ಆಲಸ್ಯವೇ ನಮ್ಮನ್ನು ಕೆಟ್ಟವರನ್ನಾಗಿಸುವುದು!

ಜ್ಞಾನೋದಯ ಹೊಂದುವುದು ಬಹಳ ಕಷ್ಟದ ಕೆಲಸ. ಆದರೆ ದೂಷಿಸುವುದು ಬಹಳ ಸುಲಭ. ಜ್ಞಾನೋದಯ ಹೊಂದುವುದು ಎಂದರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಪ್ರವೃತ್ತಿಯನ್ನು ಕುಟ್ಟಿ ಪುಡಿ ಮಾಡಿ ಬಿಸುಟುವುದು. ಆಲಸಿಗಳಿಗೆ ಅದು ಸಾಧ್ಯವಿಲ್ಲದ ಮಾತು. ಉತ್ತಮರಾಗುವಿಕೆಯ ಪ್ರಯತ್ನದಲ್ಲಿ ಆಲಸ್ಯ ತೋರುವುದೇ ಯಾವುದೇ ವ್ಯಕ್ತಿಯು ದುಷ್ಟನಾಗುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ ~ ಓಶೋ ಒಳ್ಳೆಯವರಿಗೆ ಕೆಟ್ಟದ್ದನ್ನ ಮಾಡುವುದು ಎಂದರೆ ಅದು ಆಕಾಶಕ್ಕೆ ಉಗುಳಿದಂತೆ. ಆದ್ದರಿಂದ ಸಜ್ಜನರ ತಂಟೆಗೆ ಹೋಗಬಾರದು. ಮೊದಲು ನಾವು ಕೆಟ್ಟ ಜನರೇಕೆ ಒಳ್ಳೆಯವರ ತಂಟೆಗೆ ಹೋಗುತ್ತಾರೆಂದು ಅರ್ಥ ಮಾಡಿಕೊಳ್ಳೋಣ. […]

ಅವರು ಕೊಂದೇಬಿಟ್ಟರೆ ಏನನ್ನಿಸುತ್ತದೆ? : Tea time story

“ಅವರು ಕೊಂದೇಬಿಟ್ಟರೆ ಏನನ್ನಿಸುತ್ತದೆ?” ಬುದ್ಧ ಕೇಳಿದ. ಅದಕ್ಕೆ ಪೂರ್ಣ ಕೊಟ್ಟ ಉತ್ತರವೇನು ಗೊತ್ತೇ? | ಸಂಗ್ರಹ ಮತ್ತು ಅನುವಾದ : ಅಲಾವಿಕಾ ಬುದ್ಧನಿಗೆ ಪೂರ್ಣ ಎಂಬ ಶಿಷ್ಯನಿದ್ದ. ತನ್ನ ಸಾಧನೆ ಪೂರ್ಣವಾಯಿತು ಅನ್ನಿಸಿದಾಗ ಬುದ್ಧನ ಬಳಿ ಬಂದು, “ನಿಮ್ಮ ಸಂದೇಶವನ್ನು ವಿತರಿಸಲು ಸೂಖಾದ ಕಡೆ ಹೊರಡುತ್ತೇನೆ. ಅನುಮತಿ ಕೊಡಿ” ಎಂದು ಕೇಳಿದ. ಬಿಹಾರದಲ್ಲಿರುವ ಚಿಕ್ಕ ಊರು ‘ಸೂಖಾ’, ಬರೀ ದುಷ್ಟಜನರಿಂದ ತುಂಬಿದ್ದು, ಕುಖ್ಯಾತಿಗೆ ಒಳಗಾಗಿತ್ತು. ಪೂರ್ಣನಿಗೆ ಮೊದಲು ಯಾವ ಭಿಕ್ಷುವೂ ಅಲ್ಲಿಗೆ ಹೋಗಿರಲಿಲ್ಲ. ಅದನ್ನು ನೆನೆದು ಬುದ್ಧ […]

