ಪ್ರೀತಿಸಲ್ಪಡಲು ಬೇಕಾದ 10 ಮುಖ್ಯ ಲಕ್ಷಣಗಳು : ಬುದ್ಧ ಸಂದೇಶ

ಹಾಗೆ ನೋಡಿದರೆ, ಪ್ರೀತಿಸುವುದು ಸುಲಭ; ಪ್ರೀತಿಸಲ್ಪಡುವುದು ಬಹಳ ಕಷ್ಟ. ಸುತ್ತಮುತ್ತಲಿನ ಜನರಿಗೆ ಇಷ್ಟವಾಗುವಂಥ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬುದ್ಧನ ಬೋಧನೆಗಳಿಂದ ಆಯ್ದು ತೆಗೆದ 10 ಟಿಪ್ಸ್ ಇಲ್ಲಿವೆ… ಸಂತಸವನ್ನೇ ವಿತರಿಸಿ ನಿಮ್ಮನ್ನು ಪ್ರೀತಿಸಿಕೊಳ್ಳಿ ಪ್ರತಿಕ್ರಿಯೆ ಬೇಡ, ಸ್ಪಂದಿಸಿ… ಆಲಿಸುವ ಗೌರವ ಮೆಚ್ಚುಗೆ ಸೂಚಿಸುವುದು ಅಪರಾಧೀಪ್ರಜ್ಞೆ ನೀವು ಏನಾಗಿದ್ದೀರಿ? ಒಡನಾಟವೆಂದರೆ… ಮನಸ್ಸೇ ವಂಚಿಸುವುದು ಈ ಮೂರು ಸಂಗತಿಗಳು…

ಧಾರ್ಮಿಕರಾಗಿರುವುದೆಂದರೆ ಪ್ರಶ್ನೆಗಳನ್ನು ಕೇಳದೆ ಇರುವುದಲ್ಲ…

ರಸ್ತೆಯಲ್ಲಿ ಬುದ್ಧ ಕಂಡರೆ ಅವನನ್ನು ಕೊಂದುಬಿಡಿ ಎಂಬುದಾಗಲೀ, ರಾಮಕೃಷ್ಣರು ಕಾಳಿಯನ್ನೇ ಸಂಹರಿಸಿದ್ದನ್ನಾಗಲೀ ಅಕ್ಷರಾರ್ಥದಲ್ಲಿ ಗ್ರಹಿಸಿ ನಾವು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಬೀಳುವ ಅಗತ್ಯವಿಲ್ಲ. ಇವುಗಳನ್ನು ರೂಪಕಗಳ ಮಟ್ಟದಲ್ಲಿ ಗ್ರಹಿಸಬೇಕು ~ ಅಚಿಂತ್ಯ ಚೈತನ್ಯ ಧಾರ್ಮಿಕ ನಂಬಿಕೆಗಳು ಪ್ರಶ್ನಿಸುವುದಕ್ಕೆ, ಅಧ್ಯಯನ ನಡೆಸುವುದಕ್ಕೆ ಅಡ್ಡಿಯಾಗಿವೆ ಎಂದು ಭಾವಿಸಲಾಗುತ್ತದೆ. ಹಾಗೆ ನೋಡಿದರೆ ಧಾರ್ಮಿಕರಾಗಿರುವುದು ಪ್ರಶ್ನಿಸುವುದಕ್ಕೆ ಒಂದು ಅಡ್ಡಿಯಲ್ಲ. ಭಗವದ್ಗೀತೆಯ ಉದ್ದಕ್ಕೂ ಇದು ಸ್ಪಷ್ಟವಾಗಿದೆ. ಒಬ್ಪ ಆಸ್ತಿಕನಾಗಿದ್ದೂ ಯಾವ ಮಟ್ಟದ ಪ್ರಶ್ನೆಗಳನ್ನು ಕೇಳಬಹುದು ಎಂಬುದಕ್ಕೆ ಅರ್ಜುನ ಎತ್ತುವ ಪ್ರಶ್ನೆಗಳೇ ಸಾಕ್ಷಿ. ಈ ಕ್ಷಣವೇ ಅರ್ಜುನ ಯುದ್ಧರಂಗವನ್ನು […]

