ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿತ್ತೆ? : Tea time Story

ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ. ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ. ಒಂದು […]

ಸತ್ಯವನ್ನು ಮಾರಲೊಲ್ಲದ ಮಹಾವೀರ ಮತ್ತು ರಾಜನಿಗೆ ಪಾಠ ಹೇಳಿದ ಜಾಡಮಾಲಿ

ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ ನಮ್ಮ ಪ್ರಜೆಗಳು ದಂಡುಗಟ್ಟಿಕೊಂಡು ಮಹಾವೀರನ ಬಳಿ ಹೋಗುತ್ತಾರೆ? ಆತನ ಬಳಿ ಅಂಥದ್ದೇನಿದೆ?” ಎಂದು ಕೇಳಿದನು. ಅದಕ್ಕೆ ಮಂತ್ರಿ, “ಮಹಾಪ್ರಭೂ, ಮಹಾವೀರನ ಬಳಿ ಸತ್ಯವಿದೆ.” ಎಂದು ಚುಟುಕಾಗಿ ಉತ್ತರಿಸಿದನು. ಬಿಂಬಾಸುರನಿಗೆ ತಲೆ ಕೆಟ್ಟಿತು. ಯಕಶ್ಚಿತ್ ಸತ್ಯಕ್ಕಾಗಿ ಜನ ತಮ್ಮ ಸಮಯ ಪೋಲು ಮಾಡಿಕೊಂಡು ಹೋಗಿ ಅವನ ಕಾಲ ಬಳಿ ಕೂರುವುದೇ!? […]