ಪ್ರಾಚೀನ ಪ್ರೇಮ ಕಥೆಗಳು : ಬಿಲ್ವಮಂಗಳನ ಚೂಡಾಮಣಿ

ಹೊರಗಿನ ಮಳೆ ಬಿಲ್ವಮಂಗಳನ ಎದೆಯಲ್ಲೂ ಸುರಿಯಿತು. ಮನದೊಳಗೆ ಮಿಂಚಾಯಿತು. ಕಾಲ ಕೂಡಿ ಬಂದಿತ್ತು. ಅವಳ ಪಾದಕ್ಕೆ ಮುತ್ತಿಟ್ಟವನೇ ಎದ್ದು ಹೊರಟ. ಬೆಳಗಾಗುವವರೆಗೂ ಜಡಿಮಳೆಯಲ್ಲೇ ನಡೆದ. ಬೆಳಕು ಮೂಡುವ ಹೊತ್ತಿಗೆ ಸರಿಯಾಗಿ ದೇವಾಲಯದಲ್ಲಿ ನಿಂತಿದ್ದ ~ ಚೇತನಾ ಬಿಲ್ವಮಂಗಳ ಒಬ್ಬ ಸಜ್ಜನ, ಶ್ರೀಮಂತ. ಜೊತೆಗೆ ಮಹಾನ್ ಹರಿಭಕ್ತ. ನಿದ್ರೆ, ಹಸಿವು, ಮೈಥುನಗಳಷ್ಟೇ ಭಕ್ತಿಯೂ ಸಹಜವೇನೋ ಅನ್ನುವಷ್ಟು ತೀವ್ರತೆ ಇತ್ತು ಅವನಲ್ಲಿ. ಚೂಡಾಮಣಿ, ಸೌಂದರ್ಯ ಶಿರೋಮಣಿ. ಹುಟ್ಟಿದ್ದು ವೇಶ್ಯೆಯರ ಕುಲದಲ್ಲಿ. ಇವಳು ಬಿಲ್ವಮಂಗಳನ ಮನದನ್ನೆ. ಅವರಿಬ್ಬರ ಪ್ರೇಮಕ್ಕೆ ಅವರ ಸುತ್ತಮುತ್ತಲಿನ […]