ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #39

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭಗವಂತ ಎಷ್ಟು ಸೂಕ್ಷ್ಮ, ಎಷ್ಟು ನಿಖರ ಸೃಷ್ಟಿಕರ್ತನೆಂದರೆ, ಜಗತ್ತಿನ ಪ್ರತಿಯೊಂದು ಘಟನೆಯೂ ನಿರ್ಧಾರಿತ ರೀತಿಯಲ್ಲೇ ನಿಗದಿತ ಸಮಯದಲ್ಲೇ ಸಂಭವಿಸುವುದು. ಒಂದು ನಿಮಿಷ ಕೂಡ ಆಚೀಚೆ ಆಗುವ ಅವಕಾಶವಿಲ್ಲ. ಯಾರಿಗೂ ಯಾವುದಕ್ಕೂ ಗಡಿಯಾರ, ಆದ್ಯತೆಯನ್ನು ನೀಡುವುದಿಲ್ಲ ವಂಚನೆಯನ್ನೂ ಮಾಡುವುದಿಲ್ಲ. ಕಾಲ ಹಾಕಿದ ಗೆರೆಯನ್ನು ಪ್ರೇಮ ಮತ್ತು ಸಾವು ದಾಟಿದ ಉದಾಹರಣೆಗಳೇ ಇಲ್ಲ. 36ನೇ ನಿಯಮ ಇಲ್ಲಿ ನೋಡಿ : https://aralimara.com/2020/03/04/sufi-92/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #38

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಪ್ರತೀ ಓದುಗನೂ ತನ್ನ ಸಾಮರ್ಥ್ಯಕ್ಕನುಗುಣವಾಗಿ ಪವಿತ್ರ ಗ್ರಂಥಗಳನ್ನು ವಿಶ್ಲೇಷಣೆ ಮಾಡುತ್ತಾನೆ. ಪವಿತ್ರ ಗ್ರಂಥದ ಪುಟಗಳನ್ನು ತೆರೆಯುತ್ತಿದ್ದಂತೆಯೇ, ನಾಲ್ಕು ಹಂತದ ಒಳನೋಟಗಳು ನಮ್ಮನ್ನು ಸ್ವಾಗತಿಸುತ್ತವೆ. ಮೊದಲನೇಯದೇ, ಹೊರಗಿನ ಸಾಮಾನ್ಯ ಅರ್ಥ; ಬಹುತೇಕ ಎಲ್ಲರೂ ಇಷ್ಟಕ್ಕೇ ಸಂತೃಪ್ತರು. ಎರಡನೇಯದು ಒಳ ಅರ್ಥ, ಬುದ್ಧಿಗೆ ತಾಕುವಂಥದು. ಮೂರನೇಯದು ಈ ಒಳ ಅರ್ಥದ ಹೊಟ್ಟೆಯಲ್ಲಿರುವಂಥದು. ನಾಲ್ಕನೇಯದು ಎಷ್ಟು ಆಳದಲ್ಲಿದೆಯೆಂದರೆ ಯಾವ ಮಾತಿಗೂ ನಿಲುಕುವುದಿಲ್ಲ ವರ್ಣಿಸಲೂ ಆಗದು. ಯಾವುದನ್ನ ಹೇಳಲಿಕ್ಕೆ ಆಗುವುದಿಲ್ಲವೋ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #37

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಸತ್ತ ಮೇಲೆ ಎಲ್ಲ ಇಲ್ಲೇ ಬಿಟ್ಟು ಹೋಗಬೇಕು ಎನ್ನುವುದು ಗೊತ್ತಿದ್ದರೂ, ಮನುಷ್ಯ, ಇನ್ನೊಂದು ಹಂತಕ್ಕೆ ಏರಲು ಇನ್ನೊಬ್ಬನ ಹಾಗೆ ಬದುಕಲು ಸದಾ ತುಡಿಯುತ್ತಿರುತ್ತಾನೆ. ಆದರೆ ನೀನು ಮಾತ್ರ ಆತ್ಯಂತಿಕ ಖಾಲಿಯತ್ತ ಹೆಜ್ಜೆ ಹಾಕು. ಬೆಳಕಿನಂತೆ ಬದುಕು ಮತ್ತು ಹೂವಿನ ಹಾಗೆ ವಿದಾಯ ಹೇಳು. ಮನುಷ್ಯ ಥೇಟ್ ಮಡಿಕೆಯಂತೆ. ಹೊರಗಿನ ಯಾವ ಅಲಂಕಾರಗಳೂ ಅಲ್ಲ, ಹೊರ ಮೈ ಕೂಡ ಅಲ್ಲ, ಬದುಕಿನ ದಿವ್ಯವನ್ನು ಹಿಡಿದಿಟ್ಟುಕೊಳ್ಳುವುದು ಒಳಗಿನ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #36

