ಬದಲಾವಣೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಕೆಲವರು ಜಗತ್ತು ಬದಲಾಗಬೇಕೆಂದು ಹಪಹಪಿಸುತ್ತಾರೆ, ಮತ್ತೆ ಕೆಲವರು ನಾನು ಜಗತ್ತನ್ನು ಬದಲಾಯಿಸಿಬಿಡುತ್ತೇನೆ ಎಂದು ಭ್ರಮಿಸುತ್ತಾರೆ. ತಾನು ಕೂಡಾ ಇಂಥ ಭ್ರಮೆಯಲ್ಲಿ ಇದ್ದೆನೆಂದು ಸೂಫಿ ಸಂತ ಬಯಾಜಿದ್ ಬಸ್ತಮಿ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾನೆ
ಹನಿಯಂತಲ್ಲ, ಕಡಲಿನಂತಿರಬೇಕು; ಬೆರಕೆಯಲ್ಲೂ ಬದಲಾಗದಂತೆ…
ಹನಿಗಳು ಇಂಗಿಹೋಗುತ್ತವೆ. ಅಥವಾ ಇನ್ಯಾವುದರಲ್ಲೋ ಬೆರೆತು, ತಾವೂ ಅದರಂತಾಗಿ ತಮ್ಮನ್ನು ಕಳೆದುಕೊಳ್ಳುತ್ತವೆ. ಅಂಥಾ ಅಗಣಿತ ಹನಿಗಳಿಂದಾದ ಕಡಲು ಮಾತ್ರ ಬತ್ತುವುದೂ ಇಲ್ಲ, ಕಳೆಯುವುದೂ ಇಲ್ಲ. ಎಷ್ಟೆಲ್ಲ ನದಿಗಳು ಬಂದು ಬೆರೆತರೂ ಅದು ಬದಲಾಗುವುದೂ ಇಲ್ಲ! : ಸಾಕಿ ಹನಿ ಹನಿ ಸೇರಿ ಹಳ್ಳ. ಹಳ್ಳಗಳು ತೊರೆಯಾಗಿ, ಭೋರ್ಗರೆವ ನದಿಯಾಗಿ ಹರಿದು ಬಂದು ಕಡಲು ಸೇರುತ್ತದೆ. ಈ ಪಯಣದಲ್ಲಿ ನದಿ ಅದೆಷ್ಟು ಊರುಗಳ ಬೆಟ್ಟ, ಗುಡ್ಡ, ಕಾಡುಗಳ ಮೂಲಕ ಹಾಯ್ದು ಬಂದಿರುತ್ತದೆಯಲ್ಲವೇ? ಹಾಗಾದರೆ ಅದು ಅದೆಷ್ಟು ಸತ್ವಗಳ ತನ್ನೊಳಗೆ ಮೈಗೂಡಿಸಿಕೊಂಡಿರಬಹುದು! […]
ನಿಮ್ಮ ನಿಜವಾದ ಪರಿಚಯವೇನು ತಿಳಿದಿದೆಯೇ?
ಜೀವನ ಪರ್ಯಂತ ನಿಮ್ಮ ಪರಿಚಯ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ದಿನವೊಂದರಲ್ಲೆ ಹಲವು ಬಾರಿ ನಿಮ್ಮ ಪರಿಚಯ ಬದಲಾಗುತ್ತದೆ. ನಿಮ್ಮ ಕೆಲಸ, ಹುದ್ದೆ, ಸಂಬಂಧಗಳಿಗೆ ತಕ್ಕಂತೆ ನಿಮ್ಮ ಪಾತ್ರಗಳು ಬದಲಾಗುತ್ತ ಇರುತ್ತವೆ, ಪರಿಚಯಗಳೂ. ಈ ಬದಲಾಗುತ್ತಿರುವ ಪರಿಚಯಗಳ ಕಂತೆಯೇ ನೀವಾಗಿದ್ದೀರೇನು? ವಾಸ್ತವದಲ್ಲಿ ನಿಮ್ಮ ಪರಿಚಯವೇನು ? ಈ ಎಲ್ಲ ಪರಿಚಯಗಳಿಂದ ಹೊರತಾಗಿ ನೀವೇನಾಗಿದ್ದೀರಿ? ಇವೆಲ್ಲ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವಂಥವು. ಆದರೆ ಮೂಲದಲ್ಲಿ ನೀವು ಯಾರಾಗಿದ್ದೀರಿ? ಏನಾಗಿದ್ದೀರಿ? ~ Whosoever Ji ಸುಷುಪ್ತಿಯಲ್ಲಿರಲು ಯಾರೂ ಭಯಪಡುವುದಿಲ್ಲ. ಪ್ರತಿಯೊಬ್ಬರೂ ಗಾಢ […]
ಅಧ್ಯಾತ್ಮ ಡೈರಿ : ಬದುಕು ಭಾಗ್ ಬಾನ್ ಸಿನಿಮಾ ಅಲ್ಲ!
