ರಾಜಯೋಗ ಸೂಚಿಸುವ ನಾಲ್ಕು ಹಂತಗಳ ಧ್ಯಾನ ವಿಧಾನ

ರಾಜಯೋಗವು ನಾಲ್ಕು ಹಂತಗಳಲ್ಲಿ ಧ್ಯಾನ ವಿಧಾನವನ್ನು ಸೂಚಿಸುತ್ತದೆ. ಮೊದಲನೆಯ ಹಂತ : ಸಹಜವಾಗಿ ಉಸಿರಾಡಿ. ಉಸಿರನ್ನು ಒಳಗೆಳೆದುಕೊಳ್ಳುವಾಗ ಆರೋಗ್ಯ ಮತ್ತು ಶಾಂತಿಯನ್ನು ಒಳಗೆ ಸೆಳೆದುಕೊಳ್ಳುತ್ತಿದ್ದೇನೆಂದು ಭಾವಿಸಿ. ಉಸಿರು ಹೊರಬಿಡುವಾಗ ನಿಮ್ಮ ದೋಷ, ನ್ಯೂನತೆಗಳೆಲ್ಲವನ್ನೂ ಹೊರಹಾಕುತ್ತಿರುವುದಾಗಿ ಭಾವಿಸಿ. ಎರಡನೆಯ ಹಂತ : ಕಣ್ಣುಗಳನ್ನು ಮುಚ್ಚಿ, ನಿಮ್ಮ ಹೃದಯಭಾಗದಲ್ಲಿ ಪ್ರಕಾಶಮಾನವಾದ ಬೆಳಕು ಇದೆಯೆಂದು ಭಾವಿಸಿಕೊಳ್ಳಿ. ಅಂತೆಯೇ ನಿಮ್ಮ ದೇಹವು ಪಾರದರ್ಶಕವಾಗಿದೆಯೆಂದು ಕಲ್ಪಿಸಿಕೊಳ್ಳಿ. ನಿಮ್ಮ ದೇಹದೊಳಗೆ ಕಾಣುತ್ತಿರುವ ಬೆಳಕು ನಿಸ್ವಾರ್ಥ ಪ್ರೇಮದ ಬೆಳಕು. ಇದು ಎಲ್ಲೆಡೆಗೂ ಹರಡಿ ಪ್ರಪಂಚದ ಎಲ್ಲರನ್ನೂ ಅದು […]