ಪೆಟ್ಟು ತಿಂದ ಬಸ್ತಮಿ, ಕುಡುಕನಿಗೆ ಮಿಠಾಯಿ ಕಳಿಸಿದ್ದೇಕೆ? : Tea time story

ದಾರಿಯಲ್ಲಿ ಸಿಕ್ಕ ಕುಡುಕ ರಕ್ತ ಸೋರುವಂತೆ ಬಸ್ತಮಿಯ ತಲೆ ಮೇಲೆ ಹೊಡೆದರೂ, ಬಸ್ತಮಿ ಮರುದಿನ ಅವನಿಗೆ ಬುಟ್ಟಿ ತುಂಬ ಮಿಠಾಯಿ ಕಳಿಸುತ್ತಾನೆ. ಅವನು ಹಾಗೇಕೆ ಮಾಡಿದ? ಅದರ ಪರಿಣಾಮವೇನಾಯ್ತು…!? ಒಮ್ಮೆ ಬಯಾಜಿದ್ ಬಸ್ತಮಿ ರಸ್ತೆಯಲ್ಲಿ ಒಂಟಿಯಾಗಿ ಬರುತ್ತಿದ್ದ. ನಡುರಾತ್ರಿ ಮೀರುತ್ತಿತ್ತು. ಅಲ್ಲೊಬ್ಬ ಕುಡುಕ ತಂತಿವಾದ್ಯವನ್ನು ಮೀಟುತ್ತಾ ಎತ್ತರಿಸಿದ ಅಪಸ್ವರದಲ್ಲಿ ಹಾಡುತ್ತ ಕುಳಿತಿದ್ದ. ರಸ್ತೆಯಲ್ಲಿ ಯಾರು ಕಂಡರೂ ಹಾಡು ನಿಲ್ಲಿಸಿ ವಾಚಾಮಗೋಚರ ಬೈಯುತ್ತಿದ್ದ. ಕುಡುಕನ ವರ್ತನೆ ಕಂಡು ಬಸ್ತಮಿ ಅವನಿಗೆ ಸಮಾಧಾನದಿಂದ ಬುದ್ಧಿ ಹೇಳಿದ. “ನೋಡು, ನಡುರಸ್ತೆಯಲ್ಲಿ ಹೀಗೆಲ್ಲ […]