ಗೆಳೆತನವೊಂದು ‘ಸಕಲ ಸಂಬಂಧ’

ಉಳಿದೆಲ್ಲ ಸಂಬಂಧಗಳೂ ಒಂದು ಕಾರಣದ ಎಳೆಯನ್ನು ಹೊತ್ತುಕೊಂಡೇ ಇರುತ್ತವೆಯಾದರೆ, ಗೆಳೆತನ ಅಕಾರಣವಾಗಿ ಘಟಿಸುತ್ತದೆ ಮತ್ತು ಜೊತೆಗಿರುತ್ತದೆ. ಮತ್ತು ಉಳಿದೆಲ್ಲ ಸಂಬಂಧಗಳೂ ಗೆಳೆತನವನ್ನು ಒಳಗೊಂಡಿದ್ದರಷ್ಟೆ ಅವು ಪರಿಪೂರ್ಣವೆನ್ನಿಸುತ್ತವೆ!  ~ ಗಾಯತ್ರಿ  ಸಂಬಂಧಗಳಲ್ಲಿ ಅತ್ಯಂತ ಶ್ರೇಷ್ಟವಾದ ಬಾಂಧವ್ಯವೆಂದರೆ, ಅದು ಗೆಳೆತನ. ಕಾಲಾಂತರದಲ್ಲಿ ಮಾನವನ ಧಾವಂತ, ಸ್ಪರ್ಧೆ ಹಾಗೂ `ಬಲಶಾಲಿಗಷ್ಟೆ ಬದುಕು’ ಅನ್ನುವಂಥ ಚಿಂತನೆಗಳಿಂದ ಗೆಳೆತನದ ಹೆಸರು ಅಷ್ಟಿಷ್ಟು ದುರುಪಯೋಗವಾಗಿದೆ ಅನ್ನುವುದನ್ನು ಅಲ್ಲಗಳೆಯಲಾಗದು. ಆದರೂ ಈತನಕ ಜಗತ್ತಿನಲ್ಲಿ ಸೌಹಾರ್ದ ನೆಲೆಯಾಗಿದೆ ಎಂದರೆ ಅದಕ್ಕೆ ಕಾರಣ ಈ ಕಾರಣ ಬಾಂಧವ್ಯವೇ. ಯಾವುದೇ ಸಂಬಂಧದಲ್ಲಿ ಇಬ್ಬರು […]