ಪರಿಸರ, ಪರಿಣಾಮ ಮತ್ತು ಆಯ್ಕೆಯ ಅವಕಾಶ

ನಾವು ಕೆಡುಕರನ್ನು ಗುರುತಿಸುವಷ್ಟು ಸುಲಭವಾಗಿ ಸಜ್ಜನರನ್ನು ಗುರುತಿಸಲಾರೆವು. ಅಥವಾ ಕೆಡುಕುಗಳಿಗೆ ಹೆದರುವಷ್ಟು ಒಳಿತುಗಳಿಗೆ ಹಂಬಲಿಸಲಾರೆವು. ನಕಾರಾತ್ಮಕತೆಯ ಸಂಕೀರ್ಣ ಜಾಲ ನಮ್ಮೊಳಗೆ ಹಾಸುಹೊಕ್ಕಾಗಿಬಿಟ್ಟಿರುವುದು. ಇದಕ್ಕೆ ನಮ್ಮ ಸ್ವಾರ್ಥ ಹಾಗೂ ಮಿಥ್ಯಾಹಂಕಾರವೇ ಮೂಲ ಕಾರಣ ~ ಚೇತನಾ ತೀರ್ಥಹಳ್ಳಿ ಎರಡು ಸಹೋದರ ಗಿಳಿಗಳ ಕಥೆ ಕೇಳಿಯೇ ಇರುತ್ತೀರಿ. ಚಿಕ್ಕಂದಿನಲ್ಲಿ ಬೇರ್ಪಟ್ಟ ಗಿಳಿಗಳಲ್ಲಿ ಒಂದನ್ನು ಕಟುಕನೂ ಮತ್ತೊಂದನ್ನು ಋಷಿಯೂ ಸಾಕುತ್ತಾರೆ. ಕಟುಕನ ಮನೆಯಲ್ಲಿ ಬೆಳೆದ ಗಿಳಿ ಮನೆಯೆದುರು ಯಾರೇ ಬಂದರೂ `ಹಿಡಿಯಿರಿ! ಕಟ್ಟಿ ಹಾಕಿ… ಕೊಲ್ಲಿ!!’ ಅನ್ನುತ್ತ ಇರುತ್ತದೆ. ಮತ್ತು ಋಷಿಯ […]