ಇಬ್ನ್ ಅರಬಿ ಹೇಳಿದ್ದು : ಅರಳಿಮರ POSTER

“ಭಗವಂತನು ಕಲ್ಲಿನಲ್ಲಿ ನಿದ್ರಿಸುತ್ತಾನೆ, ಸಸ್ಯಗಳಲ್ಲಿ ಕನಸುತ್ತಾನೆ, ಪ್ರಾಣಿಗಳಲ್ಲಿ ಮಿಸುಕಾಡುತ್ತಾನೆ ಮತ್ತು ಮನುಷ್ಯನಲ್ಲಿ ಎಚ್ಚರಾಗುತ್ತಾನೆ” ಅನ್ನುತ್ತಾನೆ ಸೂಫಿ ಇಬ್ನ್ ಅರಬಿ.  ಸೃಷ್ಟಿಯ ಪ್ರತಿಯೊಂದು ಜಡ – ಚಲನಶೀಲ ವಸ್ತುವಿನಲ್ಲೂ ಪರಮ ಅಸ್ತಿತ್ವದ ಚೈತನ್ಯವಿರುತ್ತದೆ. ಅದು ಯಾವ ವಸ್ತುವನ್ನು ಎಷ್ಟು ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತದೆ ಅನ್ನುವುದರ ಮೇಲೆ ಆಯಾ ವಸ್ತುವಿನ ವಿಕಸನ ನಿರ್ಧಾರಗೊಳ್ಳುತ್ತದೆ ಅನ್ನುವುದು ಇಬ್ನ್ ಅರಬಿಯ ಹೇಳಿಕೆಯ ವಿಸ್ತೃತಾರ್ಥ. 

ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ ಬಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. […]

ಯಾರು ಯಾರಿಗೆ ಕನ್ನಡಿ…!? : ಅರಳಿಮರ POSTER

“ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ” ಅನ್ನುತ್ತದೆ ಸೂಫಿ ಚಿಂತನೆ. ಅಧ್ಯಾತ್ಮ ಯಾನಿಯು ಭಗವಂತನನ್ನು ಅರಿಯಬೇಕೆಂದರೆ ತನ್ನ ಹೃದಯದೊಳಕ್ಕೇ ಅವನನ್ನು ಅರಸಬೇಕು. ಬೆಳಕನ್ನು ಪಡೆಯಬೇಕೆಂದರೆ ತನ್ನ ಹೃದಯದಾಳಕ್ಕೆ ಧುಮುಕಬೇಕು. ಏಕೆಂದರೆ ನಮ್ಮ ಹೃದಯ ಜಗತ್ತಿನ ಕನ್ನಡಿಯಾಗಿದೆ; ಮತ್ತು ಜಗತ್ತು ಭಗವಂತನ ಕನ್ನಡಿಯಾಗಿದೆ. ನಮ್ಮೊಳಗೆ ಹೊಕ್ಕು ಹುಡುಕಿದರೆ ನಾವು ಯಾವತ್ತೂ ನಂದದ ಬೆಳಕನ್ನು ಹೊಂದುತ್ತೇವೆ, ಭಗವಂತನನ್ನು ಪಡೆಯುತ್ತೇವೆ – ಇದು ಮೇಲಿನ ಸೂಫಿ ಚಿಂತನೆಯ ವಿಸ್ತೃತಾರ್ಥ.  ಸೃಷ್ಟಿ ಮತ್ತು ಭಗವಂತ ಪರಸ್ಪರ ಎದುರುಬದುರಿಟ್ಟ ಕನ್ನಡಿಗಳಂತೆ. ಒಬ್ಬರೊಬ್ಬರ […]

ಅಧ್ಯಾತ್ಮ ಡೈರಿ : ಎಷ್ಟು ಬೆರೆತರೂ ಒಂದಾಗಲು ಸಾಧ್ಯವಾಗದು

ನಮ್ಮ ಬದುಕನ್ನು ನಾವೇ ಬದುಕಬೇಕು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ. ನಮ್ಮ ಆಲೋಚನೆಗಳು, ಭಾವನೆಗಳು ಒಂದಾಗಬಹುದು. ಒಂದೇ ರೀತಿ ನಾವು ಯೋಚಿಸಲು, ಪರಸ್ಪರ ಕಾಳಜಿ ತೋರಲು ಸಾಧ್ಯವಾಗಬಹುದು. ಆದರೆ ನಾವು ಎರಡು ದೇಹಗಳಾಗಿರುತ್ತೇವೆ. ನಮ್ಮನಮ್ಮ ದೇಹಗಳ ಒಳಗೆ ನಮ್ಮ ನಮ್ಮ ಆತ್ಮವಿರುತ್ತದೆ ~ ಅಲಾವಿಕಾ “ಉಸಿರೇ ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತದೆ. ಇನ್ನು, ಪ್ರೀತಿಪಾತ್ರರು ತೊರೆದು ಹೋಗುವುದೇನು ಮಹಾ?” ಎಂದು ಕೇಳುತ್ತದೆ ಒಂದು […]