ಪ್ರಮಾಣ : ತಾವೋ ಧ್ಯಾನ ~ 18

ನಿಮ್ಮ ಕೂಗು ಆರ್ತವಾಗಿದ್ದರೆ, ಆಳವಾಗಿದ್ದಾರೆ ನಿಮಗೊಂದು ಪ್ರತಿಧ್ವನಿ ಕೇಳಿಸುವುದು. ಈ ಪ್ರತಿಧ್ವನಿಯೇ ನಮ್ಮ ಅಸ್ತಿತ್ವದ ಬಗೆಗಿನ ಪ್ರಮಾಣ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಅಸ್ತಿತ್ವದ ಅಂಧಕಾರ ಕಡಿದಾದ ಬಂಡೆಯ ಮೇಲೆ ನಿಂತು ಖಾಲಿತನವನ್ನೊಮ್ಮೆ ಮಾತಾಡಿಸಿ ಖಂಡಿತವಾಗಿ ನಿಮಗೊಂದು ಉತ್ತರ ಕೇಳಿಸುವುದು. *** ಬೆಟ್ಟದ ತುದಿಯಲ್ಲಿ ಕಡಿದಾಗಿ ಚಾಚಿಕೊಂಡಿರುವ ಬಂಡೆಗಲ್ಲು, ಮನುಷ್ಯರಾಗಿರುವ ನಮ್ಮ ಬದುಕಿನ ದ್ವಂದ್ವವನ್ನು ಧ್ವನಿಪೂರ್ವಕವಾಗಿ ಅಭಿವ್ಯಕ್ತಿಸುತ್ತದೆ ಹೇಗೆಂದರೆ ಬದುಕೂ ಕೂಡ ಹಾಗೇ ಅಮೂರ್ತ ಮತ್ತು ಗೊತ್ತು ಗುರಿಯಿಲ್ಲದ್ದು. ಈ ಬದುಕನ್ನು ನಿರ್ದೇಶಿಸುವ ಶಕ್ತಿಯಿದೆಯೇ? […]