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ‘ಭಾಗ’ ಬದಲಾದರೂ ‘ಪೂರ್ಣ’ ಬದಲಾಗುವುದಿಲ್ಲ. ಈ ಜಗತ್ತಿನಿಂದ ನಿರ್ಗಮಿಸುವ ಪ್ರತೀ ಕೆಡಕಿಗೆ ಬದಲಾಗಿ ಇನ್ನೊಂದು ಕೆಡಕು ಬಂದು ಸೇರಿಕೊಳ್ಳುತ್ತದೆ ಹಾಗೆಯೇ ಪ್ರತೀ ಒಳತಿಗೆ ಬದಲಾಗಿ ಮತ್ತೊಂದು ಒಳಿತು. ಹಾಗಾಗಿ ಜಗತ್ತಿನಲ್ಲಿ ಯಾವುದೂ ಇದ್ದ ಹಾಗೆ ಇರುವುದಿಲ್ಲ ಮತ್ತು, ಹಾಗೆ ನೋಡಿದರೆ ನಿಜವಾಗಿ ಯಾವುದೂ ಬದಲಾಗುವುದಿಲ್ಲ. ಈ ಜಗತ್ತಿನಿಂದ ಒಬ್ಬ ಸೂಫೀಯ ನಿರ್ಗಮನವಾಗುತ್ತಿದ್ದಂತೆ ಇನ್ನೊಬ್ಬ ಸೂಫಿಯ ಆಗಮನವಾಗುತ್ತದೆ. 34ನೇ ನಿಯಮ ಇಲ್ಲಿ ನೋಡಿ : https://aralimara.com/2020/02/22/sufi-89/

ಪ್ರೀತಿ ಪ್ರೇಮದ ಏಳು ವಿಧಗಳು : ನಿಮ್ಮದು ಯಾವ ಬಗೆಯ ಪ್ರೀತಿ?

ಪ್ರೀತಿ ಪ್ರೇಮವನ್ನು ಮೊದಲಿಗೆ ಏಕೈಕ ದೃಷ್ಟಿಯಿಂದ ನೋಡುವ ಪರಿಪಾಠವನ್ನು ಬಿಟ್ಟುಬಿಡಬೇಕು. ಅಂದರೆ, ಪ್ರೀತಿ ಪ್ರೇಮದ ಬಹುರೂಪಿ ತತ್ವವನ್ನು ಅರಿತು ಕೊಳ್ಳಬೇಕು. ಈ ದಿಸೆಯಲ್ಲಿ ಪ್ರಾಚೀನ ಗ್ರೀಕರು ನಿರೂಪಣೆ ಮಾಡಿರುವ ಪ್ರೀತಿ ಪ್ರೇಮದ ವಿವಿಧ ಬಗೆಗಳು ; ಅವುಗಳ ಪ್ರಕ್ರಿಯಾತ್ಮಕ ಪರಿವರ್ತನೆಗಳು ಇಲ್ಲಿವೆ…  ~ ಚಂದ್ರಶೇಖರ ನಂಗಲಿ ‘ಒಂದು ಶಬ್ದಕ್ಕೆ ಒಂದು ಅರ್ಥ’ ಎಂಬ ಏಕೈಕ ದೃಷ್ಟಿಯಿಂದ ಹೊರಟರೆ, ಪ್ರೀತಿ ಪ್ರೇಮ ಎಂಬ ಶಬ್ದಗಳಿಗೆ ‘ರಮ್ಯಪ್ರೀತಿ’ ಅಥವಾ ‘ರಮ್ಯಪ್ರೇಮ’ ಎಂಬ ಜನಪ್ರಿಯ ಅರ್ಥವನ್ನು ಹೇಳಿ ಸುಮ್ಮನಾಗಬೇಕಷ್ಟೆ ! ಆದರೆ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #35

