ಮಾಸ್ಟರ್ ಬಾಂಕಿಯ ಬೆಕ್ಕು ಮತ್ತು ಇಲಿ : ಝೆನ್ ಕಥೆ

ಝೆನ್ ಗುರು ಬಾಂಕಿ ಒಂದು ಬೆಕ್ಕು ಸಾಕಿದ್ದ. ಒಮ್ಮೆ ಆಶ್ರಮದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೆಕ್ಕಿಗೆ ಸಿಕ್ಕಾಪಟ್ಟೆ ಹಸಿವಾಯ್ತು. ಮನೆ ಎಲ್ಲ ಹುಡುಕಾಡಿದ ಬೆಕ್ಕಿನ ಕಣ್ಣಿಗೆ ಅಂಗಳದಲ್ಲಿ ಓಡಾಡುತ್ತಿದ್ದ ಇಲಿ ಕಾಣಿಸಿಕೊಂಡಿತು. ಕೂಡಲೆ ಇಲಿಯ ಮೇಲೆ ದಾಳಿ ಮಾಡಿದ ಬೆಕ್ಕು ಅದನ್ನು ಅಟ್ಟಿಸಿಕೊಂಡು ಹೋಯಿತು. ಬೆಕ್ಕು ಎಷ್ಟು ಜೋರಾಗಿ ಓಡಿದರೂ ಇಲಿ ಸಿಗಲೆ ಇಲ್ಲ. ಸುಮಾರು ಗಂಟೆಗಳ ಪ್ರಯತ್ನದ ನಂತರ ಬೆಕ್ಕು ಕೈಚೆಲ್ಲಿತು. ಸಂಜೆ ಗುರು ಬಾಂಕಿ ವಾಪಸ್ ಆಶ್ರಮಕ್ಕೆ ಬಂದಾಗ, ಬೆಕ್ಕು ಬಾಂಕಿಯ ಹತ್ತಿರ ಹೋಗಿ […]

ಬೆಕ್ಕನ್ನು ಕಂಬಕ್ಕೆ ಕಟ್ಟಿ ಹಾಕುವುದರ ಧಾರ್ಮಿಕ ಮಹತ್ವ : ಝೆನ್ ಕಥೆ

ಒಂದು ಆಶ್ರಮದಲ್ಲಿ, ಪ್ರತೀ ಸಂಜೆ ಅಧ್ಯಾತ್ಮಿಕ ಗುರುಗಳು ತಮ್ಮ ಶಿಷ್ಯರೊಂದಿಗೆ ಧ್ಯಾನಕ್ಕೆ ಕೂರುತ್ತಿದ್ದಂತೆಯೇ, ಅವರೇ ಸಾಕಿಕೊಂಡಿದ್ದ ಬೆಕ್ಕೊಂದು ತುಂಬಾ ಸದ್ದು ಮಾಡುತ್ತಾ, ಓಡಾಡುತ್ತ, ಧ್ಯಾನಕ್ಕೆ ಅಡಚಣಿ ಉಂಟು ಮಾಡುತ್ತಿತ್ತು. ಇದರಿಂದ ಬೇಸತ್ತ ಗುರುಗಳು ಆ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕುವಂತೆ ಶಿಷ್ಯರಿಗೆ ಆಜ್ಞಾಪಿಸಿದರು. ಆನಂತರ ಪ್ರತೀ ಸಂಜೆ ಧ್ಯಾನದ ಸಮಯಕ್ಕೆ ಸರಿಯಾಗಿ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕಲಾಗುತ್ತಿತ್ತು. ಕೆಲ ವರ್ಷಗಳಾದ ಮೇಲೆ ಗುರುಗಳು ತೀರಿ ಹೋದರು. ಆದರೂ ಬೆಕ್ಕನ್ನು ಪ್ರತೀ ಸಂಜೆ ಕಟ್ಟಿ ಹಾಕುವ […]

ಪಾನೀಯದ ಬುರುಡೆಯನ್ನು ಖಾಲಿ ಮಾಡಿಯೇ ಯಾಕಿಡಬೇಕು?

ರಾ-ಉಮ್ ಆಶ್ರಮದಲ್ಲಿ ಒಂದು ಕಠಿಣ ನಿಯಮವಿತ್ತು. ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ಬುರುಡೆಗೆ ಪಾನೀಯವನ್ನು ತುಂಬಿಸಿದರೆ, ಅದನ್ನು ಸಂಪೂರ್ಣವಾಗಿ ಮುಗಿಸಿದ ನಂತರವಷ್ಟೇ ಅದನ್ನು ಗೂಡಿನಲ್ಲಿ ಇಡಬಹುದಿತ್ತು. ಅಲ್ಲಿಯ ತನಕವೂ ಬುರುಡೆಯನ್ನು ಕಾಪಾಡುವುದು ಕಡ್ಡಾಯ. ಇದನ್ನು ಎಲ್ಲರೂ ಸಹಜವಾಗಿಯೇ ಮಾಡುತ್ತಿದ್ದುದರಿಂದ ಈ ನಿಯಮ ಯಾಕಿದೆ ಎಂಬ ಪ್ರಶ್ನೆಯನ್ನು ಯಾರೂ ಕೇಳಿರಲಿಲ್ಲ. ಉತ್ತರದ ಹಿಮ ಪ್ರದೇಶದ ಊರೊಂದರಿಂದ ಬಂದು ಆಶ್ರಮ ಸೇರಿದ್ದ ಶಿಷ್ಯನಿಗೆ ಈ ನಿಯಮವೇಕಿದೆ ಎಂದು ಅರ್ಥವಾಗಿರಲಿಲ್ಲ. ಉಳಿದವರು ಮಾಡುವುದನ್ನು ನೋಡಿ ತಾನೂ ಅದನ್ನು ಅನುಸರಿಸಿದ. ಆದರೆ […]