ಭಗವಾನ್ ಶ್ರೀ ಕೃಷ್ಣನಲ್ಲಿ ಕುಂತೀದೇವಿ ಮಾಡುವ ಪ್ರಾರ್ಥನೆಗಳು

ಸಂಬಂಧದಲ್ಲಿ ಶ್ರೀಕೃಷ್ಣನಿಗೆ ಸೋದರತ್ತೆ ಆಗಬೇಕಿದ್ದ ಕುಂತಿ, ಆತನ ದೈವೀಗುಣಗಳನ್ನು ಗುರುತಿಸಿದ್ದಳು. ಹಾಗೆಂದೇ ಅವನ ಭಕ್ತಳೂ ಆಗಿದ್ದಳು. ಕುಂತಿ ದೇವಿ ತನ್ನ ಸೋದರಳಿಯನೂ ಸ್ವತಃ ಪರಮಾತ್ಮನೂ ಆದ ಶ್ರೀಕೃಷ್ಣನಲ್ಲಿ ಮಾಡುವ ಕೆಲವು ಪ್ರಾರ್ಥನೆಗಳು ಇಲ್ಲಿವೆ…. ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ | ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ || ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ | ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ || ಶ್ರೀ ಕೃಷ್ಣನಿಗೆ ನಮಸ್ಕಾರ. ವಸುದೇವ – ದೇವಕಿಯರ ಮಗನಾದ ವಾಸುದೇವನಿಗೆ ನಮಸ್ಕಾರ. ನಂದಗೋಪನ ಮಗನೇ, […]

ಇಂದ್ರಿಯಗಳನ್ನೂ ಮನಸ್ಸನ್ನೂ ಶಾಂತಗೊಳಿಸುವಂತೆ ಕೋರುವ ದೇವಿ ಭುಜಂಗ ಪ್ರಯಾತ ಸ್ತೋತ್ರ

ಈ ಸ್ತೋತ್ರವನ್ನು ಕಂಠಪಾಠ ಮಾಡಿ, ಪ್ರತಿ ದಿನ ಕೆಲಸ ಕಾರ್ಯಗಳಲ್ಲಿ ತೊಡಗುವ ಮುನ್ನ ಇದನ್ನು ಸ್ಮರಿಸಿ. ಬದುಕು ಶಾಂತವೂ ಸಮಚಿತ್ತವೂ ಆಗಿ ನಿಮ್ಮನ್ನು ಕಾಯುವುದು… ~ ಸಾ.ಹಿರಣ್ಮಯೀ ಕದಾ ವಾ ಹೃಷೀಕಾಣಿ ಸಾಮ್ಯಂ ಭಜೇಯುಃ ಕದಾ ವಾ ಶತ್ರುರ್ನ ಮಿತ್ರಂ ಭವಾನಿ | ಕದಾ ವಾ ದುರಾಶಾವಿಷೂಚೀವಿಲೋಪಃ ಕದಾ ವಾ ಮನೋ ಮೇ ಸಮೂಲಂ ವಿನಶ್ಯೇತ್ || ದೇವಿ ಭುಜಂಗ ಪ್ರಯಾತ ಸ್ತೋತ್ರ : 19 || ಅರ್ಥ :  ಹೇ ಜಗಜ್ಜನನೀ, ನನ್ನ ಇಂದ್ರಿಯಗಳು ಶಾಂತವಾಗುವುದು ಯಾವಾಗ? […]

