ನಮ್ಮ ಹೊಣೆಯನ್ನೇ ಹೊರದೆ ಮುಕ್ತವಾಗಿರಲು ಬಯಸುತ್ತೇವೆ. ನಾವು ನಿಜವಾಗಿಯೂ ಮುಕ್ತವಾಗಿ ಇರಬೇಕೆಂದರೆ, ಮೊದಲು ನಮ್ಮ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು ~ ಅಲಾವಿಕಾ
ಸಾವು ಕಲಿಸುವ ಬದುಕಿನ 7 ಸರಳ ಪಾಠಗಳು
ಸಾವಿಗಿಂತ ದೊಡ್ಡ ಶಿಕ್ಷಕ ಮತ್ತೊಂದಿಲ್ಲ. ಮಹಾಭಾರತದಲ್ಲಿ ಒಂದು ಮಾತು ಬರುತ್ತದೆ. “ದಿನದಿನವೂ ಜನ ಸಾಯುವುದನ್ನು ನೋಡಿದರೂ ತಮಗೆ ಸಾವೇ ಇಲ್ಲ ಅನ್ನುವಂತೆ ಆಡುವವರನ್ನು ನೋಡುವುದಕ್ಕಿಂತ ದೊಡ್ಡ ಆಶ್ಚರ್ಯವೇನಿದೆ?” ಎಂದು.
ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…
ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು | ಅಲಾವಿಕಾ
ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು
ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ. ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.
ದೈನಂದಿನ ಯುದ್ಧಕ್ಕೆ ಭಗವದ್ಗೀತೆಯ 8 ಪಾಠಗಳು
ಬದುಕೇ ಒಂದು ಯುದ್ಧ. ಯುದ್ಧ ಪ್ರಕ್ರಿಯೆ ಕೂಡಾ ಬದುಕಿನ ಸವಾಲುಗಳಿಗಿಂತ ಬೇರೆಯಲ್ಲ. ಯುದ್ಧಕ್ಕೂ ಬದುಕಿಗೂ ಹೊಂದುವಂಥ ಬೋಧನೆಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅವುಗಳಲ್ಲಿ 8 ಮುಖ್ಯ ಹೇಳಿಕೆಗಳು ಇಲ್ಲಿವೆ…
ಸುಂದರ ಬದುಕಿಗೆ 8 ತಾವೋ ಸೂತ್ರಗಳು : ಅರಳಿಮರ video
ಆದ್ಯತೆಯಂತೆ ಬದುಕು ನಡೆಸುವ ಬಗೆ
ಬುದ್ಧನ ಬದ್ಧತೆ ಹೊಂದಿರುವವರಿಗೆ ಮಾತ್ರ ಆದ್ಯತೆಯಂತೆ ನಡೆಯುವ ಅಧಿಕಾರ ಇರುತ್ತದೆ ….| ಆನಂದಪೂರ್ಣ ಸಾಮಾನ್ಯವಾಗಿ ಹೀಗಾಗುತ್ತದೆ; ವಿಶೇಷವಾಗಿ ಸಂಗಾತಿಗಳ ನಡುವೆ ಹಾಗೂ ಸ್ನೇಹಿತರಲ್ಲಿ. “ನಿನಗೆ ನನಗಿಂತ ಅದೇ ಮುಖ್ಯವಾಗಿಹೋಯಿತು” ಎಂದು ಕೆಲಸವನ್ನೋ ನಿಮ್ಮ ಹವ್ಯಾಸವನ್ನೋ ಮತ್ತೇನನ್ನೋ ದೂರುತ್ತಾರೆ. ಅಂಥ ಸಂದರ್ಭಗಳಲ್ಲಿ ನೀವು ಏನು ಉತ್ತರಿಸಬೇಕೆಂದು ತೋಚದೆ ತಡಬಡಾಯಿಸುತ್ತೀರಿ. ಮತ್ತು ಕೆಲವೊಮ್ಮೆ ಯೋಚನೆಗೆ ಬೀಳುವುದೂ ಇದೆ. ನೀವು ಅವರಿಗೆ ಯಾವ ಕೊರತೆಯನ್ನೂ ಮಾಡಿರುವುದಿಲ್ಲ. ಪ್ರತಿಯೊಂದನ್ನೂ ಆ ಕ್ಷಣಕ್ಕೆ ಅಲ್ಲವಾದರೂ ಮತ್ತೊಮ್ಮೆ ಒದಗಿಸಿರುತ್ತೀರಿ. ಹಾಗಿದ್ದೂ “ನಾನು ಮುಖ್ಯ ಅಲ್ಲವೆ?” ಅನ್ನುವ […]
