ಆತ್ಮದ ವಿಷಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 16

ಆಮೇಲೆ, ಆತ್ಮದ ಬಗ್ಗೆ ಪ್ರಶ್ನೆ ಮಾಡಿದ ಮನುಷ್ಯನಿಗೆ ಅವನು ಉತ್ತರಿಸತೊಡಗಿದ. ನಿಮ್ಮ ಹೃದಯಗಳು ಮೌನದಲ್ಲಿ ಹಗಲು ಮತ್ತು ರಾತ್ರಿಯ ರಹಸ್ಯಗಳಿಗೆ ತೆರೆದುಕೊಳ್ಳುತ್ತವೆ. ಆದರೆ ನಿಮ್ಮ ಕಿವಿಗಳಿಗೆ ಹೃದಯದ ತಿಳುವಳಿಕೆಯನ್ನು ಶಬ್ದಗಳಲ್ಲಿ ಕೇಳುವ ಹಂಬಲ. ನಿಮ್ಮ ಮನಸ್ಸಿಗೆ ಮೊದಲೇ ಗೊತ್ತಿರುವ ವಿಷಯ, ಆಗಲೇ ಶಬ್ದಗಳ ಮೂಲಕ ನಿಮಗೆ ತಿಳಿಯುತ್ತದೆ. ಕನಸಿನ ಬೆತ್ತಲೆ ದೇಹವನ್ನು ನೀವು ಬೆರಳುಗಳಿಂದ ಮುಟ್ಟ ಬಯಸುತ್ತೀರಿ. ಒಳಗೆ ಅದೃಶ್ಯವಾಗಿರುವ ನಿಮ್ಮ ಆತ್ಮದ ಮೂಲ ಸ್ರೋತ ಚಿಮ್ಮಿ ಕಲರವ ಮಾಡುತ್ತ ಸಾಗರದತ್ತ ಧಾವಿಸುವಾಗ; ಅಪರಿಮಿತ ಆಳದ ನಿಧಿ […]

ವಿದಾಯ ~ ಪ್ರವಾದಿ : ಅಂತಿಮ ಅಧ್ಯಾಯ

ನಿಮ್ಮಲ್ಲಿ ಇನ್ನೂ ಕೆಲವರು ಮಾತುಗಳಲ್ಲಿ ಅಲ್ಲದಿದ್ದರೂ ನನ್ನನ್ನು ಹೀಗೆ ಆಡಿಕೊಳ್ಳುತ್ತೀರಿ. “ ಅಪರಿಚಿತನೇ, ಆಗಂತುಕನೇ ಮುಟ್ಟಲಾಗದ ಎತ್ತರಗಳನ್ನು ಪ್ರೀತಿಸುವವನೇ, ಗರುಡ, ಗೂಡು ಕಟ್ಟುವ ಜಾಗಗಳಲ್ಲಿ ಯಾಕೆ ನೆಲೆಸ ಬಯಸುತ್ತಿ? “ ಅಸಾಧ್ಯದ ಬೆನ್ನ ಹಿಂದೆ ಯಾಕೆ ಬಿದ್ದಿರುವಿ ? “ ಯಾವ ಬಿರುಗಾಳಿಗೆ ಗಾಳ ಹಾಕಿರುವಿ? “ಆಕಾಶದಲ್ಲಿ ಯಾವ ಗಾಳಿ ಹಕ್ಕಿಯ ಬೆನ್ನಿಗೆ ಬಾಣ ಹೂಡಿರುವಿ? “ ಬಾ ನಮ್ಮೊಳಗೆ ಒಂದಾಗು, “ ಕೆಳಗಿಳಿದು ಬಾ, ನಮ್ಮ ಮನೆಯ ರೊಟ್ಟಿ ತಿಂದು, ಹಸಿವ ತೀರಿಸಿಕೋ ನಮ್ಮ ತೋಟದ […]