ಸವತಿಯನ್ನು ಸುಟ್ಟಳು ಮಾಗಂಡಿಯಾ; ಸಕದಾಗಾಮಿಯಾದಳು ಸಾಮಾವತಿ

ಬುದ್ಧ ಪ್ರೇಮದಿಂದ ಸಾಮಾವತಿ ಮತ್ತವರ ಸಖಿಯರು ಮೈತ್ರೀಭಾವ ಹೊಂದಿದವರಾಗಿ ಸದ್ಗತಿ ಪಡೆದರು. ಬುದ್ಧ ದ್ವೇಷದಿಂದ ಮಾಗಂಡಿಯಾ ಮತ್ತವಳ ಸೇವಕರು ಮತ್ಸರ ತುಂಬಿಕೊಂಡು ದುರ್ಗತಿ ಪಡೆದರು. ಮುಂದೆ ಈ ಪ್ರಕರಣ ನಾಡಿನ ಜನರಿಗೊಂದು ಪಾಠವಾಯಿತು ~ ಗಾಯತ್ರಿ  ಮಹಾಸತಿ ಸಾಮಾವತಿಯ ಕಥೆ ಬಹಳ ಸಂಕೀರ್ಣ. ವದ್ದವತಿ ಸಾಮ್ರಾಜ್ಯದ ಅರಸನ ಮಗಳೀಕೆ. ತನ್ನ ರಾಜ್ಯದಲ್ಲಿ ಕ್ಷಾಮ ಡಾಮರಗಳುಂಟಾದಾಗ ಕೌಶಾಂಬಿ ರಾಜ್ಯದ ಸಿರಿವಂತ ಘೋಷಿತನಿಗೆ ದತ್ತು ನೀಡಲ್ಪಟ್ಟಳು. ಅಪೂರ್ವ ಲಾವಣ್ಯವತಿಯಾದ ಈಕೆ ವಿನಯವಂತಳೂ ಗುಣವಂತಳೂ ಆಗಿದ್ದಳು. ಅವಂತಿಯ ಅರಸ ಉದಯನ, ಈಕೆಯನ್ನು ನೋಡುತ್ತಲೇ […]

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 4

ವಿಪಶ್ಶನದ ಮೂಲಕ ಮನಸ್ಸಿಗೆ ಆಳವಾದ ಶಸ್ತ್ರಚಿಕಿತ್ಸೆ ಮಾಡುತ್ತಾ ನಮ್ಮ ಅಜ್ಞಾನದಿಂದ ಶೇಖರಣೆಗೊಂಡಿರುವ ಕೊಳೆಯನ್ನು ತೆಗೆಯುತ್ತಾ, ಗಾಯಗೊಂಡು ನೋವಿನಿಂದ ಕೂಡಿರುವ ಮನಸ್ಸಿನ ಆಳದಿಂದ ಕೀವನ್ನೂ ತೆಗೆದು ಸ್ವಚ್ಛಮಾಡಿ,`ಮೆತ್ತ’ ಅಥವಾ `ಮೈತ್ರಿ’ ಭಾವನೆಯನ್ನು ತುಂಬಿ ಕರುಣೆ, ಪ್ರೀತಿ, ಸೇವೆ ಎಂಬ ಬೀಜಗಳನ್ನು ನೆಟ್ಟು ಸಮತಾಭಾವದಿಂದ ಇರುವುದನ್ನು ಕಲಿಯುವುದೆ ಧ್ಯಾನದ ಮಾರ್ಗವಾಗಿದೆ. ~ ಚಿನ್ನಸ್ವಾಮಿ ವಡ್ಡಗೆರೆ ಭಾಗ 3 ಓದಲು ಇಲ್ಲಿ ನೋಡಿ : https://aralimara.com/2019/01/13/vipassana-4/ “ನಮ್ಮ ಅಂತರಾಳದಿಂದ ಉದಯಿಸುವ ಯಾವುದೆ ಬಗೆಯ ದುಃಖಕ್ಕೆ ಪ್ರತಿಕ್ರಿಯೆಯೇ ಕಾರಣ. ಎಲ್ಲಾ ಪ್ರತಿಕ್ರಿಯೆಗಳು ನಿಂತು ಹೋದಲ್ಲಿ […]