ಬೆಳಗಿನ ಪ್ರಾರ್ಥನೆ : ಮನಸ್ಸು ಮಂಗಳಕರವಾಗಿರಲಿ

ಯತ್ಪ್ರಜ್ಞಾನಮುತ ಚೇತೋ ಧೃತಿಶ್ಚ ಯಜ್ಜ್ಯೋತಿರಂತರಮೃತಂ ಪ್ರಜಾಸು| ಯಸ್ಮಾನ್ನ ಋತೇ ಕಿಂಚನ ಕರ್ಮ ಕ್ರಿಯತೇ ತನ್ಮೇ ಮನಃ ಶಿವಸಂಕಲ್ಪಮಸ್ತು|| ಅರ್ಥ: ಯಾವುದು ತಿಳುವಳಿಕೆಯೋ ಮತ್ತು ಆಲೋಚನೆಯ ಶಕ್ತಿಯೋ, ಯಾವುದು ದೃಢತೆಯಿಂದ ಕೂಡಿದೆಯೋ, ಯಾವುದು ಜನರೊಳಗೆ ಎಂದೂ ಅಳಿಯದ ಬೆಳಕಾಗಿರುವುದೋ, ಯಾವುದನ್ನು ಬಿಟ್ಟು ಯಾರೂ ಯಾವ ಕೆಲಸವನ್ನೂ ಮಾಡಲಾರರೊ ಆ ನನ್ನ ಮನಸ್ಸು ಮಂಗಳಕರವಾದ ಸಂಕಲ್ಪದಿಂದ ಕೂಡಿರಲಿ. ಎಲ್ಲರಿಗೂ ಸದಾ ಸನ್ಮಂಗಳವನ್ನೆ ಬಯಸಲಿ.  ಯೇ ಮೇ ಹೃದಯಂ ಯೇ ಚ ದೇವಾ ಯೇ ಅಂತರಿಕ್ಷಂ ಬಹುಧಾ ಕಲ್ಪಯಂತಿ| ಯೇ ಶ್ರೋತ್ರಂ […]

ಸ್ವಸ್ಥ ಪರಿಸರಕ್ಕಾಗಿ ಬೆಳಗಿನ ಪ್ರಾರ್ಥನೆಗಳು

ಓಂ ದ್ಯೌಃ ಶಾಂತಿರಂತರಿಕ್ಷಂ ಶಾತಿಃ ಪೃಥಿವೀ ಶಾಂತಿ – ರಾಪಃ ಶಾಂತಿರೋಷಧಯಃ ಶಾಂತಿಃ | ವನಸ್ಪತಯಃ ಶಾಂತಿರ್ವಿಶ್ವೇ ದೇವಾಃ ಶಾಂತಿರ್ಬ್ರಹ್ಮ ಶಾಂತಿಃ ಶಾಂತಿಃ ಶಾಂತಿಃ ಶಾಂತಿರೇವ ಶಾಂತಿಃ || ಸೂರ್ಯ – ಚಂದ್ರ – ತಾರಾವಳಿಗಳು ಶಾಂತಿಯಿಂದ ಕೂಡಿರಲಿ (ಅವುಗಳ ವಿಕೋಪಕ್ಕೆ ನಾವು ಒಳಗಾಗದೆ ಇರಲಿ), ಅಂತರಿಕ್ಷದಲ್ಲಿ ಶಾಂತಿ ಇರಲಿ (ವಾತಾವರಣವು ಶುದ್ಧವೂ ಆರೋಗ್ಯಕರವೂ ಆಗಿರಲಿ), ಭೂಮಿಯಲ್ಲಿ ಶಾಂತಿ ಇರಲಿ (ಭೂಕಂಪಾದಿಗಳು ಇಲ್ಲದಿರಲಿ), ನೀರಿನಲ್ಲಿ ಶಾಂತಿಯಿರಲಿ (ಅದು ಶುದ್ಧವಾಗಿರಲಿ, ಅತಿವೃಷ್ಟಿ – ಅನಾವೃಷ್ಟಿಗಳು ಇಲ್ಲದಿರಲಿ), ಗಿಡಮರಗಳು ಶಾಂತಿಯಿಂದಿರಲಿ […]

ಬದಲಾಯಿಸುವ ಭ್ರಮೆ ಮತ್ತು ಬದಲಾವಣೆಯ ಬಯಕೆ ~ ಸೂಫಿ ಬಯಾಜಿದನ ಕಥೆ

ಬದಲಾವಣೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಕೆಲವರು ಜಗತ್ತು ಬದಲಾಗಬೇಕೆಂದು ಹಪಹಪಿಸುತ್ತಾರೆ, ಮತ್ತೆ ಕೆಲವರು ನಾನು ಜಗತ್ತನ್ನು ಬದಲಾಯಿಸಿಬಿಡುತ್ತೇನೆ ಎಂದು ಭ್ರಮಿಸುತ್ತಾರೆ. ತಾನು ಕೂಡಾ ಇಂಥ ಭ್ರಮೆಯಲ್ಲಿ ಇದ್ದೆನೆಂದು ಸೂಫಿ ಸಂತ ಬಯಾಜಿದ್ ಬಸ್ತಮಿ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾನೆ  “ನಾನು ಚಿಕ್ಕವನಿದ್ದಾಗ ದೇವರಲ್ಲಿ ಪ್ರತಿದಿನವೂ ಬೇಡುತ್ತಿದ್ದುದು ಒಂದನ್ನೇ. ಈ ಜಗತ್ತನ್ನು ಬದಲಾಯಿಸುವ ಶಕ್ತಿ ನನಗೆ ಕೊಡು ಎಂದು. ನನಗೆ ನನ್ನ ಸುತ್ತಲಿನ ಎಲ್ಲ ಜನರೂ ತಪ್ಪಾಗಿ ಕಾಣುತ್ತಿದ್ದರು. ಪ್ರತಿಯೊಂದು ವ್ಯವಸ್ಥೆಯೂ ತಪ್ಪಾಗಿ ಕಾಣುತ್ತಿತ್ತು. ಯೌವನದ ದಿನಗಳಲ್ಲೂ ಇದು ಮುಂದುವರಿಯಿತು. ಆ […]