ಈ ಪ್ರೀತಿ ಕೂಡ, ಈ ಹೊತ್ತಿನ ನಿಜ ಮಾತ್ರ! : ಪ್ರೇಮಿಯ ದಿನಚರಿ
ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು ಸುರಕ್ಷೆ ಅಂತ ತೋರಿಸಿಕೊಳ್ಳುತ್ತೆ. ಅದೇ ಹೊತ್ತಿಗೆ ನಮ್ಮ ದೌರ್ಬಲ್ಯವೂ ಆಗಿರುತ್ತೆ. ಅದಕ್ಕೇ ಅವನು ನನ್ನ ಆವರಣವೂ ಅಲ್ಲ, ದೌರ್ಬಲ್ಯವೂ ಆಗೋದಿಲ್ಲ. ಅಂವ ನನ್ನ ರಕ್ಷೆ ಅಂದುಕೊಂಡಾಗ ಮಾತ್ರ ಅದು ಕದಲುವ ಆತಂಕ ಹುಟ್ಟೋದು ~ ಚೇತನಾ ತೀರ್ಥಹಳ್ಳಿ ಅಲೆಮಾರಿ ಗಾಳಿ ಎಳೆಯೊಟ್ಟಿಗೆ ಕಾದ ಮಣ್ಣಿನ ಘಮ ತೂರಿ ಹಿತಾನುಭವ. […]
ವರ್ತಮಾನದ ಬದುಕು ಹೇಗಿರಬೇಕು? : ಅಧ್ಯಾತ್ಮ ಡೈರಿ
ವರ್ತಮಾನದ ನಮ್ಮ ಬದುಕು ನೆನಪು ಮತ್ತು ಕನಸುಗಳ ಭಾರವನ್ನು ಹೊತ್ತುಕೊಂಡಿರದೆ, ಅರಿವು ಮತ್ತು ಎಚ್ಚರಗಳ ನಡಿಗೆಯಾಗಿರಬೇಕು ~ ಅಲಾವಿಕಾ ವರ್ತಮಾನವು ಗತದಲ್ಲಿ ನಾವು ಏನು ಮಾಡಿರುತ್ತೇವೆಯೋ ಅದರ ಪರಿಣಾಮವಾಗಿರುತ್ತದೆ. ನಾವು ಈ ಪರಿಣಾಮವನ್ನು ಹೇಗೆ ಎದುರಿಸುತ್ತೇವೆ ಅನ್ನುವುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ನಾವು ವರ್ತಮಾನದಲ್ಲಿ ಹೇಗೆ ಇರುತ್ತೇವೆ ಎನ್ನುವುದು ನಮ್ಮ ಬದುಕಿನಲ್ಲಿ ಅತ್ಯಂತ ಮಹತ್ವದ ಸಂಗತಿಯಾಗಿದೆ. “ವರ್ತಮಾನದಲ್ಲಿ ಇರುವುದು ಎಂದರೆ; ನೆನ್ನೆಯ ನೆನಪುಗಳ ಹೊರೆಯಿಳಿಸಿ, ನಾಳೆಯ ಕನಸುಗಳ ಹೊರೆ ಹೊತ್ತುಕೊಳ್ಳದೆ, ಹಗುರಾಗಿ ಬದುಕು ಬೀಸಿದತ್ತ ಸಾಗುವುದು” […]
ಯಶಸ್ವೀ ಬದುಕಿಗೆ ಭಗವದ್ಗೀತೆ ಹೇಳುವ ಸ್ಥಿತಪ್ರಜ್ಞತೆಯ 7 ಲಕ್ಷಣಗಳು
ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ | ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || 2:54 || ಅರ್ಥ : ಕೇಶವ, ಸ್ಥಿತಪ್ರಜ್ಞನ ಲಕ್ಷಣಗಳೇನು ? ಅವನು ಹೇಗೆ […]