ಮೂರ್ಖರಾಗಿರಿ, ಯಾತನೆ ಪಡಿ!: ಅಧ್ಯಾತ್ಮ ಡೈರಿ

ಮನಸ್ಸಿಗೆ ಬೀಗ ಹಾಕಿಕೊಂಡು ಗಪ್ಪನೆ ಕುಳಿತರೆ ಯಾವ ಸಂತೋಷವೂ ಬೀಗ ಮುರಿದು ನಿಮ್ಮೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ನೀವು ನಿಮ್ಮ ಬೀಗ ತೆರೆಯುವುದನ್ನು ಬಿಟ್ಟು, ಕೀಲಿ ಹುಡುಕಿಕೊಳ್ಳುವುದನ್ನು ಬಿಟ್ಟು, ಸಂತೋಷ ನನ್ನನ್ನು ಪ್ರವೇಶಿಸುತ್ತಿಲ್ಲ, ನಾನು ನತದೃಷ್ಟೆ/ನತದೃಷ್ಟ ಎಂದು ಗೋಳಾಡಿದರೆ ಏನು ಬಂತು?

ಪರಮ ಚೈತನ್ಯದೆಡೆಗೆ ಪ್ರೇಮವಿರಲಿ ~ ರಾಮತೀರ್ಥರ ವಿಚಾರ ಧಾರೆ

ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ

ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….

ಇಡಿಯ ಭಾಗವತದಲ್ಲಿ ಕೃಷ್ಣ ರಾಧೆಯನ್ನು ನೆನೆದು ಕಣ್ಣೀರಿಡುವ ವಿವರವಿಲ್ಲ. ಆದರೆ, ಅವನ ಕಥನ ಓದುವ ಸಹೃದಯರು ತಾವೇ ಕೃಷ್ಣನಾಗಿ, ರಾಧೆಯನ್ನು ಭಾವಿಸಿ, ಅವಳಿಗಾಗಿ ಮಿಡಿಯುತ್ತಾರೆ. ಹೀಗೆ ರಾಧಾಪ್ರೇಮದಿಂದ ಕೃಷ್ಣ, ನಮ್ಮೆದೆಗಳಲ್ಲಿ ಮೊಳೆಯುತ್ತಾನೆ ~ ಚೇತನಾ ತೀರ್ಥಹಳ್ಳಿ ಯಾವ ಪ್ರೇಮ ವಿರಹದಲ್ಲಿ ದುಃಖ ತರುವುದಿಲ್ಲವೋ ಅದು ಅತ್ಯುನ್ನತವಾದದ್ದು. ಯಾವ ಪ್ರೇಮ, ಪ್ರೇಮಿಯನ್ನು ಹೊಂದುವ ಸ್ವಾರ್ಥವನ್ನಾಗಲೀ ಮೋಹವನ್ನಾಗಲೀ ಹುಟ್ಟಿಸುವುದಿಲ್ಲವೋ ಅದು ಅತ್ಯುತ್ಕೃಷ್ಟ ಪ್ರೇಮ. ಇಂಥ ಪ್ರೇಮಕ್ಕೆ ಪರಮೋನ್ನತ ಮಾದರಿ – ರಾಧಾ ಮಾಧವ ಜೋಡಿ. ಕೃಷ್ಣನಿಗೆ ಇಂಥದೊಂದು ಪ್ರೇಮಪಾಠವನ್ನು ಕಲಿಸಿದವಳು […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #39