ಪಾಪಿ ಪುಣ್ಯವಂತನಾಗುವುದು ಹೇಗೆ? ಓಶೋ ವ್ಯಾಖ್ಯಾನ ಓದಿ…

ಅಂಗುಲಿಮಾಲನಿಗೆ ಜ್ಞಾನೋದಯವಾದಂತಾಯಿತು “ಇಲ್ಲಿಯತನಕ ಕೊಲೆಗಳನ್ನು ಮಾಡುತ್ತಲೇ ಬದುಕಿರುವ ನನಗೆ ಕೊಲ್ಲುವುದು ಕೈಲಾಗದವರು ಮಾಡುವ ಕೆಲಸ ಎಂಬುದು ಹೊಳೆಯಲಿಲ್ಲವಲ್ಲ. ಆದರೆ ನಾನಂತೂ ಕೈಲಾಗದ ವ್ಯಕ್ತಿಯಲ್ಲ” ಎಂದುಕೊಂಡ… ~ ಓಶೋ ರಜನೀಶ್ ಲೋಕದಲ್ಲಿ ದುರ್ಬಲರಾರೂ ಪಾಪಕರ್ಮಗಳನ್ನು ಮಾಡುವುದಿಲ್ಲ. ಎಲ್ಲ ಪಾಪ ಕರ್ಮಗಳೂ ಶಕ್ತಿಶಾಲಿಗಳಿಂದಲೇ ನಡೆಯುವುದು. ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು ಗೊತ್ತಿಲ್ಲದವರು ಬೇರೆ ದಾರಿ ಕಾಣದೆ ಪಾಪಕರ್ಮಕ್ಕಿಳಿಯುತ್ತಾರೆ. ಆದ್ದರಿಂದ ಪಾಪಿಗಳನ್ನು ಶಕ್ತಿಯ ಮೂಲಸ್ರೋತವೆಂದು ತಿಳಿಯಬೇಕು. ಅಂಥವರಿಗೆ ಅವಕಾಶ ಸಿಕ್ಕಲ್ಲಿ ಅವರ ಶಕ್ತಿ ಅದ್ಭುತವಾದ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಆದ್ದರಿಂದ ಪಾಪಿಗಳು ಕ್ಷಣಮಾತ್ರದಲ್ಲಿ ಮಹಾತ್ಮರಾಗಿಬಿಡುವ […]

ಬುದ್ಧನೊಬ್ಬನೇ ಅಲ್ಲ : ರ್ಯೋಟಾನ ಹಾಯ್ಕು, ಓಶೋ ವಿವರಣೆ

ಬಹುಶಃ ಭಾರತೀಯ ಆಧ್ಯಾತ್ಮಿಕ ಸಾಹಿತ್ಯಕ್ಕೆ ಬುದ್ಧ, ಝೆನ್ ಮತ್ತು ಸೂಫಿ, ಹಸೀದ್ ಇತ್ಯಾದಿ ಪಂಥಗಳನ್ನು ಓಶೋ ಅವರಷ್ಟು ಸ್ವಾರಸ್ಯಕರವಾಗಿ ಪರಿಚಯಿಸಿದವರು ಮತ್ತೊಬ್ಬರಿಲ್ಲ. ಝೆನ್ ಮತ್ತು ಬುದ್ಧನನ್ನು ಓಶೋರಷ್ಟು ಸುಂದರವಾಗಿ ವ್ಯಾಖ್ಯಾನ ಮಾಡಿದವರೂ ಬಹುಶಃ ಮತ್ತೊಬ್ಬರಿಲ್ಲ! ಓಶೋ ಝೆನ್ ಹಾಯ್ಕುಗಳಿಗೆ ನೀಡಿದ ವ್ಯಾಖ್ಯಾನಗಳ ಸರಣಿಯಲ್ಲಿ ಕೆಲವನ್ನು ಆಯ್ದು. ಇಂಗ್ಲೀಶ್’ನಿಂದ ಅನುವಾದಿಸಿ ಅರಳಿಬಳಗವು ಪ್ರಕಟಿಸಲಿದೆ.  : ಸಂಗ್ರಹ ಮತ್ತು ಅನುವಾದ ~ ಅಲಾವಿಕಾ THAT THERE IS ONLY ONE IS UNBELIEVABLE TONIGHT. THIS HARVEST MOON! ~ Ryota […]