ಮುಂದಿನ ಕ್ಷಣವೇ ಈ ಕ್ಷಣಕ್ಕಿಂತ ಬೇರೆಯಾಗಿರುತ್ತೆ. ಹೀಗಿರುವಾಗ ಮುಂದಿನ ಕ್ಷಣದ ನಾವಾಗಲೀ ಬೇರೆಯವರಾಗಲೀ ಈ ಹೊತ್ತಿನ ನಮ್ಮಂತೆ ಇರೋಕೆ ಹೇಗೆ ಸಾಧ್ಯ? ಇಷ್ಟು ಅರ್ಥವಾಗಿಬಿಟ್ಟರೆ ಸಂಸಾರ ಸಲೀಸು. ಆದರೆ ಅರ್ಥ ಮಾಡಿಕೊಳ್ಳಲು ಬಯಸುವವರ ಸಂಖ್ಯೆಯೇ ಬಹಳ ಕಡಿಮೆ ~ ಅಲಾವಿಕಾ ಪ್ರತಿ ಸಂಜೆ ಅಂವ ಕರೆಕ್ಟಾಗಿ ಇಂತಿಷ್ಟೇ ಸಮಯಕ್ಕೆ ಮನೆಗೆ ಬರ್ತಾನೆ. ಅವನು ಗೇಟು ತೆಗೆದು, ಅಂಗಳದುದ್ದ ನಡೆಯುತ್ತಾ ಇನ್ನೇನು ಹೊಸ್ತಿಲು ತಲುಪಿ ಕದ ತಟ್ಟಬೇಕು, ಅವಳ ಮುಗುಳ್ನಗು ಕದ ತೆರೆಯುತ್ತದೆ. ಅವರ ಮದುವೆಯಾದ ಮೊದಲ ದಿನದಿಂದ […]
ವಸ್ತುವು ಮತ್ತೊಂದರಿಂದ ಮರುಪೂರಣಕ್ಕೆ ಒಳಗಾಗುವುದೇ ಬದಲಾವಣೆ
ನಮ್ಮ ಜೀವಕೋಶಗಳು ಸತ್ತು ಹೊಸತು ಹುಟ್ಟದೆ, ಬದಲಾವಣೆ ಘಟಿಸದೆ, ನಮ್ಮ ದೇಹದ ನಿರಂತರತೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ, ನಾವು ಯಾವ ನಾವಾಗಿ ಉಳಿದಿಲ್ಲವೋ ಆ ನಾವು ಇದ್ದ ಭೂತಕಾಲದ ಬಗ್ಗೆ ಚಿಂತಿಸುವುದು ಏತಕ್ಕಾಗಿ? ಇದನ್ನು ಮನದಟ್ಟು ಮಾಡಿಸುವುದು ಹೆರಾಕ್ಲೀಟಸ್’ನ ಮಾತುಗಳ ಹಿಂದಿನ ಉದ್ದೇಶ. ಒಂದೇ ನದಿಗೆ ಒಬ್ಬ ಮನುಷ್ಯ ಎರಡು ಸಲ ಕಾಲಿಡಲು ಸಾಧ್ಯವಿಲ್ಲ. ಯಾಕೆಂದರೆ ಅದು ಅದೇ ನದಿಯಾಗಿರುವುದಿಲ್ಲ, ಮನುಷ್ಯ ಕೂಡಾ. ಇದು ಕ್ರಿ.ಪೂ 4 – 5 ನೇ ಶತಮಾನದಲ್ಲಿ ಆಗಿಹೋದ ಗ್ರೀಕ್ ತತ್ತ್ವಜ್ಞಾನಿ ಹೆರಾಕ್ಲೀಟಸ್ […]