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 1

ನಾನೂ ಕೂಡ 2018 ರ ಅಂತ್ಯ ಅಂದರೆ ಡಿಸೆಂಬರ್ 19 ರಿಂದ 30 ರವರೆಗೆ ಬೆಂಗಳೂರಿನ ಉತ್ತರದಲ್ಲಿರುವ ತುಮಕೂರು ರಸ್ತೆಯಲ್ಲಿ ಬರುವ ದಾಸನಪುರ ಹೋಬಳಿಯ ಆಲೂರಿನಲ್ಲಿರುವ “ಧಮ್ಮ ಪಫುಲ” ಎಂಬ ಧ್ಯಾನ ಕೇಂದ್ರದಲ್ಲಿ ವಿಪಶ್ಯನ ಧ್ಯಾನ ಕಲಿಯಲು ಹೋಗಿ ಬಂದೆ.ನಿಜಕ್ಕೂ ಅಲ್ಲಿ ಕಳೆದ ಹತ್ತು ದಿನಗಳು ನನ್ನ ಪಾಲಿನ ಮಹತ್ವದ ಬಹುಮುಖ್ಯ ಅನುಭವವಾಗಿ ಎಂದಿಗೂ ಮರೆಯಲಾರದಂತೆ ಉಳಿದವು ~ ಚಿನ್ನಸ್ವಾಮಿ ವಡ್ಡಗೆರೆ ಒತ್ತಡದ ಬದುಕಿನಿಂದ ಪಾರಾಗಲೂ ಎಲ್ಲರೂ ಬಯಸುತ್ತಾರೆ. ಒಂದನ್ನು ಮರೆಯಲು ಮತ್ತೊಂದು, ಮತ್ತೊಂದನ್ನು ಮರೆಯಲು ಇನ್ನೊಂದು ಹೀಗೆ […]

ಜಗತ್ತು ಕೇವಲ ಗುಲಾಬಿಗಳಿಂದ ತುಂಬಿಕೊಂಡಿಲ್ಲ, ಕೇವಲ ಮುಳ್ಳುಗಳಿಂದಲೂ!

ನಾವು ವಾಸಿಸುತ್ತಿರುವ ಜಗತ್ತು ಪೂರ್ಣವಾಗಿ ಗುಲಾಬಿಗಳಿಂದ ಕೂಡಿದ ಸ್ವರ್ಗವಲ್ಲ. ಹಾಗೆಯೇ ಪೂರ್ಣವಾಗಿ ಮುಳ್ಳುಗಳಿಂದ ಆವೃತವಾದ ನರಕವೂ ಅಲ್ಲ. ಗುಲಾಬಿಯು ಮೃದು, ಸುಂದರ ಮತ್ತು ಪರಿಮಳಭರಿತ. ಆದರೆ ಕಾಂಡವು ಮುಳ್ಳುಭರಿತ. ಗುಲಾಬಿಯ ಕಾರಣಕ್ಕಾಗಿ ಒಬ್ಬನು ಮುಳ್ಳುಗಳನ್ನು ಸಹಿಸುತ್ತಾನೆ. ಹಾಗಿರುವಾಗಲು ಮುಳ್ಳುಗಳು ಇದೆ ಎಂದು ಗುಲಾಬಿಗಳನ್ನು ತಿರಸ್ಕೃತ ಮಾಡುವ ಹಾಗಿಲ್ಲ ~ Dr K Sri Dhammananda thero | ಕನ್ನಡಕ್ಕೆ : ಅನೀಶ್ ಬೋಧ್ ಅನಿತ್ಯದ, ಅತೃಪ್ತಿಯ (ದುಃಖದ), ಅನಾತ್ಮದ (ನಿಜವಲ್ಲದ/ಹುರುಳಿಲ್ಲದ) ಅರಿವನ್ನು ಹೊಂದಿದಾಗ ಜೀವನದ ಲಕ್ಷಣಗಳನ್ನು, ಜೀವನದ ನಿಜ […]

