ಗೆಜ್ಜೆ ಕಳಚಿ ಬುದ್ಧನ ಹೆಜ್ಜೆ ನಡೆದ ಆಮ್ರಪಾಲಿ

ಹೀಗೊಮ್ಮೆ ತನ್ನ ಬದುಕು ಸಾಗಿ ಬಂದ ಹಾದಿಯನ್ನೆ ಚಿಂತಿಸುತ್ತ ಮಾಳಿಗೆಯಲ್ಲಿ ನಿಂತಿದ್ದ ಆಮ್ರಪಾಲಿಗೆ ಬುದ್ಧ ಗಣ ಕಾಣಿಸಿತು. ಕಾವಿ ಬಣ್ಣದ ಪ್ರಶಾಂತ ತೊರೆಯೊಂದು ಬೀದಿಯ ತುಂಬ ಹರಿದಾಡುತ್ತಿರುವಂತೆ ಆ ದೃಶ್ಯ ಕಂಡಿತು. ಬರೀ ನೋಟ ಮಾತ್ರದಿಂದಲೇ ಶಾಂತಿ ಕರುಣಿಸಿದ ಬುದ್ಧ ಗಣ ಸತ್ಕರಿಸಲು ಸಿಗುವಂತಾದರೆ ತಾನು ಶಾಶ್ವತ ಶಾಂತಿ ಹೊಂದಬಹುದು ಎನ್ನಿಸಿತು ಅವಳಿಗೆ. ~ ಚೇತನಾ ತೀರ್ಥಹಳ್ಳಿ ವೈಶಾಲಿ ಗಣರಾಜ್ಯದ ನಗರವಧು, ರಾಜ – ರಾಜರ ನಡುವೆ ಕದನಕ್ಕೆ ಕಾರಣವಾದ ರೂಪವಂತೆ, ಶಾಸ್ತ್ರಾರ್ಥಗಳನ್ನು ಬಲ್ಲ ಬುದ್ಧಿವಂತೆ, ಸೇವಾಭಾವದ […]