ವೈರಭಾವದಲ್ಲಿ ಸಂಚಯವಾಗುವ ಶಕ್ತಿ ನಕಾರತ್ಮಕವಾಗಿರುತ್ತದೆ ~ ಓಶೋ ಚಿಂತನೆ

ನಿಮ್ಮ ಬದುಕನ್ನು ನೀವೇ ಒಮ್ಮೆ ಅವಲೋಕಿಸಿಕೊಳ್ಳಿ. ನೀವು ವೈರಭಾವದಲ್ಲಿ ಶಕ್ತಿಶಾಲಿಗಳಾಗುವಿರಿ ಮತ್ತು ಶಾಂತಸ್ಥಿತಿಯಲ್ಲಿ ಶಕ್ತಿಹೀನರಾಗಿರುತ್ತೀರಿ ಎಂದು ನಿಮಗೇ ಅರಿವಾಗುತ್ತದೆ. ಇದರ ಅರ್ಥ, ವೈರಭಾವದಿಂದ ಹೆಚ್ಚು ಲಾಭ ಎಂದಲ್ಲ, ನೀವು ಕಲುಷಿತ ಭಾವದ ಗಾಢ ಪ್ರಭಾವಕ್ಕೆ ಒಳಗಾಗಿದ್ದೀರಿ ಎಂದು! ನಿಮಗೆ ನೀವು ಚಿಕಿತ್ಸೆ ಕೊಟ್ಟುಕೊಳ್ಳಬೇಕಾಗಿರುವುದು ಇಲ್ಲಿ. ಕಲುಷಿತ ಭಾವದ ಪ್ರಭಾವ ಗಾಢವಾದಷ್ಟೂ ಅಂತರಂಗದ ಪ್ರವೇಶ ಕಷ್ಟಕರವಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ~ ಓಶೋ ರಜನೀಶ್ ಮನುಷ್ಯನ ಭಾವ ವಿಕಲ್ಪಗಳಲ್ಲಿ ನಾಲ್ಕು ವಿಕಲ್ಪಗಳು ಬಹಳ ಮುಖ್ಯವಾದವು. ಅವುಗಳಲ್ಲಿ ಮೊದಲನೆಯದು […]

ನಾವು ಪ್ರೀತಿಸುವುದು ನಮ್ಮ ಸುಖಕ್ಕಾಗಿಯೇ : ಸ್ವಾಮಿ ರಾಮತೀರ್ಥ

ಯಾವುದಾದರೂ ವಸ್ತುವನ್ನು ನಾವು ಪ್ರೀತಿಸುವುದು ಆ ವಸ್ತುವಿನ ಸಲುವಾಗಿಯೇ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯ; ಸಂಗೀತಕ್ಕಾಗಿ ಸಂಗೀತ; ಕಲೆಗಾಗಿ ಕಲೆ ಎಂದು ಮೊದಲಾಗಿ ಕೆಲವರು ವಾದಿಸುವುದುಂಟು. ಇದು ಸುಳ್ಳು. ಪ್ರಪಂಚದಲ್ಲಿ ಯಾವುದನ್ನು ಅಭಿಮಾನಿಸಿದರೂ ಅದು ನಮಗಾಗಿ, ನಮ್ಮ ಸುಖಕ್ಕಾಗಿ ~ ಸ್ವಾಮಿ ರಾಮತೀರ್ಥ ನಾವು ಯಾರನ್ನಾದರೂ ಪ್ರೇಮಿಸುವುದು ನಮಗೆ ಹಿತವಾಗುತ್ತದೆ ಎಂದೇ ಹೊರತು ಅವರಿಗೆ ಪ್ರಯವಾಗುತ್ತದೆ ಎಂದಲ್ಲ. ನಮ್ಮೊಳಗಿನ ಆತ್ಮಚೈತನ್ಯದ ಪ್ರಿಯಭಾವನೆ ಎಂಬ ಬೆಳಕು ಯಾವ ವಸ್ತುವಿನ ಮೇಲೆ ಬೀಳುತ್ತದೆಯೋ ಅದು […]