ಗಾಳಿಯಷ್ಟು ಅವಸರ ನನಗಿಲ್ಲವಾದರೂ ನಾನು ಹೋಗಲೇಬೇಕಾಗಿದೆ : ಬೀಳ್ಕೊಡುಗೆ ~ ಭಾಗ 1 : ಪ್ರವಾದಿ | ಅಧ್ಯಾಯ 28

ಸಂಜೆ ರಂಗೇರತೊಡಗಿತ್ತು. ಭವಿಷ್ಯವನ್ನು ಕಣ್ಣಿಗೆ ಕಟ್ಟಿಕೊಂಡ ಅಲ್’ಮಿತ್ರ ಮಾತನಾಡಿದಳು. “ ಈ ದಿನ, ಈ ಜಾಗ, ಮತ್ತು ಈವರೆಗೆ ಮಾತನಾಡಿದ ನಿನ್ನ ಚೇತನ ಎಲ್ಲ, ಧನ್ಯ ಭಾಗ್ಯರು “ ಅವನು ಉತ್ತರಿಸಿದ: ಮಾತನಾಡಿದವನು ನಾನೆ? ಕೇಳಿದವನೂ ನಾನೇ ಅಲ್ಲವೆ? ನಂತರ ಅವನು ದೇವಸ್ಥಾನದ ಮೆಟ್ಟಲಿಳಿದ, ಜನರೆಲ್ಲ ಅವನ ಹಿಂದೆ ಹೊರಟರು. ಅವನು ನೇರವಾಗಿ ಹೊರಟು, ತನ್ನ ಹಡಗು ಹತ್ತಿ ಮೇಲಿನ ಅಂಗಳದಲ್ಲಿ ನಿಂತ. ಜನರತ್ತ ಮುಖ ಮಾಡಿ ದನಿ ಎತ್ತರಿಸಿ ಮಾತನಾಡತೊಡಗಿದ. ಆರ್ಫಲೀಸ್ ನ ಮಹಾಜನರೇ, ನಿಮ್ಮನ್ನು […]

ಧರ್ಮ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 27

ವೃದ್ಧ ಪೂಜಾರಿಯೊಬ್ಬ ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಅವನು ಉತ್ತರ ಕೊಡತೊಡಗಿದ. ಈವರೆಗೆ ನಾನು ಮಾತನಾಡಿದ್ದು ಬೇರೆ ಯಾವುದರ ಬಗ್ಗೆ ಮತ್ತೆ? ಈ ಎಲ್ಲ ಚಿಂತನೆಗಳು, ಕ್ರಿಯೆಗಳು ಧರ್ಮವಲ್ಲದೇ ಬೇರಿನ್ನೇನು ? ಮತ್ತು ಯಾವುದು ಚಿಂತನೆಯಲ್ಲವೋ, ಕ್ರಿಯೆ ಅಲ್ಲವೋ ಆದರೆ, ಕೈಗಳು ಕಲ್ಲ ಕೆತ್ತುತ್ತಿರುವಾಗ ಅಥವಾ ಮಗ್ಗ ನೇಯುತ್ತಿರುವಾಗ ಆತ್ಮದೊಳಗೆ ಸದಾ ಚಿಮ್ಮುತ್ತಿರುತ್ತವೆಯೋ ಆ ಕೌತುಕ, ಅಚ್ಚರಿಗಳು ಕೂಡ ಧರ್ಮವೇ ಅಲ್ಲವೆ? ಯಾರು ತಾನೆ ತಮ್ಮ ಕ್ರಿಯೆಗಳಿಂದ ಶ್ರದ್ಧೆಯನ್ನೂ ಉದ್ಯೋಗಗಳಿಂದ ನಿಷ್ಠೆಯನ್ನೂ ಬೇರೆ ಮಾಡಿ ನೋಡಲು ಸಾಧ್ಯ? […]

