ಮರಳಿ ಯತ್ನವ ಮಾಡು : ಪರಮಹಂಸ ವಚನ ವೇದ

ರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಎಂಥಾ ಕಷ್ಟದ ಕಾರ್ಯವನ್ನೂ ಸಾಧಿಸಬಹುದು ಎಂದು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಸಾಧನೆಯ ಹಾದಿಯಲ್ಲಿ ತೊಡಕುಗಳು ಎದುರಾಯಿತೆಂದು ಶಿಷ್ಯರು ಅವರ ಬಳಿ ಬಂದಾಗೆಲ್ಲ ಅವರು ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದೇ ಹೇಳುತ್ತಿದ್ದುದು. ಅಂತಹ ಒಂದು ಪ್ರಸಂಗದಲ್ಲಿ ನೀಡಿದ ಬೋಧನೆ ಇಲ್ಲಿದೆ: ಸಮುದ್ರದಲ್ಲಿ ಒಮ್ಮೆ ಮುಳುಗಿದಾಗ ಅಲ್ಲಿ ಮುತ್ತು ಸಿಗದೇ ಇದ್ದರೆ ಅಲ್ಲಿ ಮುತ್ತೇ ಇಲ್ಲವೆಂದು ತಿಳಿಯಬೇಡಿ. ಸಮುದ್ರದಲ್ಲಿ ಲೆಕ್ಕವಿಲ್ಲದಷ್ಟು ಮುತ್ತುಗಳು ಹುದುಗಿವೆ. ಸ್ವಲ್ಪ ಸಾಧನೆಯನ್ನು ಮಾಡಿದ ಮೇಲೆ ಫಲ ದೊರೆಯುವ […]

ಸೋಮಾರಿಗಳಿಗೆ ಗೆಲುವಿಲ್ಲ ~ ಸಾಮವೇದ : ಬೆಳಗಿನ ಹೊಳಹು

ಸೋಮಾರಿತನ ಮತ್ತು ಉಡಾಫೆ ಪ್ರವೃತ್ತಿಯವರಿಗೆ ಯಾವ ಕೆಲಸದಲ್ಲೂ ಗೆಲುವಾಗುವುದಿಲ್ಲ. ಮನುಷ್ಯಮಾತ್ರದವರಿರಲಿ, ದೇವತೆಗಳೂ ಇಂಥವರ ಮೇಲೆ ದಯೆ ತೋರುವುದಿಲ್ಲ.  ಮನುಷ್ಯ ಪ್ರಯತ್ನದಿಂದ ಸಾಧಿಸಲು ಸಾಧ್ಯವಾಗದೆ ಇರುವಂಥದ್ದು ಏನಿದೆ? ದೈವ ಬಲ, ಅದೃಷ್ಟ ಬಲಗಳೆಲ್ಲ ಇದ್ದರೂ ಮನುಷ್ಯ ತನ್ನ ಪ್ರಯತ್ನವನ್ನೂ ಜೊತೆಗೆ ಹಾಕದೆ ಹೋದರೆ ಅವನಿಗೆ ಗೆಲುವು ಸಿದ್ಧಿಸುವುದೇ? ಖಂಡಿತಾ ಇಲ್ಲ. ಸಾಮವೇದ ಹೇಳುತ್ತಿರುವುದೂ ಇದನ್ನೇ; “ಸೋಮಾರಿತನ ಮತ್ತು ಉಡಾಫೆ ಪ್ರವೃತ್ತಿಯವರಿಗೆ ಅದೃಷ್ಟವೂ ಒಲಿಯುವುದಿಲ್ಲ, ದೇವತೆಗಳೂ ಒಲಿಯುವುದಿಲ್ಲ” ಎಂದು. ಏನಾದರೊಂದು ಗುರಿಯನ್ನು ಎದುರಿಟ್ಟುಕೊಂಡರೆ, ಆ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. […]

ಜೀವನದಲ್ಲೂ ‘ಟ್ರೈ ಅಗೈನ್’ ಆಪ್ಷನ್ ಬಳಸಿ : ಫೇಸ್ ಬುಕ್ ಪಾಠಗಳು ~ 3

ಫೇಸ್ ಬುಕ್ ಆ್ಯಪ್’ನಲ್ಲಿ ಟ್ರೈ ಅಗೈನ್ ಆಪ್ಷನ್ ಬಳಸಿ ಉತ್ತಮ ಫಲಿತಾಂಶ ಬರುವವರೆಗೆ ಪ್ರಯತ್ನಿಸುತ್ತೇವೆ. ಹಾಗೆಯೇ ನಿಜ ಜೀವನದಲ್ಲೂ ಪ್ರಯತ್ನದ, ಮರು ಪ್ರಯತ್ನದ ಆಯ್ಕೆ – ಅವಕಾಶಗಳು ಇದ್ದೇ ಇರುತ್ತವೆ. ಆದರೆ ನಾವು ಅದನ್ನು ಮುತುವರ್ಜಿಯಿಂದ ಬಳಸುತ್ತೇವೆಯೇ?  ಫೇಸ್ ಬುಕ್’ನಲ್ಲಿ ಇರುವ ನಾವೆಲ್ಲರೂ ಯಾವಾಗಲಾದರೂ ಈ ಒಂದು ಕೆಲಸ ಮಾಡಿರುತ್ತೇವೆ. ಅಲ್ಲಿ ಕಾಣುವ ವಿವಿಧ ಫನ್ ಆ್ಯಪ್ ಬಳಸಿ “ನೀವು ಮಹಾಭಾರತದಲ್ಲಿ ಯಾವ ಪಾತ್ರವಾಗಿದ್ದಿರಿ?” “ನೀವು ಮುಂದಿನ ಜನ್ಮದಲ್ಲಿ ಏನಾಗಿದ್ದಿರಿ?” “ನಿಮ್ಮ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಯಾರು?” […]