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಯಾವ ದಿಕ್ಕಾದರೂ ಸರಿ ಅಂಥ ವ್ಯತ್ಯಾಸವೆನೂ ಆಗದು. ನಿಮ್ಮ ಗುರಿ ಏನಾದರೂ ಇರಲಿ, ಆದರೆ ಪ್ರತೀ ಪ್ರಯಾಣ ನಿಮ್ಮ ಆಂತರ್ಯದ ಪ್ರಯಾಣವಾಗುವುದನ್ನ ದಯಮಾಡಿ ಖಚಿತಪಡಿಸಿಕೊಳ್ಳಿ . ನೀವು ನಿಮ್ಮ ಅಂತರಂಗವನ್ನು ಪ್ರವೇಶಿಸಿದಾಗ ಇಡೀ ಜಗತ್ತನ್ನೇ ಎದುರುಗೊಳ್ಳುತ್ತೀರಿ ಮತ್ತು ಜಗತ್ತಿನಾಚೆಗೂ ಹೆಜ್ಜೆ ಹಾಕುತ್ತೀರಿ. 34ನೇ ನಿಯಮ ಇಲ್ಲಿ ನೋಡಿ : https://aralimara.com/2020/02/20/sufi-88/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #34

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭಗವಂತ ಸದಾ ನಮ್ಮ ಕೆಲಸದಲ್ಲಿಯೇ ಮಗ್ನ. ಮನುಷ್ಯನ ವಿಕಾಸ ಯಾವತ್ತಿದ್ದರೂ ಪ್ರಗತಿಯಲ್ಲಿರುವ ಪ್ರಕ್ರಿಯೆ. ಕೆಲಸ ನಿಧಾನವಾಗಿರಬಹುದು ಆದರೆ ನಿರಂತರವಾಗಿ ಮುಂದುವರೆಯುತ್ತಿದೆ. ಪ್ರತಿಯೊಬ್ಬ ಮನುಷ್ಯನೂ ಪೂರ್ಣವಾಗಲು ಕಾಯುತ್ತಿರುವ, ತಹತಹಿಸುತ್ತಿರುವ ಅಪೂರ್ಣ ಕಲಾಕೃತಿಗಳು. ಭಗವಂತ ಪ್ರತೀ ಮನುಷ್ಯನನ್ನು ಪ್ರತ್ಯೇಕ ಕಲಾಕೃತಿಯಂತೆ ಅನನ್ಯವಾಗಿ ಚಿತ್ರಿಸುತ್ತಾನೆ. ಮನುಷ್ಯತ್ವ ಒಂದು ಸೂಕ್ಷ್ಮ ಕಲಾಪ್ರಕಾರ, ಪ್ರತೀ ಚುಕ್ಕೆಯೂ ಪೂರ್ಣ ಚಿತ್ರದ ಅತ್ಯಂತ ಮುಖ್ಯ ಭಾಗ. 33ನೇ ನಿಯಮ ಇಲ್ಲಿ ನೋಡಿ : […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #33

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಜಗತ್ತು ನಿಂತಿರೋದೇ ‘ಕೊಡು-ಕೊಳ್ಳುವಿಕೆ’ ಯ ಸಿದ್ಧಾಂತದ ಮೇಲೆ. ಒಂದು ಹನಿ ಅಂತಃಕರಣ, ಒಂದು ತುಣುಕು ಕೇಡು ಕೂಡ ಕೊಟ್ಟಿದ್ದಕ್ಕೆ ಮೋಸವಿಲ್ಲದಂತೆ ವಾಪಸ್ಸಾಗಿ ಮತ್ತೆ ನಮ್ಮನ್ನು ಸೇರುತ್ತವೆ. ಯಾರಾದರೂ ಖೆಡ್ಡಾ ತೋಡುತ್ತಿದ್ದಾರೆಂದರೆ ನೆನಪಿರಲಿ, ಭಗವಂತ ಎಲ್ಲರಿಗಿಂತ ದೊಡ್ಡ ತಂತ್ರಗಾರ. ಈ ಮಾತನ್ನ ಗಟ್ಟಿಯಾಗಿ ನಂಬಿ, ಒಂದು ಎಲೆ ಕೂಡ ಕಂಪಿಸುವುದಿಲ್ಲ ಭಗವಂತನ ಅಣತಿಯಿಲ್ಲದೆ. ಅದ್ಭುತವಾದುದನ್ನೇ ಸೃಷ್ಟಿಸುತ್ತಾನೆ ಭಗವಂತ ಏನೇ ಸೃಷ್ಟಿಸಿದರು. 32ನೇ ನಿಯಮ ಇಲ್ಲಿ […]

ನಾರ್ಸಿಸಿಸ್ಟ್ ಪ್ರೇಮಿಯನ್ನು ಗುರುತಿಸುವುದು ಹೇಗೆ?