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭಗವಂತ ಎಷ್ಟು ಸೂಕ್ಷ್ಮ, ಎಷ್ಟು ನಿಖರ ಸೃಷ್ಟಿಕರ್ತನೆಂದರೆ, ಜಗತ್ತಿನ ಪ್ರತಿಯೊಂದು ಘಟನೆಯೂ ನಿರ್ಧಾರಿತ ರೀತಿಯಲ್ಲೇ ನಿಗದಿತ ಸಮಯದಲ್ಲೇ ಸಂಭವಿಸುವುದು. ಒಂದು ನಿಮಿಷ ಕೂಡ ಆಚೀಚೆ ಆಗುವ ಅವಕಾಶವಿಲ್ಲ. ಯಾರಿಗೂ ಯಾವುದಕ್ಕೂ ಗಡಿಯಾರ, ಆದ್ಯತೆಯನ್ನು ನೀಡುವುದಿಲ್ಲ ವಂಚನೆಯನ್ನೂ ಮಾಡುವುದಿಲ್ಲ. ಕಾಲ ಹಾಕಿದ ಗೆರೆಯನ್ನು ಪ್ರೇಮ ಮತ್ತು ಸಾವು ದಾಟಿದ ಉದಾಹರಣೆಗಳೇ ಇಲ್ಲ. 36ನೇ ನಿಯಮ ಇಲ್ಲಿ ನೋಡಿ : https://aralimara.com/2020/03/04/sufi-92/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #38

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಪ್ರತೀ ಓದುಗನೂ ತನ್ನ ಸಾಮರ್ಥ್ಯಕ್ಕನುಗುಣವಾಗಿ ಪವಿತ್ರ ಗ್ರಂಥಗಳನ್ನು ವಿಶ್ಲೇಷಣೆ ಮಾಡುತ್ತಾನೆ. ಪವಿತ್ರ ಗ್ರಂಥದ ಪುಟಗಳನ್ನು ತೆರೆಯುತ್ತಿದ್ದಂತೆಯೇ, ನಾಲ್ಕು ಹಂತದ ಒಳನೋಟಗಳು ನಮ್ಮನ್ನು ಸ್ವಾಗತಿಸುತ್ತವೆ. ಮೊದಲನೇಯದೇ, ಹೊರಗಿನ ಸಾಮಾನ್ಯ ಅರ್ಥ; ಬಹುತೇಕ ಎಲ್ಲರೂ ಇಷ್ಟಕ್ಕೇ ಸಂತೃಪ್ತರು. ಎರಡನೇಯದು ಒಳ ಅರ್ಥ, ಬುದ್ಧಿಗೆ ತಾಕುವಂಥದು. ಮೂರನೇಯದು ಈ ಒಳ ಅರ್ಥದ ಹೊಟ್ಟೆಯಲ್ಲಿರುವಂಥದು. ನಾಲ್ಕನೇಯದು ಎಷ್ಟು ಆಳದಲ್ಲಿದೆಯೆಂದರೆ ಯಾವ ಮಾತಿಗೂ ನಿಲುಕುವುದಿಲ್ಲ ವರ್ಣಿಸಲೂ ಆಗದು. ಯಾವುದನ್ನ ಹೇಳಲಿಕ್ಕೆ ಆಗುವುದಿಲ್ಲವೋ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #37

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಸತ್ತ ಮೇಲೆ ಎಲ್ಲ ಇಲ್ಲೇ ಬಿಟ್ಟು ಹೋಗಬೇಕು ಎನ್ನುವುದು ಗೊತ್ತಿದ್ದರೂ, ಮನುಷ್ಯ, ಇನ್ನೊಂದು ಹಂತಕ್ಕೆ ಏರಲು ಇನ್ನೊಬ್ಬನ ಹಾಗೆ ಬದುಕಲು ಸದಾ ತುಡಿಯುತ್ತಿರುತ್ತಾನೆ. ಆದರೆ ನೀನು ಮಾತ್ರ ಆತ್ಯಂತಿಕ ಖಾಲಿಯತ್ತ ಹೆಜ್ಜೆ ಹಾಕು. ಬೆಳಕಿನಂತೆ ಬದುಕು ಮತ್ತು ಹೂವಿನ ಹಾಗೆ ವಿದಾಯ ಹೇಳು. ಮನುಷ್ಯ ಥೇಟ್ ಮಡಿಕೆಯಂತೆ. ಹೊರಗಿನ ಯಾವ ಅಲಂಕಾರಗಳೂ ಅಲ್ಲ, ಹೊರ ಮೈ ಕೂಡ ಅಲ್ಲ, ಬದುಕಿನ ದಿವ್ಯವನ್ನು ಹಿಡಿದಿಟ್ಟುಕೊಳ್ಳುವುದು ಒಳಗಿನ […]