ದ್ವೇಷವನ್ನು ದ್ವೇಷದಿಂದ ಗೆಲ್ಲಬಯಸುವುದೇ ನೀಚತನ! : ಬುದ್ಧಗಾಥೆ

ದ್ವೇಷವನ್ನು ಕ್ರೋಧದಿಂದ ಗೆಲ್ಲಲಾಗದು. ಅಕ್ರೋಧವೇ ದ್ವೇಷವನ್ನು ಮಣಿಸುವ ಮಾರ್ಗ ಅನ್ನುತ್ತಾನೆ ಬುದ್ಧ ಗುರು. ದ್ವೇಷವನ್ನು ಬಿಟ್ಟು, ಸಹನೆಯಿಂದ ನಡೆಯುವಂತೆ ಸೂಚಿಸುವ ಕೆಲವು ಬುದ್ಧ ಗಾಥೆಗಳು ಇಲ್ಲಿವೆ.  ಸಹನೆಗಿಂತ ಮಿಗಿಲಾದ ಶಿಸ್ತಿನ ನಿಯಮವಿಲ್ಲ, ಸಹನೆಯು ತಪಗಳಲ್ಲೇ ಶ್ರೇಷ್ಠವಾದುದು. ಸಹನೆಗಿಂತ ಮಿಗಿಲಾದ ಶ್ರೇಷ್ಠ ಗುಣ ಇನ್ನೊಂದಿಲ್ಲ. ಯಾರ ಬಲವು ಸಹನೆಯೋ ಆತನೇ ಶ್ರೇಷ್ಠ. ಡಕಾಯಿತರು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿದರೂ, ಯಾರ ಮನಸ್ಸು ದ್ವೇಷ ಭಾವನೆಯನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲವೋ ಅವರು ಶ್ರೇಷ್ಠರು. ಕೋಪವನ್ನು ಜಯಿಸುವವರೇ ನಿಜವಾದ ವಿಜಯಿಗಳು. ಅದರ ಬದಲು […]

ಅಧ್ಯಾತ್ಮ ಡೈರಿ ~ ಮಾತು, ಮರು ಮಾತನ್ನು ಬಡಿದೆಬ್ಬಿಸುವಂತೆ ಇರಬಾರದು!

ಸ್ಪಂದನೆ ಮೌನವೂ ಆಗಬಹುದು. ಮತ್ತೊಂದು ಕ್ರಿಯೆಯಲ್ಲಿ ತೊಡಗಿಕೊಳ್ಳುವುದೂ ಆಗಬಹುದು. ಸ್ಪಂದನೆ, ಕೇಳಿಸಿಕೊಂಡ ಮಾತಿನ ಅರ್ಥಗ್ರಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವೂ ಆಗಬಹುದು. ಸಂಪೂರ್ಣ ಮಾತು ಕೇಳಿಸಿಕೊಂಡ ನಂತರ ಸ್ಪಂದನೆಯ ಸ್ವರೂಪ ನಿರ್ಧಾರಗೊಳ್ಳುವುದು. ಹಾಗೆಂದೇ ಬುದ್ಧ ಸಂಪೂರ್ಣ ಕೇಳಿಸಿಕೋ, ಆ ತಾಳ್ಮೆ ಬೆಳೆಸಿಕೋ ಅನ್ನೋದು ~ ಅಲಾವಿಕಾ ಕೇಳುವಿಕೆ ನಮ್ಮಲ್ಲಿ ಮೌನವನ್ನು ಹುಟ್ಟಿಸಬೇಕೇ ಹೊರತು ಮಾತನ್ನಲ್ಲ. ಹಾಗೆಯೇ ನಮ್ಮ ಮಾತು ಕೂಡ ಮೌನವನ್ನು ಸ್ಥಾಪಿಸಬೇಕೇ ಹೊರತು ಮರುಮಾತನ್ನು ಬಡಿದೆಬ್ಬಿಸುವಂತಲ್ಲ. ಆದರೆ ನಾವೀಗ ಮಾತಾಡಲೆಂದೇ ಕೇಳಿಸಿಕೊಳ್ಳತೊಡಗಿದ್ದೇವೆ ಮತ್ತು […]

ನಾಮರೂಪಗಳನು ದಾಟಿ…. | ಝೆನ್ ಪದ್ಯ

ಬುದ್ಧ ದಾರಿಯಲ್ಲಿ ಪಳಗಿ ನಾಮರೂಪಗಳಿಲ್ಲದೆ, ಇಲ್ಲದ ದಾರಿಯಲ್ಲಿ ನನ್ನ ಸಂಸಾರದ ಪಯಣ. ಬಂಧಿಸುವ ನಾಮ ರೂಪಗಳು ಗಗನ ಕುಸುಮಗಳು ನಾಮ ರೂಪಗಳ ದಾಟಿ ನಾನು, ಹುಟ್ಟು ಸಾವನೂ ತ್ಯಜಿಸುವೆನು. ಆಕರ : ಝೆನ್ ಕ್ಲಾಸಿಕ್ಸ್  | ಅನುವಾದ : ಕಿರಣ್ ಮಾಡಾಳು