ಪಿತೂರಿಕೋರರ ಸಂಚಿನಿಂದ ಗೆಳೆಯನಿಗೆ ಗುರುವಾದ ಅಯಾಜ್!! : ರಾಮತೀರ್ಥರು ಹೇಳಿದ ಕಥೆ

ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ ಗೆಳೆಯ ಅಯಾಜನನ್ನು ದೊರೆ ಮಹಮೂದ್, ತನ್ನ ಮುಖ್ಯಮಂತ್ರಿಯನ್ನಾಗಿ ನೇಮಿಸಿಕೊಂಡ. ಸಂಚುಕೋರರ ಪಿತೂರಿಯಿಂದ ಮುಖ್ಯಮಂತ್ರಿ, ಆತನ ಗುರುವೂ ಆದ!! ಅಯಾಜ್ ಎಂಬುವವನು ಘಜ್ನವಿ ರಾಜ್ಯದ ರಾಜನಾದ ಮಹಮೂದನ ಪ್ರಾಣ ಸ್ನೇಹಿತ. ಅವನು ಮೊದಲು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಮಹಮೂದನ ಪ್ರೀತಿಯಿಂದಲೂ ತನ್ನ ಸ್ವಂತದ ಅರ್ಹತೆಯಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೇರಿದ. ಅಯಾಜನಿಗೆ ಒದಗಿ ಬಂದ ಅದೃಷ್ಟವನ್ನು ಕಂಡು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರೆಲ್ಲ ಕರುಬಿದರು. ಕೆಲವು ದರ್ಬಾರಿಗಳೂ ಅಯಾಜನನ್ನು ಕಂಡು ಅಸೂಯೆ ಪಟ್ಟರು. ಅವರೆಲ್ಲ […]