ನಿಮ್ಮ ಆಯ್ಕೆಯ ಬಣ್ಣ ಯಾವುದು ತಿಳಿಸಿ… ನಿಮ್ಮ ಗುಣವನ್ನು ಹೇಳುತ್ತೇವೆ!!

ಕೆಲವರಿಗೆ ಕೆಲವು ಬಣ್ಣ ಇಷ್ಟವಾಗುವುದೇ ಇಲ್ಲ. ಮತ್ತೆ ಕೆಲವರಿಗೆ ಕೆಲವು ಬಣ್ಣಗಳು ಬಹಳ ಇಷ್ಟ. ಹಲವು ಬಣ್ಣಗಳು ನಮಗೆ ಖುಷಿ ಕೊಟ್ಟರೂ ‘ನಮ್ಮ ಮೊದಲ ಮತ್ತು ಕೊನೆಯ ಆಯ್ಕೆ’ ಎಂಬುದೊಂದು ಇದ್ದೇ ಇರುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಕ್ಲೋಸೆಟ್ ತೆಗೆದು ನೋಡಿದರೆ, ತಮಗೇ ಅರಿವಿಲ್ಲದಂತೆ ತಮಗಿಷ್ಟದ ಬಣ್ಣದ ಬಟ್ಟೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನೋಡಬಹುದು. ನಮಗೆ ನಿರ್ದಿಷ್ಟ ಬಣ್ಣವು ಇಷ್ಟವಾಗಲು ಕಾರಣವೇನು? ನಮ್ಮ ಬಣ್ಣದ ಆಯ್ಕೆ ನಮ್ಮ ಯಾವ ಗುಣವನ್ನು ತೋರುತ್ತದೆ? ಇಲ್ಲಿದೆ, ಭಾವಕ್ಕೆ ತಕ್ಕಂತೆ ಬಣ್ಣಗಳ ಚುಟುಕು […]

ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ ಬಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. […]