ಬಹಿರಂಗವಾಗಿದ್ದು ಯಾರ ಮೂರ್ಖತನ!? : Tea time story

ಒಬ್ಬ ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬೇರೆ ಆಶ್ರಮದ ಇಬ್ಬರು ಝೆನ್ ಸನ್ಯಾಸಿಗಳು ಅತಿಥಿಗಳಾಗಿ ಬಂದಿದ್ದರು. “ ಈ ಆಶ್ರಮದಲ್ಲಿ ಝೆನ್ ಬಗ್ಗೆ ತಿಳುವಳಿಕೆ ಇರುವ ಒಬ್ಬರೂ ಇಲ್ಲ” ಎಂದು ಅವರಿಬ್ಬರೂ ಮಾತನಾಡಿಕೊಳ್ಳುವುದನ್ನ ಆ ಆಶ್ರಮದ ಹಿರಿಯ ಶಿಷ್ಯ ಕೇಳಿಸಿಕೊಂಡ. ಕೆಲ ಹೊತ್ತಿನ ನಂತರ ಆಶ್ರಮದ ಎಲ್ಲರೂ ಕಟ್ಟಿಗೆ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಈ ಇಬ್ಬರೂ ಅತಿಥಿ ಸನ್ಯಾಸಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಆಶ್ರಮದ ಹಿರಿಯ ಶಿಷ್ಯ ಗಮನಿಸಿದ. ಅವ ತಕ್ಷಣವೇ ಕಟ್ಟಿಗೆಯೊಂದನ್ನು ಹಿಡಿದುಕೊಂಡು ಆ ಇಬ್ಬರು ಅತಿಥಿಗಳು […]

ಹೊರಗೆ ಮಿಂದು ಒಳಗೆ ಮೀಯದೆ ಫಲವೇನು? : ದಾಸ ವಾಣಿ

ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು? ತನುಶುದ್ಧಿ ಇಲ್ಲದವಗೆ ತೀರ್ಥದ ಫಲವೇನು? ಮಿಂದಲ್ಲಿ ಫಲವೇನು, ಮೀನು ಮೊಸಳೆಯಂತೆ? ನಿಂದಲ್ಲಿ ಫಲವೇನು, ಶ್ರೀಶೈಲದ ಕಾಗೆಯಂತೆ!! ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ ಅಂತರಂಗ ಶುದ್ಧಿ ಇಲ್ಲದೆ ಬಹಿರಂಗದಲ್ಲಿ ಎಷ್ಟು ಶುಚಿಯಾಗಿದ್ದರೂ ಪ್ರಯೋಜನವಿಲ್ಲ ಎನ್ನುವುದು ಅನುಭಾವಿಗಳ ಮಾತು. ಮನಸ್ಸೇ ಶುದ್ಧವಿಲ್ಲದೆ ಮಂತ್ರಗಳನ್ನು ಪಠಿಸಿ ಪ್ರಯೋಜನವಿದೆಯೇ? ಖಂಡಿತಾ ಇಲ್ಲ. ಹಾಗೆಯೇ ತನುಶುದ್ಧಿ… ಅಂದರೆ ದೇಹವನ್ನು ಸತ್ಕರ್ಮಗಳಿಗೆ ವಿನಿಯೋಗಿಸದೆ ತೀರ್ಥದ ಫಲವಿದೆಯೆ? ಅದೂ ಇಲ್ಲ… ಮೀನುಮೊಸಳೆಗಳೂ ಮೀಯುತ್ತವೆ. ಹಾಗೆಯೇ […]