ಮಾಸ್ತಿಯವರ ಅಂತರಗಂಗೆಯಿಂದ ~ ಉಪನಿಷತ್ತುಗಳ ಪ್ರಾರ್ಥನೆ

ಈ ಉಪನಿಷತ್ತುಗಳನ್ನು ರಚಿಸಿದವರೂ ಋಷಿಗಳೇ. ಇವರು ಜನಸಾಮಾನ್ಯರು ಆವರೆಗೆ ಕಲಿತಿದ್ದ ವಿದ್ಯೆಯನ್ನು ಅಪರಾ ವಿದ್ಯೆ ಎಂದು ಕರೆದರು. ತಾವು ಉಪಾಸನೆ ಮಾಡಿದ ಹೊಸ ವಿದ್ಯೆಯನ್ನು ಪರಾ ವಿದ್ಯೆ ಎಂದು ಕರೆದರು. ವೇದಗಳ ಕಾಲ ನಮ್ಮ ಪೂರ್ವಿಕರ ಬೆಳವಣಿಗೆಯ ಆರಂಭದ ಕಾಲ. ಜಾಣ ಜನ ಲೋಕವನ್ನು ನೋಡಿ, ಅದರ ಚೆಲುವಿಗೆ ಮನ ಕೊಟ್ಟು, ಪ್ರಕೃತಿಯ ಹಿಂದಿನ ದೈವೀ ಶಕ್ತಿಯ ಇದಿರಲ್ಲಿ ಮಣಿದು, ಶುಭವನ್ನು ಬೇಡಿ, ಅದನ್ನು ತಕ್ಕಷ್ಟು ಪಡೆದು, ಅನುಭವಿಸಿ, ಸಂತೋಷದಿಂದ ಹಾಡಿದ ಕಾಲ. ಇಷ್ಟು ಸಂತೋಷವನ್ನು ಅನುಭವಿಸಲು […]

ಹಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?

ಗ್ರೀಕ್ ದೇಶದ ಕ್ರೀಟ್ ದ್ವೀಪದಲ್ಲಿ ಬಿಷಪ್ ಕ್ರೆಟಿನ್’ನ ಒಂದು ಪುಟ್ಟ ಚರ್ಚ್ ಇತ್ತು. ಆರಕ್ಕಿಂತ ಕಡಿಮೆ ಜನರಿದ್ದರೆ ಚರ್ಚ್ ತನ್ನ ಸೇವಾ ಪ್ರಾರ್ಥನೆಗಳನ್ನು ನಡೆಸಲಾಗುವುದಿಲ್ಲ ಎಂಬುದು ಆ ಗ್ರೀಕ್ ಸಾಂಪ್ರದಾಯಿಕ ಚರ್ಚಿನ ನಿಯಮಗಳಲ್ಲಿ ಒಂದಾಗಿತ್ತು. ಅದರಂತೆ ದಿನಾಲೂ ಆ ಊರಿನ ಆರು ಮುದುಕಿಯರು ಸಂಜೆಯ ಪ್ರಾರ್ಥನೆಗೆ ಬರುತ್ತಿದ್ದರು. ಒಂದು ದಿನ ಅವರಲ್ಲೊಬ್ಬ ಮುದುಕಿ ಸತ್ತುಹೋದಳು. ಮಾರನೆ ದಿನ ಸಂಜೆ ಪ್ರಾರ್ಥನೆಗೆ ಕೇವಲ ಐವರು ಮುದುಕಿಯರಿದ್ದಾರೆ! ಬಿಷಪ್ ಚಿಂತಿತನಾದ. ಅವರಲ್ಲೊಬ್ಬ ಮುದುಕಿಯನ್ನು ಕರೆದು, “ಈಗಿಂದೀಗಲೇ ಹೊರಗೆ ಹೋಗಿ ರಸ್ತೆಯಲ್ಲಿ […]