ಪರೀಕ್ಷೆಯ ಫಲಿತಾಂಶ ಎದುರಿಸುವುದು ಹೇಗೆ? : ಭಗವದ್ಗೀತೆಯ ಪಾಠಗಳು #4

ಅದು ಶಾಲಾ ಕಾಲೇಜುಗಳ ಪಠ್ಯ ಪರೀಕ್ಷೆ ಇರಬಹುದು ಅಥವಾ ಉದ್ಯೋಗ ಸ್ಥಳದ ಯಾವುದೆ ಕೌಶಲ್ಯ ಬೇಡುವ ಸವಾಲು. ಅಥವಾ ಜೀವನದ ಮಹತ್ತರ ತಿರುವನ್ನು ನಿರ್ಧರಿಸುವ ಘಟ್ಟವೇ ಆಗಿರಬಹುದು. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ~ ಆನಂದಪೂರ್ಣ ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ […]

ಐನ್’ಸ್ಟೀನ್ ಹೇಳಿದ್ದು : ಅರಳಿಮರ POSTER

ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ ! ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ […]

ಬಯಕೆ ಬಳ್ಳಿಗಳನ್ನು ಕತ್ತರಿಸುವುದೇ ಶಾಶ್ವತ ಸಂತೋಷ ಹೊಂದುವ ಮಾರ್ಗ

ಒಂದು ಬಯಕೆ ಎದ್ದ ಘಳಿಗೆಯಲ್ಲಿ ನಾವು ಅದನ್ನು ತೃಪ್ತಿಪಡಿಸಲು ಪ್ರಯತ್ನ ಮಾಡುತ್ತೇವೆ. ಬಯಕೆಯನ್ನು ಪೂರೈಸಿಕೊಳ್ಳುವುದು ತೃಪ್ತಿ ಮತ್ತು ಆನಂದವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು  ಅನಂತ ಬಯಕೆಗಳನ್ನು ಹುಟ್ಟುಹಾಕುತ್ತ, ಅವುಗಳನ್ನು ತೃಪ್ತಿಪಡಿಸಲು ಹೆಣಗಾಡುತ್ತ ಇರುತ್ತೇವೆ  ~ ಸಾ.ಹಿರಣ್ಮಯಿ ಬಹುತೇಕರು ಇದೊಂದು ತಪ್ಪು ಮಾಡುತ್ತಾರೆ. ಕೆಲಸ ಮಾಡುವ ಮೊದಲೇ ಅದರ ಫಲದ ನಿರೀಕ್ಷೆ ಶುರುವಿಡುತ್ತಾರೆ. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ, ಆದರೆ ಫಲಿತಾಂಶವು ನಮ್ಮ ಕೈಯಲ್ಲಿಲ್ಲ ಎಂಬುದನ್ನು ನೆನಪಿಟ್ಟುಕೊಂಡರೆ, ವೈಫಲ್ಯದ ನೋವು ಬಾಧಿಸುವುದಿಲ್ಲ. ಏಕೆಂದರೆ […]

ಪರೀಕ್ಷೆ ಪೆಡಂಭೂತವಲ್ಲ : ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ…

ಮಕ್ಕಳ ಪಾಲನೆ ಪೋಷಣೆಗೆ ನಾವು ನೀಡುವುದೆಲ್ಲವೂ ನಮ್ಮ ಜವಾಬ್ದಾರಿಯ ಎಚ್ಚರದಿಂದ ಹೊರತು, ಮಕ್ಕಳ ಮೇಲೆ ನಾವು ಹೂಡಿಕೆ ಮಾಡುತ್ತಿಲ್ಲ. ನಮ್ಮ ಹೂಡಿಕೆಯನ್ನು ಲಾಭ ಸಹಿತ ಮರಳಿಸಲು ಮಕ್ಕಳು ಜೀವಂತ ಬ್ಯಾಂಕ್ ಅಲ್ಲ ಎನ್ನುವ ಸತ್ಯವನ್ನು ಮನವರಿಕೆ ಮಾಡಿಕೊಂಡರೆ ಬಹುಶಃ ನಿರೀಕ್ಷೆಗಳಿಂದ ಮುಕ್ತರಾಗಬಹುದು. ಓದಿನ ಮಕ್ಕಳಿರುವ ಮನೆಯಲ್ಲಿ ಮಾರ್ಚ್, ಏಪ್ರಿಲ್ ತಿಂಗಳುಗಳೆಂದರೆ ಕಾವಿನ ಕಾಲ. ಶಿವ ರಾತ್ರಿ ಕಳೆಯುತ್ತಿದ್ದ ಹಾಗೇ ಬೇಸಿಗೆಯ ಧಗೆ ಮಾತ್ರವಲ್ಲ, ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳ ಬಿಸಿಯೂ ಹೊತ್ತಿಕೊಳ್ಳುತ್ತದೆ. ಹಿಂದೆಲ್ಲ ಮುಂದಿನ ತರಗತಿಗೆ ಹೋಗುವ ರಹದಾರಿ […]