ಸಂಬಂಧವೆಂಬ ನದಿಯ ಬಿಂಬ : ಅಧ್ಯಾತ್ಮ ಡೈರಿ

ಯಾವುದೇ ಸಂಬಂಧ ಅದೆಷ್ಟು ಆಪ್ತವಾಗಿದ್ದರೂ; ಅದು ನೆನೆಯದ, ಮುಳುಗದ, ಜೊತೆ ಹರಿಯದ ಬಿಂಬ ಮಾತ್ರ ಅನ್ನುವುದನ್ನು ಒಪ್ಪಿಕೊಳ್ಳಬೇಕು ~ ಅಲಾವಿಕಾ ನದಿಯೊಳಗೆ ತೇಲುವ ಬಿಂಬ ಹರಿಯುವುದಿಲ್ಲ ಜೊತೆಗೆ. ಸಂಬಂಧಗಳು ಬಿಂಬದ ಹಾಗೆ. ಒಂದು ವ್ಯಕ್ತಿ ನದಿಯಾದರೆ, ಮತ್ತೊಂದು ವ್ಯಕ್ತಿ ದಡ ಅಥವಾ ಆಕಾಶದಲ್ಲಿರುವ ವಸ್ತು. ಒಮ್ಮೆ ಒಬ್ಬರ ಪಾಲಿಗೆ ನದಿಯಾದವರು ಮತ್ತೊಮ್ಮೆ ಮತ್ತೊಬ್ಬರ ಪಾಲಿಗೆ ವಸ್ತುವಾಗಬಹುದು. ಹೀಗೆ ಪ್ರತಿಯೊಬ್ಬರೂ ನದಿಯೂ ವಸ್ತುವೂ ಆಗುತ್ತ ಬಿಂಬ ಬೆಸೆಯುವರು. ಅಂದರೆ, ಸಂಬಂಧ ಹೊಸೆಯುವರು. ನದಿಯ ಹರಿವಿನೆದೆ ಮೇಲೆ ಬಿಂಬ ಮೂಡುತ್ತದೆ. […]

ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ : Morning Mantra

ಕನ್ನಡಿ ದಿನಕ್ಕೆ ಅದೆಷ್ಟು ನೂರು, ಸಾವಿರ ವಸ್ತು/ವ್ಯಕ್ತಿಗಳನ್ನು ಪ್ರತಿಬಿಂಬಿಸಿದರೂ ಯಾವ ಬಿಂಬವನ್ನೂ ತನ್ನ ಚೌಕಟ್ಟಿಗೆ ತೂಗು ಹಾಕಿಕೊಂಡು ಚಿತ್ರವಾಗಿ ಉಳಿಸಿಕೊಳ್ಳುವುದಿಲ್ಲ. ಯಾವುದು ಎಷ್ಟು ಹೊತ್ತು ಎದುರಿಗೆ ಇರುತ್ತಾರೋ, ಅಷ್ಟು ಹೊತ್ತೂ ಅವರು ಇರುವಂತೆಯೇ ಗ್ರಹಿಸುವುದು – ತೋರುವುದು. ಅಷ್ಟೇ ಅದರ ಕೆಲಸ ~ ಗಾಯತ್ರಿ ಈ ದಿನದ Morning Mantra ನಮಗೆ ಸಮಾಜದೊಡನೆ ಬೆರೆಯಲು ಅತ್ಯಂತ ಉಪಯುಕ್ತವಾಗಿರುವಂತದ್ದು. ಆದರೆ, ಅಷ್ಟೇ ಸರಳವೂ ಆಗಿರುವಂಥದ್ದು : “ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ”! ಎದ್ದು, ಮುಖ ತೊಳೆದು ಕನ್ನಡಿ ಮುಂದೆ […]

