ಅದ್ವೈತ, ವಿಶಿಷ್ಟಾದ್ವೈತ, ದ್ವೈತ | ಸನಾತನ ಸಾಹಿತ್ಯ ~ ಮೂಲಪಾಠಗಳು #34

ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳ ಅರ್ಥೈಸುವಿಕೆಯಿಂದ ಹೊಮ್ಮಿದ ಮತಗಳಾಗಿವೆ. ಕ್ರಮವಾಗಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಈ ಮೂರು ಸಿದ್ಧಾಂತಗಳ ಪ್ರವರ್ತಕರಾಗಿದ್ದಾರೆ. ಈ ಮೂವರು ಆಚಾರ್ಯರಿಗೂ ಕೃಷ್ಣದ್ವೈಪಾಯನ ವ್ಯಾಸರೇ ಮೂಲ ಗುರುವಾಗಿದ್ದಾರೆ. ಈ ಮೂರೂ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ಮೂರೂ ವೇದಾಂತ ದರ್ಶನಗಳೇ ಆಗಿದ್ದು, ತಮ್ಮ ತಮ್ಮ ಆಧ್ಯಾತ್ಮಿಕ‌ ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದ್ದಾರೆ. ಮೊದಲು ಶಂಕರಾಚಾರ್ಯರು ಅದ್ವೈತ […]