ಸುಖದ ವಿಷಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 26

ವರ್ಷಕ್ಕೊಮ್ಮೆ ನಗರಕ್ಕೆ ಬಂದು ಹೋಗುತ್ತಿದ್ದ ಸನ್ಯಾಸಿಯೊಬ್ಬ ಮುಂದೆ ಬಂದು ಸುಖದ ಬಗ್ಗೆ ಅಭಿಪ್ರಾಯ ಕೇಳಿದ. ಅವನು ಸುಖದ ವಿಷಯ ಮಾತನಾಡತೊಡಗಿದ. ಸುಖ, ಸ್ವಾತಂತ್ರ್ಯದ ಹಾಡು, ಆದರೆ, ಅದೇ ಸ್ವಾತಂತ್ರ್ಯವಲ್ಲ. ಸುಖ, ನಿಮ್ಮ ಬಯಕೆಗಳ ಅರಳುವಿಕೆ. ಆದರೆ ಬಯಕೆಗಳ ಫಲವಲ್ಲ. ಸುಖ, ಆಳ ಎತ್ತರವನ್ನು ಕೂಗಿ ಕರೆಯುವ ಛಂದ, ಆದರೆ, ಅದೇ ಆಳ, ಅದೇ ಎತ್ತರವಲ್ಲ. ಸುಖ, ರೆಕ್ಕೆ ಬಿಚ್ಚುತ್ತಿರುವ ಪಂಜರದ ಹಕ್ಕಿ, ಆದರೆ, ಅದು ಸುತ್ತುವರೆದ ಅವಕಾಶವಲ್ಲ. ಹೌದು. ಸುಖ, ಸ್ವಾತಂತ್ರ್ಯದ ಹಾಡು, ಇದು ಖಡಾ ಖಂಡಿತ […]

ಸಾವು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 25

ಅಲ್’ಮಿತ್ರ ಸಾವಿನ ಬಗ್ಗೆ ಪ್ರಶ್ನೆ ಮಾಡಿದಳು. ಅವನು ಸಾವಿನ ಕುರಿತು ಮಾತನಾಡತೊಡಗಿದ. ಸಾವಿನ ಬಗ್ಗೆ ನಿಮಗೆ ಗೊತ್ತಾಗುತ್ತದೆ. ಆದರೆ, ಬದುಕಿನ ಹೃದಯದಲ್ಲಿಯೇ ಸಾವನ್ನು ಹುಡುಕದ ಹೊರತು ಅದನ್ನು ಗುರುತಿಸುವಿರಾದರೂ ಹೇಗೆ? ಹಗಲಿಗೆ ಕುರುಡಾದ ರಾತ್ರಿಗಣ್ಣಿನ ಗೂಬೆಗೆ ಬೆಳಕಿನ ರಹಸ್ಯಗಳ ಅನಾವರಣ ಸಾಧ್ಯವಿಲ್ಲ. ಸಾವಿನ ಚೈತನ್ಯವನ್ನು ಸೂಕ್ಷ್ಮವಾಗಿ ಗಮನಿಸಬಯಸುವಿರಾದರೆ ಬದುಕಿನ ದೇಹಕ್ಕೆ ನಿಮ್ಮ ಹೃದಯವನ್ನು ತೆರೆದಿಡಿ. ನದಿ ಮತ್ತು ಸಾಗರ ಹೇಗೆ ಒಂದೋ ಹಾಗೆಯೇ ಸಾವು ಮತ್ತು ಬದುಕು ಕೂಡ. ನಿಮ್ಮ ನಿರೀಕ್ಷೆ ಮತ್ತು ಬಯಕೆಗಳ ಆಳದಲ್ಲಿಯೇ ಜಾಗ […]

