ನಿಮ್ಮನ್ನು ನೀವು ರೂಪಿಸಿಕೊಳ್ಳುವುದು ~ ಜಾರ್ಜ್ ಬರ್ನಾಡ್ ಷಾ ಬದುಕುವುದು ಎಂದರೇನು? ಕೆಲವರು ‘ನಿಮ್ಮನ್ನು ನೀವು ಕಂಡುಕೊಳ್ಳುವುದೇ ಬದುಕು’ ಅನ್ನುತ್ತಾರೆ. ಬರ್ನಾಡ್ ಷಾ, ‘ನಿಮ್ಮನ್ನು ನೀವು ರೂಪಿಸಿಕೊಳ್ಳುವುದು ಬದುಕು’ ಅನ್ನುತ್ತಾರೆ.  ಎರಡಕ್ಕೂ ಅಂಥಾ ವ್ಯತ್ಯಾಸವೇನಿಲ್ಲ. ನಮ್ಮನ್ನು ನಾವು ಕಂಡುಕೊಳ್ಳುವುದು ಅಂದರೆ;ನಮ್ಮ ಅಂತಃಸತ್ವವನ್ನು ಕಂಡುಕೊಳ್ಳುವು, ನಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳುವುದು. ಕಂಡುಕೊಂಡ ಮೇಲೆ ಸುಮ್ಮನಿರುತ್ತೇವೆಯೇ? ಆ ಸತ್ವದ ತಳಹದಿಯ ಮೇಲೆ, ನಮ್ಮ ಸಾಮರ್ಥ್ಯ ಬಳಸಿ, ನಮ್ಮ ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆಗ ಅದು […]