ಮೂರ್ಖರಿಗೆ ಬುದ್ಧಿ ಹೇಳುವುದು ಸಾಧ್ಯವೇ ಇಲ್ಲದ ಮಾತು ~ ಭರ್ತೃಹರಿಯ ಸುಭಾಷಿತಗಳು #3

ಪ್ರಸಹ್ಯ ಮಣಿಮುದ್ಧರೇನ್ಮಕರ ವಕ್ತ್ರ ದಂಷ್ಟ್ರಾಂತರಾತ್ ಸಮುದ್ರಮಪಿ ಸಂತರೇತ್ಪ್ರಚಲ ದೂರ್ಮಿಮಾಲಾಕುಲಮ್ |  ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ನ ತು ಪ್ರತಿನಿವಿಷ್ಟಮೂರ್ಖಜನ ಚಿತ್ತಮಾರಾಧಯೇತ್||3|| ಅರ್ಥ : ಮೊಸಳೆಯ ಹಲ್ಲುಗಳ ನಡುವೆ ಸಿಲುಕಿದ ಮಣಿಯನ್ನಾದರೂ ಹೊರಗೆ ತೆಗೆಯಬಹುದು; ಹೆದ್ದೆರೆಗಳಿಂದ ಆರ್ಭಟಿಸುತ್ತಿರುವ ಸಮುದ್ರವನ್ನಾದರೂ ದಾಟಿಬಿಡಬಹುದು; ಕೋಪದಿಂದ ಫೂತ್ಕರಿಸುತ್ತಿರುವ ವಿಷದ ಹಾವನ್ನೂ ಹೂವಿನಂತೆ ತಲೆಯಲ್ಲಿ ಹೊತ್ತು ತಿರುಗಬಹುದು. ಆದರೆ ಮೂರ್ಖರಿಗೆ ಬುದ್ಧಿ ಹೇಳುವುದು ಮಾತ್ರ ಸಾಧ್ಯವಾಗದ ಮಾತು. ತಾತ್ಪರ್ಯ : ಹರಿತವಾಗ ಗರಗಸದಂಥ ಹಲ್ಲುಗಳುಳ್ಳ ಮೊಸಳೆಯ ಬಾಯಿಗೆ ಕೈಹಾಕುವುದೇ ಅಪಾಯಕಾರಿ ಸಂಗತಿ. ಇನ್ನು ಅದರ […]