ಇಷ್ಟಪಡುವುದು ಮತ್ತು ಪ್ರೇಮಿಸುವುದರ ನಡುವಿನ ವ್ಯತ್ಯಾಸ…

ಇಷ್ಟಪಡುವಿಕೆಯನ್ನೇ ನಾವು ಪ್ರೇಮವೆಂದುಕೊಂಡು ಪ್ರೇಮವನ್ನು ಹಳಿಯತೊಡಗುತ್ತೇವೆ. ವಾಸ್ತವದಲ್ಲಿ ಪ್ರೇಮವೇ ಬೇರೆ, ಇಷ್ಟಪಡುವುದೇ ಬೇರೆ. ಇಷ್ಟ ನಮ್ಮನ್ನು ಒಡೆತನಕ್ಕೆ ಪ್ರೇರೇಪಿಸಿದರೆ, ಪ್ರೇಮ ಪೋಷಣೆಯ ಜವಾಬ್ದಾರಿ ಹೊತ್ತುಕೊಳ್ಳುತ್ತದೆ. ಇದನ್ನು ಬುದ್ಧ ಸರಳ ಉದಾಹರಣೆ ಮೂಲಕ ಹೇಳಿದ್ದು ಹೀಗೆ….

ಅತ್ಯಾಚಾರಕ್ಕೊಳಗಾದ ಅರಹಂತೆ ಮತ್ತು ಬುದ್ಧನ ವೈಶಾಲ್ಯತೆ : ಉತ್ಪಲಾವರ್ಣೆಯ ಕಥೆ

ಉತ್ಪಲಾವರ್ಣೆ ಬಿಕ್ಖುಣಿಯಾದುದು ಶ್ರೀಮಂತನ ದಾಯಾದಿಗಳಿಗೆ ಸರಿ ಕಾಣಲಿಲ್ಲ. ತಮ್ಮ ಮನೆತನದ ಹೆಣ್ಣು ಕೂದಲು ಬೋಳಿಸಿಕೊಂಡು ಸನ್ಯಾಸಿನಿಯಾಗುವುದನ್ನು ಅವರು ಸಹಿಸಲಿಲ್ಲ. ಏನಾದರೂ ಮಾಡಿ ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಬೇಕು ಮತ್ತು ಮನೆತನದ ಮರ್ಯಾದೆ ತೆಗೆದುದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಅವರಲ್ಲೊಬ್ಬ ಸಮಯಸಾಧಿಸಿ ಅವಳ ಮೇಲೆ ಅತ್ಯಾಚಾರವನ್ನೆಸಗಿಯೂ ಬಿಟ್ಟ…. ~ ಚೇತನಾ ತೀರ್ಥಹಳ್ಳಿ ಶ್ರಾವಸ್ತಿ ಶ್ರೀಮಂತ ನಗರ. ಆ ನಗರದಲ್ಲೊಬ್ಬ ಶ್ರೀಮಂತ ವ್ಯಾಪಾರಿ. ಅವನಿಗೊಬ್ಬಳು ಮಗಳಿದ್ದಳು. ಹೆಸರು ಉತ್ಪಲಾವರ್ಣಾ. ಆ ಹೆಸರನ್ನು ಅವಳಿಗೆ ಅನ್ವರ್ಥಕವಾಗಿಯೇ ಇಟ್ಟಿದ್ದರು. ನೀಲಿ ಕಮಲದಂತೆ […]