ಚೆಲುವು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 24

ಕವಿಯೊಬ್ಬ ಚೆಲುವಿನ ಬಗ್ಗೆ ಮಾತಾಡಲು ಕೇಳಿಕೊಂಡಾಗ ಅವನು ಮಾತನಾಡತೊಡಗಿದ. ಚೆಲುವೇ ದಾರಿಯಾದ ಹೊರತು ಚೆಲುವೇ ಕೈ ಹಿಡಿದು ನಡೆಸುವ ತನಕ ಚೆಲುವನ್ನು ಹುಡುಕುವುದು,  ಕಂಡುಕೊಳ್ಳುವುದು ಸಾಧ್ಯವೆ? ಚೆಲುವೇ ನಿಮ್ಮ ಮಾತುಗಳನ್ನು ನೇಯ್ದು ಸಂಭಾಷಣೆ ಸಿದ್ಧಪಡಿಸುವ ತನಕ ಚೆಲುವನ್ನು ಹಾಡಿ ಹೊಗಳುವುದು ಸಾಧ್ಯವೆ? ನೊಂದವರು, ಗಾಯಗೊಂಡವರ ಪ್ರಕಾರ ಚೆಲುವು, ಸಭ್ಯ ಮತ್ತು ಅಂತಃಕರುಣಿ, ತನ್ನ ವೈಭವದ ಬಗ್ಗೆ ತಾನೇ ನಸು ನಾಚುತ್ತ ನಮ್ಮ ನಡುವೆ ಓಡಾಡಿಕೊಂಡಿರುವ ಹರೆಯದ ತಾಯಿ. ಹುಚ್ಚು ಪ್ರೇಮಿಗಳಿಗೆ ಚೆಲುವು, ರುದ್ರ, ಭಯಂಕರ, ಕಾಲ ಕೆಳಗಿನ […]

ಪ್ರಾರ್ಥನೆ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 23

ನಗರದ ಅರ್ಚಕಿಯೊಬ್ಬಳು ಪ್ರಾರ್ಥನೆಯ ಬಗ್ಗೆ ಮಾಹಿತಿ ಕೇಳಿದಳು; ಅವನು ಉತ್ತರಿಸತೊಡಗಿದ. ದುಗುಡ ಮತ್ತು ಅಗತ್ಯಗಳು ಸತಾಯಿಸಲು ಶುರುಮಾಡಿದಾಗ ಮಾತ್ರ ನೀವು ಪ್ರಾರ್ಥನೆಗೆ ಮುಂದಾಗುತ್ತೀರಿ ; ಖುಶಿಯ ಪರಿಪೂರ್ಣತೆಯಲ್ಲಿ, ಸಮೃದ್ಧಿ ತುಂಬಿ ತುಳುಕುತ್ತಿರುವಾಗಲೂ ಪ್ರಾರ್ಥನೆ ಸಾಧ್ಯವಾಗಲಿ. ಏಕೆಂದರೆ, ಚೈತನ್ಯಮಯಿ ಆಕಾಶದಲ್ಲಿ ನಿಮ್ಮನ್ನು ನೀವು ಎತ್ತರೆತ್ತರಕ್ಕೆ ಏರಿಸಿಕೊಳ್ಳುವ ಪ್ರಕ್ರಿಯೆಯೇ ಪ್ರಾರ್ಥನೆ. ಸಮಾಧಾನಕ್ಕಾಗಿ ನಿಮ್ಮ ಕತ್ತಲನ್ನು ಆಕಾಶಕ್ಕೆ ಸುರಿಯುತ್ತೀರಾದರೆ, ಖುಶಿಗಾಗಿ, ಹೃದಯದ ಬೆಳಗನ್ನೂ ಸುರಿಯಬೇಕು. ನಿಮ್ಮ ಆತ್ಮ, ಪ್ರಾರ್ಥನೆಗೆ ಕೂಗಿದಾಗ ನಿಮ್ಮ ಅಳು ಇನ್ನೂ ನಿಂತಿಲ್ಲವಾದರೆ, ನೀವು ನಗು ನಗುತ್ತ ಹೊರ […]