ನೀವು ಒಬ್ಬ/ಳು ಪ್ರೇಮಿಯಾಗಿದ್ದು, ನಿಮ್ಮಲ್ಲಿ ನಾರ್ಸಿಸಿಸ್ಟ್ ಗುಣವಿದ್ದರೆ, ನಿಮ್ಮ ಪ್ರೇಮ ಯಾವತ್ತೂ ಸಫಲವಾಗುವುದಿಲ್ಲ. ಏಕೆಂದರೆ ಪ್ರೇಮವು ಪರಸ್ಪರ ಪೂರಕವಾದ ಪ್ರಕ್ರಿಯೆ. ಅಲ್ಲಿ ನೀವು ನಿಮ್ಮ ಕುರಿತು ಕಡಿಮೆ ಮತ್ತು ಪ್ರೇಮಿಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿ ಈ ಕೆಳಗಿನ ಸಂಭಾಷಣೆಯಲ್ಲಿ ಕಾಣಿಸುವಂಥ ಆಲೋಚನೆ ಅಥವಾ ಅಸಹನೆ ಇರುವುದೇ ಆದರೆ, ನೀವು ನಾರ್ಸಿಸಿಸ್ಟ್ ಆಗಿದ್ದೀರಿ ಎಂದರ್ಥ ~ ಅಲಾವಿಕಾ ಈ ಸಂಭಾಷಣೆಯನ್ನು ಗಮನಿಸಿ. ಪ್ರೇಮಿಗಳಿಬ್ಬರು ಮಾತಾಡುತ್ತಾ ಕುಳಿತಿರುತ್ತಾರೆ. ಅವಳ ಫೋನ್’ಗೆ ಅವಳ ಅಮ್ಮನ ಕರೆ ಬರುತ್ತದೆ. ಅವನು : […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #31

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಮ್ಮ ನಂಬಿಕೆ, ವಿಶ್ವಾಸಗಳು ನಿಮ್ಮೊಳಗೆ ಗಟ್ಟಿಯಾಗಿ ಬೇರೂರ ಬೇಕಾದರೆ ಮೊದಲು ನಿಮ್ಮ ಹೃದಯ ಮೃದುವಾಗಬೇಕು, ಆರ್ದ್ರವಾಗಬೇಕು. ನಿಜ, ಅನಾರೋಗ್ಯ, ಅಪಘಾತ, ವಿರಹ, ಮೋಸ, ದುಗುಡ, ಒಂದಿಲ್ಲೊಂದು ರೀತಿಯಿಂದ ನಮ್ಮನ್ನು ಹಣ್ಣು ಮಾಡುತ್ತವೆ, ಹೆಚ್ಚೆಚ್ಚು ನಿಸ್ವಾರ್ಥಿಗಳನ್ನಾಗಿ, ಉದಾರಿಗಳನ್ನಾಗಿ, ಉದಾತ್ತರನ್ನಾಗಿಸುತ್ತವೆ, ನಮ್ಮಅಹಂಕಾರ, ತಾರತಮ್ಯ ಸ್ವಭಾವಗಳನ್ನು ಎಚ್ಚರಿಸುತ್ತವೆ. ಆದರೆ, ಕೆಲವರು ಮಾತ್ರ ಬದುಕಿನಿಂದ ಪಾಠ ಕಲಿತು ಅಂತಃಕರುಣಿಗಳಾಗುತ್ತಾರೆ, ಇನ್ನೂ ಕೆಲವರು ಮತ್ತಷ್ಟು ಕಠಿಣರಾಗುತ್ತ ಬದುಕಿಗೆ ಸವಾಲಾಗುತ್ತಾರೆ. 30ನೇ […]