ಚಿಕ್ಕದೊಂದು ಕದಲುವಿಕೆ ಸಾಕು : ಅರಳಿಮರ POSTER

ಚಿಕ್ಕದೊಂದು ಕದಲುವಿಕೆ ಸಾಕು, ಬಿಂಬ ಕನ್ನಡಿಯಾಚೆ ಹೋಗಲು ~ ಅಲಾವಿಕಾ ಎಲ್ಲ ಸುಖ ದುಃಖಗಳೂ, ಎಲ್ಲ ಘಟನೆಗಳೂ ಕನ್ನಡಿ ಮೇಲಿನ ಬಿಂಬಗಳಷ್ಟೆ. ಯಾವುದೂ ಶಾಶ್ವತವಲ್ಲ. ಪ್ರತಿಯೊಂದೂ ತಾತ್ಕಾಲಿಕ, ಕನ್ನಡಿ ಮೇಲಿನ ಪ್ರತಿಬಿಂಬದಂತೆ. ನಾವು ಅವನ್ನು ಶಾಶ್ವತ ಚಿತ್ರಗಳಂತೆ ಚಿತ್ತ ಭಿತ್ತಿಯ ಮೇಲೆ ತೂಗಿ ಹಾಕಿಕೊಳ್ಳುತ್ತೇವೆ. ಬಂದೊದಗಿದ ದುಃಖ ಶಾಶ್ವತವೋ ಎಂಬಂತೆ ಯಾತನೆ ಪಡುತ್ತೇವೆ. ಸುಖ ಶಾಶ್ವತವೋ ಎಂಬಂತೆ ಮೆರೆದಾಡುತ್ತೇವೆ. ಅಧಿಕಾರ ಶಾಶ್ವತ ಅನಿಸಿಬಿಟ್ಟರೆ, ಅದರ ದುರ್ಬಳಕೆ ಮಾಡುತ್ತೇವೆ. ಅವೆಲ್ಲ ಅದೆಷ್ಟು ಅಳ್ಳಕ ಎಂಬುದು ನಮ್ಮ ಗಮನಕ್ಕೆ ಬರುವುದೇ […]

ನಮ್ಮಲ್ಲಿ ಕಂಪನವಿದ್ದರೆ ಸಂಬಂಧವೂ ಕದಲುವುದು!

ನಾವು ಎಲ್ಲಿಯವರೆಗೆ ನಮ್ಮ ಸುಖಕ್ಕೆ ಬೇರೆ ಯಾರನ್ನೂ ಅವಲಂಬಿಸುವುದಿಲ್ಲವೋ, ಎಲ್ಲಿಯವರೆಗೆ ದುಃಖಕ್ಕೆ ಮತ್ಯಾರನ್ನೋ ಹೊಣೆಗೇಡಿಯಾಗಿಸುತ್ತೇವೆಯೋ ಅಲ್ಲಿಯವರೆಗೆ ಸಂಬಂಧಗಳು ಅನಿಶ್ಚಿತತೆಯಲ್ಲಿ ಕಂಪಿಸುತ್ತಲೇ ಇರುತ್ತವೆ  ~ ಅಲಾವಿಕಾ ಕದಡಿದ ಕೊಳದಲ್ಲಿ ಬಿಂಬವೂ ಅಸ್ಥಿರ; ದೂರಬೇಡ ಚಂದ್ರನ್ನ. ಈ ಮಾತು ಅದೆಷ್ಟು ನಿಜ!! ನಾವು ಕೊಳದಂತೆ. ಸಂಬಂಧವೇ ಪ್ರತಿಬಿಂಬ. ನಮ್ಮಲ್ಲಿ ಕಂಪನಗಳಿದ್ದಷ್ಟೂ ಹೊತ್ತು ಸಂಬಂಧವೂ ಅಲುಗಾಡುತ್ತಿರುತ್ತದೆ. ಆದರೆ ನಾವು ಅದನ್ನು ಸಂಬಂಧದ ಆ ತುದಿಯಲ್ಲಿ ಇರುವವರ ದೋಷ ಅಂದುಕೊಂಡು ನರಳುತ್ತೇವೆಯೇ ಹೊರತು, ನಮ್ಮನ್ನು ಹೊಣೆಯಾಗಿಸಿಕೊಳ್ಳುವುದಿಲ್ಲ. ಯಾವುದೇ ಸಂಬಂಧದಲ್ಲಿ ಅಪನಂಬಿಕೆ ಉಂಟಾಗುವುದು ನಮ್ಮ […]