ಕಡಲ ತಡಿಯಲ್ಲಿ ಮೂಡಿದ್ದ ಒಂದು ಜೊತೆ ಹೆಜ್ಜೆ ಗುರುತು ಯಾರದ್ದು? : ಭಕ್ತ ಮತ್ತು ಭಗವಂತನ ಸಂವಾದ

“ಕಡಲ ತಡಿಯಲ್ಲಿ  ಒಬ್ಬರದೇ ಹೆಜ್ಜೆ ಗುರುತಿದೆ… ನನ್ನ ಕಷ್ಟದ ಸಮಯಗಳಲ್ಲಿ ನೀನು ಎಲ್ಲಿದ್ದೆ?” ಎಂದು ಭಕ್ತ ಪ್ರಶ್ನಿಸಿದಾಗ ಭಗವಂತ ಕೊಟ್ಟ ಉತ್ತರವೇನು ಗೊತ್ತೆ? ಒಂದು ರಾತ್ರಿ ಭಕ್ತನೊಬ್ಬ ಸಮುದ್ರ ತೀರದಲ್ಲಿ ತಾನು ಭಗವಂತನೊಡನೆ ವಿಹರಿಸುತ್ತಿರುವಂತೆ ಕನಸು ಕಂಡ. ಆಕಾಶದ ಪರದೆಯಲ್ಲಿ ಥಟ್ಟನೆ ತನ್ನ ಹಿಂದಿನ ಜೀವನದ ದೃಶ್ಯಗಳೆಲ್ಲ ಚಲನಚಿತ್ರದಂತೆ ಮೂಡಲಾರಂಭಿಸಿದವು. ಪ್ರತಿಯೊಂದು ದೃಶ್ಯದಲ್ಲೂ ಎರಡು ಜೊತೆ ಹೆಜ್ಜೆ ಗುರುತಗಳು ಇದ್ದವು. ಒಂದು ತನ್ನದು ಮತ್ತೊಂದು ಭಗವಂತನದು. ಜೀವನದ ಕೆಲವು ದೃಶ್ಯಗಳಲ್ಲಿ ಒಂದೇ ಜೊತೆ ಹೆಜ್ಜೆ ಗುರುತಗಳಿದ್ದವು. ಅವು ಭಕ್ತನ […]