ವಿವೇಕ ಮತ್ತು ತಪಸ್ಸು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 22

ಊರಿನ ಅರ್ಚಕಿಯೊಬ್ಬಳು ವಿವೇಕ ಮತ್ತು ತಪಸ್ಸಿನ ಬಗ್ಗೆ ಹೇಳು ಎಂದಳು. ಅವನು ಉತ್ತರಿಸತೊಡಗಿದ. ನಿಮ್ಮ ಆತ್ಮವೊಂದು ರಣರಂಗ ಅಲ್ಲಿ ಬಹುತೇಕ ನಿಮ್ಮ ವಿವೇಕ ಮತ್ತು ನ್ಯಾಯ, ನಿಮ್ಮ ತಪಸ್ಸು ಮತ್ತು ಬಯಕೆಗಳ ಮೇಲೆ ಯುದ್ಧ ಸಾರಿರುತ್ತವೆ. ಈ ಅಂಶಗಳ ನಡುವಿನ ಅಪಸ್ವರ ಮತ್ತು ವೈರತ್ವಗಳನ್ನು ತೊಡೆದುಹಾಕಿ ಏಕತೆ ಮತ್ತು ಸೌಹಾರ್ದ ಮೂಡಿಸಲು ನಾನು ನಿಮ್ಮ ಆತ್ಮದೊಳಗೆ ಶಾಂತಿ ದೂತನ ಕೆಲಸ ಮಾಡಬೇಕು. ಈ ಅಂಶಗಳನ್ನು, ನೀವೇ ಪ್ರೀತಿಸದಿದ್ದರೆ ಸೌಹಾರ್ದ ಮೂಡಿಸುವ ಕೆಲಸದಲ್ಲಿ ನೀವೇ ಕೈಜೋಡಿಸದಿದ್ದರೆ ನಾನು ತಾನೇ […]

ಒಳಿತು ಕೆಡಕು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 21

ಊರಿನ ಹಿರಿಯಜ್ಜ ಒಳಿತು ಕೆಡಕುಗಳ ಬಗ್ಗೆ ಮಾಡಿದ ಪ್ರಶ್ನೆಗೆ ಅವನು ಉತ್ತರಿಸತೊಡಗಿದ. ನಿಮ್ಮೊಳಗಿರುವ ಒಳಿತಿನ ಬಗ್ಗೆಯೇನೋ ಮಾತನಾಡಬಹುದು ಆದರೆ ಕೆಡುಕಿನ ಬಗ್ಗೆ ಸಾಧ್ಯವಿಲ್ಲ. ಏಕೆಂದರೆ, ಕೆಡಕು ಬೇರೇನೂ ಅಲ್ಲ; ಹಸಿವೆ ಬಾಯಾರಿಕೆಗಳಿಂದ ಬಳಲಿ ಬೆಂಡಾದ ನಿಮ್ಮ ಒಳಿತೇ ಹೌದು. ಒಳಿತಿಗೆ ಹಸಿವೆಯಾದರೆ ಅದು ಸುಮ್ಮನೇ ಕೂಡುವುದಿಲ್ಲ ಕಗ್ಗತ್ತಲ ಗುಹೆಗೂ ಅನ್ನ ಹುಡುಕಿಕೊಂಡು ಹೋಗುತ್ತದೆ, ಬಾಯಾರಿಕೆಯಾದರೆ ಬಗ್ಗಡದ ನೀರನ್ನೂ ಕುಡಿಯುತ್ತದೆ. ನೀವು ನಿಮ್ಮೊಂದಿಗೆ ಒಂದಾದಾಗ ಮಾತ್ರ ಒಳಿತನ್ನು ಸಾಧಿಸುತ್ತೀರಿ. ಆದರೆ, ನೀವು ನಿಮ್ಮೊಡನೆ ಒಂದಾಗದೇ ಹೋದ ಮಾತ್ರಕ್ಕೆ ಕೆಡುಕಿಗೆ […]