ದೇವರೊಬ್ಬನೇ, ದಾರಿ ಬೇರೆ ಬೇರೆ…. : ಅರಳಿಮರ POSTER

ಧರ್ಮ, ಬದುಕನ್ನು ಸ್ವಸ್ಥವೂ ಸುಂದರವೂ ಆಗಿಸಿಕೊಳ್ಳಲೆಂದೇ ಇರುವ ದಾರಿ. ಸಹಜೀವಿಗಳೊಡನೆ ಸೌಹಾರ್ದದ ಬದುಕು ಬಾಳಲು ಮನುಷ್ಯ ತನಗೆ ತಾನೆ ಹಾಕಿಕೊಂಡ ನಿಯಮ. ದಾರಿ ಅಂದ ಮೇಲೆ ಅದು ಒಂದಕ್ಕೆ ಸೀಮಿತವಲ್ಲ. ಸೃಷ್ಟಿಯೊಂದು ಬಯಲು. ಬಯಲಲ್ಲಿ ಯಾರು ಎಲ್ಲಿ ನಡೆಯುತ್ತಾರೋ ಅದೆಲ್ಲವೂ ದಾರಿಯೇ.  ಕೆಲವರು ಒಬ್ಬರು ನಡೆದ ದಾರಿಯನ್ನೇ ಅನುಸರಿಸಿ, ಈ ಅನುಚರರ ಸಂಖ್ಯೆ ಹೆಚ್ಚಾಗಿದ್ದಿರಬಹುದು. ಇನ್ನು ಕೆಲವು ದಾರಿಗಳಲ್ಲಿ ಕಡಿಮೆ ಸಂಖ್ಯೆಯ ಪಥಿಕರಿರಬಹುದು. ಆಯಾ ದಾರಿಗೊಂದು ಗುರುತಿನ ಅನುಕೂಲಕ್ಕಾಗಿ ಹೆಸರು ಕೊಟ್ಟಿರಬಹುದು. ಕೆಲವು ನಿಶ್ಶಬ್ದ ದಾರಿಗಳು ಹೆಸರಿಲ್ಲದೆಯೂ […]