ಸ್ವರ್ಗದಿಂದ ಭೂಮಿಗೆ ಬೆಂಕಿಯನ್ನು ಕದ್ದು ತಂದಿದ್ದು ಯಾರು ಗೊತ್ತಾ!?

ಪ್ರೊಮಿಥ್ಯೂಸ್, ಆ ಬೆಂಕಿಯನ್ನು ಕದ್ದು ತಂದು ಮನುಷ್ಯರಿಗೆ ನೀಡಲು ನಿರ್ಧರಿಸಿದ. ಒಮ್ಮೆ ಅದು ಮನುಷ್ಯರಿಗೆ ಸಿಕ್ಕಿಬಿಟ್ಟರೆ ಯಾರೂ ಅದನ್ನು ಮರಳಿ ಪಡೆಯಲಾರರು, ಸ್ವತಃ ಸ್ಯೂಸ್ ಕೂಡ! ಆದ್ದರಿಂದ ದೃಢ ನಿರ್ಧಾರ ಮಾಡಿದ ಪ್ರೊಮಿಥ್ಯೂಸ್, ಸ್ವರ್ಗವನ್ನು ಹೊಕ್ಕು, ಅಡಗಿಸಿಟ್ಟಿದ್ದ ಬೆಂಕಿಯ ಜ್ವಾಲೆಯೊಂದನ್ನು ಕದ್ದು, ಅದನ್ನು ಬಳ್ಳಿಯಲ್ಲಿ ಬಚ್ಚಿಟ್ಟುಕೊಂಡು ಭೂಮಿಗೆ ತಂದು ಮನುಷ್ಯರಿಗೆ ಕೊಟ್ಟ ಅನ್ನುತ್ತದೆ ಗ್ರೀಕ್ ಪುರಾಣ.  ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಪ್ರೊಮಿಥ್ಯೂಸ್ ಗ್ರೀಕ್ ಪೌರಾಣಿಕ ವ್ಯಕ್ತಿಗಳಲ್ಲೇ ಅತ್ಯಂತ ಪ್ರಮುಖನಾದವನು. ದೂರದೃಷ್ಟಿಯುಳ್ಳ ಈತನ ಹೆಸರಿನ […]

ದುರ್ಬಲರಿಗೆ ಗೆಳೆಯರು ಯಾರಿದ್ದಾರು!? : ಬೆಳಗಿನ ಹೊಳಹು

ವನಾನಿ ದಹತೋ ವಹ್ನೇ ಸಖಾ ಭವತಿ ಮಾರುತಃ ಸ ಏವ ದೀಪ ನಾಶಾಯ ಕೃಶೇ ಕಸ್ಯಸ್ತಿ ಸಹೃದಮ್!? || ಸುಭಾಷಿತ ಮಂಜರಿ || ಅರ್ಥ : ಕಾಡ್ಗಿಚ್ಚಿನ ಬೆಂಕಿಗೆ ಮತ್ತಷ್ಟು ಬಲ ತುಂಬುವ ಗಾಳಿಯೇ ಹಣತೆಯ ಕಿರು ದೀಪವನ್ನು ಆರಿಸಿಬಿಡುತ್ತದೆ. ದುರ್ಬಲರಿಗೆ ಗೆಳೆಯರಾದರೂ ಯಾರಿದ್ದಾರು!? ತಾತ್ಪರ್ಯ : ಕಾಡ್ಗಿಚ್ಚು ಗಾಳಿ ಬೀಸಿದಂತೆಲ್ಲ ಧಗಧಗಿಸಿ ಉರಿಯುತ್ತದೆ. ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಗಾಳಿ ಅದನ್ನು ಇತರೆಡೆಗೂ ಹರಡಲು ಸಹಕರಿಸುತ್ತದೆ. ಆದರೆ, ಚಿಕ್ಕದೊಂದು ಹಣತೆಯಲ್ಲಿ ದೀಪ ಹಚ್ಚಿಟ್ಟಾಗ ಬೀಸುವ ಗಾಳಿಯು ಅದು […]