ನಸ್ರುದ್ದೀನನ ಕಥೆ : ತಪ್ಪು ಬದಿಗೆ ಬೆಣ್ಣೆ!

ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ ಕೂಡಾ ಉತ್ಸಾಹದಲ್ಲಿ ಏನೋ ಒಂದು ಹೇಳಿಬಿಡುತ್ತಿದ್ದ. ಆ ದಿನ ನಸ್ರುದ್ದೀನ್ ಮಾತನಾಡುತ್ತಾ, “ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ” ಎಂದ. ಜನರೆಲ್ಲಾ ಅತ್ಯಂತ ಆಸಕ್ತಿಯಿಂದ ಕೇಳಿಕೊಂಡರು. ರೊಟ್ಟಿಯನ್ನು ಎಸೆದಂತೆಯೂ, ಬೆಣ್ಣೆ […]

ಪ್ರಶ್ನೆ ಕೇಳುವ ಪ್ರಕ್ರಿಯೆ

ತಿಳಿಯುವಿಕೆ ಎಂಬುದು ಒಂದು ಪ್ರಕ್ರಿಯೆ. ಎಲ್ಲಾ ಗ್ರಂಥಗಳು, ತರ್ಕಗಳು ಮತ್ತು ವಿಚಾರಗಳು ಹುಟ್ಟುವುದು ಈ ತಿಳಿಯುವಿಕೆಯ ಪ್ರಕ್ರಿಯೆಯಲ್ಲಿ. ~ ಅಚಿಂತ್ಯ ಚೈತನ್ಯ ಮನುಷ್ಯ ಎದುರಿಸುವ ಬಹುಮುಖ್ಯ ಪ್ರಶ್ನೆ ಯಾವುದು? ಇದಕ್ಕೆ ಇರುವುದು ಒಂದೇ ಉತ್ತರ. ಇದನ್ನು ಸಕರಾತ್ಮಕವಾಗಿ ಮಂಡಿಸ ಹೊರಟರೆ ಆ ಪ್ರಶ್ನೆ ‘ಏನು ಮಾಡಬೇಕು?’ ಎಂದಿರುತ್ತದೆ. ಇದನ್ನೇ ನಕರಾತ್ಮಕವಾಗಿ ಮಂಡಿಸಿದರೆ ‘ಏನು ಮಾಡಬಾರದು?’ ಎಂದಾಗುತ್ತದೆ. ಎರಡಲ್ಲದ ಈ ಒಂದು ಪ್ರಶ್ನೆಯ ಉತ್ತರ ಅಥವಾ ಎರಡಾಗಿ ಕಾಣಿಸುವ ಈ ಒಂದು ಪ್ರಶ್ನೆಯ ಉತ್ತರ ನಮ್ಮ ಅನುಕ್ಷಣದ ನಿರ್ಧಾರಗಳನ್ನು ಪ್ರೇರೇಪಿಸುತ್ತದೆ. ನಾವು ಅಧ್ಯಾತ್ಮ ಎಂದು ಕರೆಯುವ ಪರಿಕಲ್ಪನೆಯನ್ನು […]